ಪುಟ:Evaluating Wikipedia brochure.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಡಿಮೆ ಗುಣಮಟ್ಟದ ಲೇಖನಗಳು ಹೊಂದಿರುವ ಅಂಶಗಳು :

ಈ ಕೆಳಗಿನ ಅಂಶಗಳಲ್ಲಿ ಯಾವುದಾದರೂ 2 ಅಂಶಗಳು ಒಂದು ಲೇಖನದಲ್ಲಿ ಕಂಡು ಬಂದರೂ ನೀವು ಸರಿಯಾದ ಮೂಲವನ್ನು ಶೋಧಿಸಿ ಅದನ್ನು ಸರಿಪಡಿಸುವುದು.

ಲೇಖನದ ಆರಂಭದಲ್ಲಿಯೇ ಕಡಿಮೆ ಗುಣಮಟ್ಟದ ಚಿಹ್ನೆಯಿರುವುದು.

ಲೇಖನವೊಂದರಲ್ಲಿ ಹಲವು ಭಾಷಾ ಸಮಸ್ಯೆಗಳಿರುತ್ತವೆ. ಅದರಲ್ಲಿಯೂ ಲೇಖನದ ಮುಖ್ಯವಾಹಿನಿಯಲ್ಲಿರುವ ಭಾಷಾ ಸಮಸ್ಯೆಯು ಸಂಪೂರ್ಣ ಲೇಖನದ ಸಮಸ್ಯೆಯಾಗಿಬಿಡುತ್ತದೆ.

ಸರಿಯಾದ ಆಧಾರಗಳಿಲ್ಲದ ಅಭಿಪ್ರಾಯಗಳು ಮತ್ತು ವಾಕ್ಯಗಳು ಕೂಡ ಸಮಸ್ಯೆಗಳಾಗಿದ್ದು ಅವುಗಳನ್ನು ತೆಗೆಯಬೇಕಾಗಿರುತ್ತದೆ. ಉದಾಹರಣೆಗೆ "ಆಕೆಯೊಬ್ಬಳು ಅತ್ಯುತ್ತಮ ಗಾಯಕಿ" ಎಂದು ಹೇಳುವುದನ್ನು ಬಿಟ್ಟು "ಆಕೆ 14 ಪ್ರಥಮ ಸಾಲಿನ ಹಾಡುಗಳನ್ನು ಹಾಡಿದ್ದಾಳೆ, ಹಾಗೂ ಬೇರೆ ಯಾವುದೇ ಗಾಯಕರಿಗಿಂತ ಇದು ಉತ್ತಮವಾದದ್ದು”, ಎಂಬುದು ಭಾಷೆಯ ಸಮಸ್ಯೆಯಾಗಿಬಿಡುತ್ತದೆ. ಇಲ್ಲಿ ಸಮರ್ಪಕತೆ ಇರುವುದಿಲ್ಲ.

ಅದು, ಇದು, ಹಲವು, ಕೆಲವು ಎಂಬ ಅನಾಮಧೇಯ ಗುಂಪುಗಳ ಕುರಿತು ಸಂಬೋಧನೆಗಳಿರಬಾರದು. ಅವುಗಳು ಸಂಶಯಕ್ಕೆ ಕಾರಣವಾಗಿರುತ್ತವೆ. ಆದ್ದರಿಂದ ಆವನ್ನು ಬದಲಾಯಿಸಬೇಕಿರುತ್ತದೆ.

ಲೇಖನವೊಂದರಲ್ಲಿ ಎಲ್ಲಾ ಅಭಿಪ್ರಾಯಗಳನ್ನು ಪ್ರಸ್ತಾಪಿಸಿರಬೇಕು. ಅಭಿಪ್ರಾಯಗಳನ್ನು ಸರಿಯಾಗಿ ಜೋಡಿಸದೆ ಬಿಟ್ಟು ಹೋದಲ್ಲಿ ಅದು ಸಮಸ್ಯೆಯಾಗಿರುತ್ತದೆ.

ಕೆಲವೊಂದು ಭಾಗಗಳು ಇರಬೇಕಾಗಿದ್ದಕ್ಕಿಂತ ಹೆಚ್ಚಿನ ವಿಷಯಗಳನ್ನು ಒಳಗೊಂಡಿರುತ್ತವೆ. ಇದು ಲೇಖನದ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ.

ಆಧಾರಗಳು ಮತ್ತು ಮೂಲಗಳು ಹಾಗೂ ಅಡಿಟಿಪ್ಪಣಿಗಳು ಹೊಂದಿರದ ಲೇಖನಗಳನ್ನು ಗುಣಮಟ್ಟದ ಲೇಖನಗಳು ಎಂದು ಪರಿಗಣಿಸಲಾಗುವುದಿಲ್ಲ .