ವಿಷಯಕ್ಕೆ ಹೋಗು

ಪುಟ:Epigraphia carnatica - Volume I.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ದೇ. ಜವರೇಗೌಡ ಅವರನ್ನು ನಾನು ಪ್ರತ್ಯೇಕ ವಾಗಿ ಸ್ಮರಿಸಬೇಕು. ಕನ್ನಡ ಅಧ್ಯಯನ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಹಾಗೂ ಈ ಯೋಜನೆ ಕಾರರೂಪಕ್ಕೆ ಬರುವಲ್ಲಿ ಅವರು ಮೊದಲಿನಿಂದಲೂ ನನಗೆ ಬೆಂಬಲ ಕೊಟ್ಟಿದ್ದಾರೆ. ಅವರ ಧೈರ್ಯ, ಭರವಸೆ ಇಲ್ಲದಿದ್ದಿದ್ದರೆ ಬಹುಶಃ ಇಂಥದೊಂದು ದೊಡ್ಡ ಯೋಜನೆಯನ್ನು ನಿರ್ವಹಿಸುವ ಜವಾಬ್ಬಾರಿಗೆ ನಾನು ಮುಂದಾಗುತ್ತಿರಲಿಲ್ಲ. ವಿಶ್ವವಿದ್ಯಾ ನಿಲಯದ ಅಭಿವೃದ್ಧಿಯಲ್ಲಿ ಕನ್ನಡದ ಕೆಲಸಕಾರ್ಯಗಳಲ್ಲಿ ತನಗೆ ಸಹಜವಾಗಿರುವ ಉತ್ಸಾಹ ಅಭಿಮಾನಗಳನ್ನು ಅವರು ಈ ಯೋಜನೆಯ ಬಗೆಗೂ ತೋರಿಸಿದ್ದಾರೆ. ಅವರನ್ನು ನಾನು ತುಂಬ ಕೃತಜ್ಞತೆಯಿಂದ ನೆನೆಯುತ್ತೇನೆ. ಇಂಥದೊಂದು ಯೋಜನೆಯ ಯಶಸ್ಸೆಲ್ಲ ಅದರಲ್ಲಿ ಪಾಲುಗೊಂಡ ಕೆಲಸಗಾರರನ್ನು ಅವಲಂಬಿಸಿರುತ್ತದೆ. ಶಾಸನ ಶಾಸ್ತ್ರದಂಥ ತಾಂತ್ರಿಕ ವಿಷಯದ ಕೆಲಸಗಳಿಗೆ ಪರಿಣತರು ದೊರಕುವುದು ಕಷ್ಟ. ಅದೃಷ್ಟವಶಾತ್ 'ಎಪಿಗ್ರಾಫಿಯ ಕರ್ನಾಟಕ 'ದ ಪರಿಷ್ಕರಣ ಹಾಗೂ ಪುನರ್ಮುದ್ರಣ ಯೋಜನೆಗೆ ತಜ್ಞರ ದಕ್ಷ ನೆರವು ದೊರೆತಿದೆ. ಅದಕ್ಕಾಗಿ ನಾನು ತುಂಬ ಸಂತೊಷಿಸುತ್ತೆನೆ. ಶ್ರೀ ಎಂ. ಹನುಮಂತರಾವ್ ಅವರು ಉಪಶಾಸನತಜ್ಞರಾಗಿ ಮೊದಲು ಈ ಯೋಜನೆಯ ಕೆಲಸವನ್ನು ಆರಂಭಿಸಿದರು. ಅವರು ರಾಜ್ಯದ ಪುರಾತತ್ವ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ತಮ್ಮ ಬದುಕಿನ ಅನೇಕ ವರ್ಷಗಳನ್ನು ಶಾಸನಗಳ ಮಧ್ಯೆ ಕಳೆದವರು. ಶ್ರೀ ಎಚ್. ಎಂ. ನಾಗರಾಜರಾವ್ ಮತ್ತು ಶ್ರೀ ಸೀತಾರಾಮ ಜಾಗೀರ್‌ದಾರ್‌ ಎಂಬ ಇಬ್ಬರು ತರುಣ ವಿದ್ವಾಂಸರು ಶಾಸನ ಸಹಾಯಕರಾಗಿ ಬಂದರು. ಈಚೆಗಷ್ಟೆ ಶಾಸನತಜ್ಞರಾಗಿ ಡಾ. ಬಾ. ರಾ. ಗೋಪಾಲ್ ಅವರ ಸೇವೆಯನ್ನು ಪಡೆಯುವುದು ಸಾಧ್ಯವಾಯಿತು. ಡಾ. ಗೋಪಾಲ್ ಭಾರತದ ಶಾಸನ ಇಲಾಖೆಯಲ್ಲಿ ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ್ದಾರೆ; ಅನೇಕ ಗ್ರಂಥಗಳನ್ನೂ , ಲೇಖನಗಳನ್ನೂ ಪ್ರಕಟಿಸಿದ್ದಾರೆ; ಶಾಸನ ಸಂಪುಟಗಳನ್ನು ಸಂಪಾದಿಸಿದ್ದಾರೆ. ಇವರೆಲ್ಲರ ನೆರವಿನಿಂದ ಈ ಯೋಜನೆ ಪೂರ್ಣವಾಗಿ ಮುಂದಿನ ನಾಲೈದು ವರ್ಷಗಳಲ್ಲಿ ಮುಗಿಯುತ್ತದೆ ಎಂಬುದರಲ್ಲಿ ನನಗೆ ವಿಶ್ವಾಸವಿದೆ. ಪ್ರಕೃತ ಸಂಪುಟದ ಬಹು ಪಾಲು ಕೆಲಸವನ್ನು ಶ್ರೀ ಹನುಮಂತರಾಯರು ನಿರ್ವಹಿಸಿದ್ದಾರೆ. ಪಾಠಗಳ ಅಂತಿಮ ಪರಿಷ್ಕರಣ ಅವರದ್ದೆ, ಟಿಪ್ಪಣಿಗಳನ್ನು ಬರೆದವರೂ ಅವರೆ. ಪೀಠಿಕೆ ಹಾಗೂ ಅನುವಾದಗಳ ಮೊದಲ ಕರಡು ಗಳನ್ನು ಅವರು ಸಿದ್ದಪಡಿಸಿದ್ದರು. ಅವನ್ನು ಡಾ. ಗೋಪಾಲ್ ಅವರು ಪರಿಷ್ಕರಿಸಿ ಅಂತಿಮ ಸ್ವರೂಪಕೊಟ್ಟಿದ್ದಾರೆ. ಈ ಸಹೋದ್ಯೋಗಿ ಮಿತ್ರರೆಲ್ಲ ತುಂಬ ವಿಶ್ವಾಸ ಅಭಿಮಾನಗಳಿಂದ ಈ ಕೆಲಸದಲ್ಲಿ ಪಾಲುಗೊಂಡಿದ್ದಾರೆ. ಅವರ ಶ್ರದ್ದೆ, ನಿಷ್ಠೆ, ದುಡಿಮೆಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗುತ್ತವೆಂಬುದರಲ್ಲಿ ನನಗೆ ನಂಬುಗೆಯಿದೆ. ಅವರನ್ನು ನೆನಸುವುದು ನನಗೆ ಯಾವಾಗಲೂ ಪ್ರಿಯವಾದ ಕೆಲಸ. - ಈ ಮಹತ್ಕಾರದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಗಳಾಗಿರುವ ಎಲ್ಲರಿಗೂ ಇನ್ನೊಮ್ಮೆ ನನ್ನ ಕೃತಜ್ಞತೆ ಗಳನ್ನರ್ಪಿಸುತ್ತೇನೆ. ಕನ್ನಡ ಅಧ್ಯಯನ ಸಂಸ್ಥೆ ಮೈಸೂರು, ಆಗಸ್ಟ್ ೧, ೧೯೭೨ ಹಾ. ಮಾ. ನಾಯಕ ನಿರ್ದೇಶಕ