ಪುಟ:Evaluating Wikipedia brochure.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವಿಕಿಪೀಡಿಯ ವಿಶ್ವದ ಅತಿ ದೊಡ್ಡ ವಿಶ್ವಕೋಶವಾಗಿದೆ.


ವಿಕಿಪೀಡಿಯ ನೂರಾರು ಭಾಷೆಗಳಲ್ಲಿ ಅಸ್ತಿತ್ವದಲ್ಲಿದೆ. ಆದರೆ ಇದು ಸಾಮಾನ್ಯ ವಿಶ್ವಕೋಶಗಳಿಂತ ಸಾಂಪ್ರದಾಯಿಕವಾಗಿ ಭಿನ್ನವಾಗಿದೆ. ವಿಕಿಪೀಡಿಯವು ನೇರ ಮತ್ತು ತೆರೆದ ಶೈಲಿಯ ಸಂಪಾದನೆಯನ್ನು ಅನುಸರಿಸುತ್ತದೆ. ಇಲ್ಲಿ ಯಾರು ಬೇಕಾದರು ಲೇಖನಗಳನ್ನು ಬರೆಯುವ ಅಥವಾ ಬದಲಾವಣೆ ಮಾಡುವ ಮುಖಾಂತರ ನೇರವಾಗಿ ತಮ್ಮ ಕೊಡುಗೆಗಳನ್ನು ನೀಡಬಹುದಾಗಿದೆ. ಅಂದರೆ ಇಲ್ಲಿನ ಲೇಖನಗಳ ಗುಣಮಟ್ಟದಲ್ಲಿ ವ್ಯತ್ಯಾಸಗಳಿರುವ ಸಾಧ್ಯತೆ ಇರುತ್ತದೆ. ನಿಮ್ಮಂತಹ ಓದುಗರು ಇಲ್ಲಿನ ಲೇಖನಗಳು ಉತ್ತಮವಾಗಿವೆಯೋ? ಅಥವಾ ಕಳಪೆ ಗುಣಮಟ್ಟದ್ದೇ? ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ವಿಕಿಪೀಡಿಯ ಎಂದರೇನು?


ವಿಕಿಪೀಡಿಯ ಒಂದು ನೇರ ಸಂದರ್ಶನದಂತೆ ಪ್ರಾಥಮಿಕ ಮೂಲವಲ್ಲ ಅಂತೆಯೇ, ಒಂದು ಸಂಶೋಧನಾ ಪ್ರಬಂಧದಂತೆ ಅಥವಾ ವಾರ್ತಾಪ್ರಸಾರದಂತೆ ದ್ವಿತೀಯ ಮೂಲದ್ದು ಕೂಡ ಅಲ್ಲ. ವಿಕಿಪೀಡಿಯ ಎಂಬುದೊಂದು ವಿಶ್ವಕೋಶ. ಇದು ಪ್ರಾಥಮಿಕ ಮತ್ತು ದ್ವಿತೀಯ ಮೂಲಗಳೆರಡರಿಂದಲೂ ಸಂಗ್ರಹಿಸಲ್ಪಟ್ಟ ಮಾಹಿತಿಯಾಗಿರುತ್ತದೆ. ಇದು ಸುಸಜ್ಜಿತವಾದ ಲೇಖನಗಳ ಸಂಗ್ರಹವಾಗಿರುತ್ತದೆ. ಬೇರೆಲ್ಲಾ ವಿಶ್ವಕೋಶಗಳಂತೆ, ವಿಕಿಪೀಡಿಯವನ್ನು ಕೂಡ ಒಂದು ಆರಂಭದ ಬಿಂದುವನ್ನಾಗಿ ಬಳಸಬಹುದಾಗಿದೆ. ಅದು ಒಂದು ವಿಷಯದ ಕುರಿತಾದಂತೆ ವಿಶಾಲ ದೃಷ್ಟಿಕೋನವನ್ನು ಹಾಗೂ ಉತ್ತಮ ಗುಣಮಟ್ಟದ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ಆಕರಗಳನ್ನು ಕಂಡುಕೊಳ್ಳಲು ನಿಮಗೆ ಸಹಾಯ ನೀಡುತ್ತದೆ.


ವಿಕಿಪೀಡಿಯವು ಈ ರೀತಿಯಾಗಿ ನಿಮಗೆ ಸಹಕರಿಸುತ್ತದೆ :

  • ಒಂದು ವಿಷಯದ ಕುರಿತಾಗಿ ವಿಹಂಗಮ ದೃಷ್ಟಿ ಪಡೆಯಲು.
  • ಒಂದು ವಿಷಯದ ಕುರಿತಾಗಿ ಇರುವ ಇತರೆ ಸೂಚಿತ ವಿಷಯಗಳ ಪಟ್ಟಿಯನ್ನು ಪಡೆಯಲು ಸಹಕರಿಸುತ್ತದೆ.
  • ಸಂಬಂಧಪಟ್ಟ ಬೇರೆ ವಿಷಯಗಳನ್ನು ಶೋಧಿಸಲು ಸಹಕರಿಸುತ್ತದೆ.

ವಿಕಿಪೀಡಿಯ ಲೇಖನಗಳು ಹೇಗೆ ರಚಿತವಾಗುತ್ತವೆ?

ವಿಕಿಪೀಡಿಯದ ಲೇಖನಗಳೆಲ್ಲವೂ ಒಮ್ಮೆಲೇ ರಚನೆಯಾದವುಗಳಲ್ಲ. ಯಾವಾಗಲೂ ಬೇರೆ ಬೇರೆ ವಿಕಿಪೀಡಿಯ ಸಂಪಾದಕರಿಂದ ಲೇಖನಗಳಿಗೆ ಹಲವಾರು ಬದಲಾವಣೆಗಳನ್ನು ತರುವ ಮೂಲಕ ಅವು ನಿಧಾನವಾಗಿ ಬೆಳೆಯುತ್ತಿರುತ್ತವೆ. ಒಬ್ಬ ಸಂಪಾದಕ ಒಂದು ಲೇಖನವನ್ನು ಆರಂಭಿಸಬಹುದು ಮತ್ತೋರ್ವ ಅದಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸಬಹುದು ಹಾಗೆಯೇ ಮತ್ತೊಬ್ಬರು ಅದನ್ನು ಮರುಸಂಯೋಜನೆ ಮಾಡಿ ವಿಷಯವನ್ನು ಸುಲಭವಾಗಿ ಓದಬಲ್ಲಂತೆ ಸುಧಾರಿಸಬಹುದು. ಈ ಲೇಖನಗಳ ಮೇಲೆ ಯಾರ ಮಾಲಿಕತ್ವವೂ ಇರುವುದಿಲ್ಲ. ಆದರೆ ಅವರು ಆ ಲೇಖನಗಳ ಮೇಲೆ ಅಪಾರ ಕಾಲವನ್ನು ವ್ಯಯಿಸಿರುವುದರಿಂದ ಅದರ ಕುರಿತಾಗಿ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ನೀವು ಮೇಲೆ ಕಾಣುವ ಇತಿಹಾಸವನ್ನು ನೋಡಿ ಕೊಂಡಿಯನ್ನು ಕ್ಲಿಕ್ಕಿಸುವ ಮೂಲಕ ಪ್ರತಿಯೊಂದು ಲೇಖನಗಳು ಹೇಗೆ ನಿಧಾನವಾಗಿ ಹಂತ ಹಂತವಾಗಿ ವಿಕಸಿತವಾಗಿವೆ ಎಂಬುದನ್ನು ಕಾಣಬಹುದಾಗಿದೆ. ಅಲ್ಲಿ ನೀವು ಪ್ರತಿಯೊಂದು ಲೇಖನಗಳ ಹಳೆಯ ಪ್ರತಿಗಳನ್ನು ಕಾಣಬಹುದಾಗಿದೆ.