ಪುಟ:Hosa belaku.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ವಿಜ್ಞಾನದ ವಿಷ

ಕಂಡುಹಿಡಿದಿದ್ದ ಅಬ್ಬಾ ! ಒಂದು ನಿಮಿಷದಲ್ಲಿ ೨೦೦ ಬೀಡಿಗಳನ್ನು ಕಟ್ಟುವ ಯಂತ್ರವನ್ನು ಕಂಡುಹಿಡಿಯುವುದು ಸಾಮಾನ್ಯ ವಿಷಯವೇ?

ಈ ಜಿಲ್ಲೆಯ ಎಲ್ಲ ಬೀಡಿ ಕಾರಖಾನೆಯ ಭಂಡವಲುದಾರರು ರಾಜನನ್ನ ಹಾಡಿ ಹೊಗಳಿದ್ದರು. ಉದಾರಹಸ್ತದಿಂದ ಸಹಾಯ ಮಾಡಲು ತಮ್ಮ ಇಚ್ಛೆಯನ್ನು ಪ್ರಕಟಿಸಿದ್ದರು. ರಾಜನ ಸ್ವಾಗತಕ್ಕಾಗಿ ನಡೆದ ವೆಚ್ಚವನ್ನೆಲ್ಲ ಬೀಡಿಕಾರಖಾನೆಯ ಬಂಡವಾಳದಾರರು ವಹಿಸಿದ್ದರು. ಅಂತೂ ರಾಜನನ್ನು ಸ್ವಾಗತಿಸುವುದಕ್ಕಾಗಿ ಇವರೆಲ್ಲರೂ ಆತುರರಾಗಿಬಿಟ್ಟಿದ್ದರು.

ನಗರ ಸಭಾಭವನದ ಎದುರಿನ ಮತ್ತೊಂದು ಬೀದಿಯಲ್ಲಿ ನಿಂತ ಜನತಂಡವನ್ನು ನೋಡಿದಾಗ, ಆಂಗ್ಲ ಗಾದೆಯ ಮಾತೊಂದು ನೆನಪಿಗೆ ಬರುತ್ತಿತ್ತು: "ಮಿತ್ರರನ್ನು ಗಳಿಸಿಕೊಂಡವರಿಗೆ ಕೆಲ ಶತ್ರುಗಳಿರುವುದೂ ಸ್ವಾಭಾವಿಕ" ಎಂದು ಆ ಬೀದಿಯ ತುಂಬ ಕೆಲವು ಕೂಲಿ ಜನ ಮಾತ್ರ ಕರೀಪತಾಕೆಯನ್ನು ಹಿಡಿದುಕೊಂಡು, ನಿಷೇಧಪ್ರದರ್ಶನಕ್ಕಾಗಿ ಕಾದು ಕುಳಿತಿದ್ದರು. ಅವರೆಲ್ಲ ಬೀಡಿ ಕಾರಖಾನೆಯಲ್ಲಿ ದುಡಿಯುವ ಕೂಲಿಜನ. ಬೀಡಿ ಕಟ್ಟುವ ಹೊಸ ಯಂತ್ರ ಬಂದು ೧೫ ದಿನಗಳಾದುವು. ಇವರೆಲ್ಲ ಅಂದಿನಿಂದ ನಿರುದ್ಯೋಗಿಗಳಾಗಿದ್ದರು. ಅವರೆಲ್ಲರ ಹಸಿದ ಹೊಟ್ಟೆ ಅವರ ಮುಖದ ಮೇಲೆ ಯಾವುದೊ ಒಂದು ವೈಶಾಚಿಕ ಉಗ್ರ ಕಳೆಯನ್ನು ತಂದಿರಿಸಿತ್ತು. ಅವರ ಗಂಟಲು ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳದಂತೆ ಕರ್ಕಶವಾದ ಕೇಕೆ ಹಾಕುತ್ತಿದ್ದುವು.

"ಬೀಡಿ ಕಟ್ಟುವ ಯಂತ್ರವನ್ನು ಹುಡುಕಿದ ರಾಜು ಮನುಷ್ಯನಲ್ಲ-- ಪಶು, ರಾಕ್ಷಸ ! ಅವನಿಗೆ ಧಿಕ್ಕಾರ!"

ಪೋಲಿಸ ಪಡೆ ಬರುವ ಮೊದಲೇ ಅವರ ಈ ಅಬ್ಬರ ನೋಡುವ ಹಾಗಿತ್ತು. ಪೋಲೀಸರ ಎರಡು ಮೋಟರ್ ಲಾರಿಗಳು ಬಂದಾಕ್ಷಣ ಕರಿಯ ಪತಾಕೆಯ ಜನ ಬೆದರಿತು. ಈ ಯಾಂತ್ರಿಕ ಯುಗದಲ್ಲಿ ಕೇವಲ ಸಿಟ್ಟಿಗೆ ಮಹತ್ವವಿಲ್ಲ; ಕೇವಲ ಶಕ್ತಿಗೆ ಮಹತ್ವವಿಲ್ಲ; ಬಾಹು ಬಲದ ಕಾಲ ಹಿಂದೆ ಹೋಯಿತು. ಇಂದು ಯಾಂತ್ರಿಕ ಯುಗ, ಇಲ್ಲವಾದರೆ–– ?

ಇಲ್ಲವಾದರೆ ೨೫ ಪೋಲೀಸರು ೫-೬ ನೂರು ಜನರನ್ನು ಚದರಿಸುವದೆಂದರೆ? ಹೌದು. ಅವರಲ್ಲಿ ಬಂದೂಕುಗಳಿದ್ದುವು. ಅವೂ ಒಂದು