ಪುಟ:Hosa belaku.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ವಿಜ್ಞಾನದ ವಿಷ

ರಾಜ ಏಳಬಯಸುತ್ತಿದ್ದರೂ, ಜನತೆಯ ನಗು ಅವನನ್ನು ಹಿಂದಕ್ಕೆ ಎಳೆಯತು. ತಮ್ಮಿಬ್ಬರಲ್ಲಿಯ ಅ೦ತರವನ್ನು ಅವನ ಮನಸ್ಸು ಅಳೆಯತೊಡಗಿತ್ತು

ರಾಜುವಿನ ಹೇಡಿತನ ಸುಬ್ಬಮ್ಮನ ಲಕ್ಷಕ್ಕೆ ಬಾರದೆ ಹೋಗಲಿಲ್ಲ. ಯಾವುದೋ ಒಂದು ಪಾಶವೀಧೈರ್ಯ ಅವಳಲ್ಲಿ ಸಂಚಾರವಾಯಿತು. ಕರ್ಕಶನಗುವಿನ ಮಧ್ಯದಲ್ಲಿಯೇ, ೪-೫ ಹೆಜ್ಜೆ ಸಭಾಸ್ಥಾನದಲ್ಲಿ ಮುಂದೆ ಸರಿದಳು. ಅವಳಿಗೆ ತಿಳಿಯದ ಹಾಗೆ ಅವಳ ಕೈ ಎದೆಯ ಮೇಲಣ ಸೆರಗಿನವರೆಗೆ ಹೋಯಿತು. ಅಲ್ಲಿಂದ ಅವಳ ಕೈಗೆ ಬಂದುದು ಗೇಣುದ್ದದ ಚೂರಿ.

ಇದ್ದಕ್ಕಿದ್ದಂತೆಯೇ ಸಭೆಯಲ್ಲಿ ಶಾಂತತೆ ವ್ಯಾಪಿಸಿತು ಸುಬ್ಬಮ್ಮ ಒಮ್ಮೆಲೇ ಚೀರಿದಳು :

"ಹಾವಿಗೆ ಹಾಲುಣಿಸಿದೆ! ನೀನು ಯಂತ್ರವನ್ನು ಹುಡುಕಿ ನನ್ನ ಮಗನನ್ನು ಕೊಂದೆ! ನಾನು ನಿನಗೆ ಹಾಲಿಗಾಗಿ ಮೊಲೆ ಕೊಟ್ಟರೆ, ನೀನು ನನ್ನ ರಕ್ತಹೀರಿದೆ! ಹಿಡೀ, ನಾನೂ ಸೇಡು ತೀರಿಸಿಕೊಳ್ಳುತ್ತೇನೆ!" ಆ ವಾಕ್ಯ ಮುಗಿಯುವ ಮೊದಲೇ ಕೈಯಲ್ಲಿಯ ಚೂರಿಯನ್ನು ರಾಜನತ್ತ ಸುಬ್ಬಮ್ಮ ಬೀಸಾಡಿದಳು. ಹೇಳಿ ಕೇಳಿ ಅವಳು ಮುದುಕಿ; ಗುರಿತಪ್ಪಿತು ರಾಜ ಕುಳಿತ ಖುರ್ಚಿಯ ಮೇಲ್ಬಾಗಕ್ಕೆ ಅದು ಬಡಿದಿತ್ತು.

ಸಭೆಯಲ್ಲಿ ಒಂದೇ ಕೋಲಾಹಲವೆದ್ದಿತು. ಸುಬ್ಬಮ್ಮನನ್ನ ಕರೆದು ತಂದ ಪೋಲೀಸ ಹವಾಲ್ದಾರನೇ ಅವಳನ್ನು ಬಂಧಿಸಿ, ಅವಳ ಕೈಗೆ ಬೇಡಿತೊಡಿಸಿ, ಅವಳನ್ನು ಹೊರಗೆ ಕರೆದುಕೊಂಡು ನಡೆದ. ಸುಬ್ಬಮ್ಮ ಮತ್ತೆ ಚೀರಿದಳು.

"ಪಶು- ರಾಕ್ಷಸ, ಧಿಕ್ಕಾರ ! ” ಸುಬ್ಬಮ್ಮನನ್ನು ಸಭಾಭವನದಿಂದ ಹೊರಗೆ ಕರೆದೊಯ್ದ ಬಳಿಕ, ಸಭೆಯಲ್ಲಿಯ ಕೋಲಾಹಲ ಮಾಯವಾಯಿತು, ಆದರೆ ರಾಜ ದಂಗುಬಡೆದವನಂತೆ ಕುಳಿತುಬಿಟ್ಟಿದ್ದ. ರಾಜ ಅಪಾಯದಿಂದ ಪಾರಾದ ಬಗ್ಗೆ ಜನ ಅವನಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದರು. ಆದರೆ ರಾಜನ ಕಿವಿ... ? ತನ್ನ ಕಣ್ಣೆದುರಿನಲ್ಲಿ ಸುಬ್ಬಮ್ಮನಂತಹ ಸಹಸ್ರಾರು ಮುದುಕಿಯರು ತನ್ನತ್ತ ಕೈ ಮಾಡಿ ಅತ್ತು ಕರೆಯುತ್ತಿರುವಂತೆ ರಾಜನಿಗೆ ಭಾಸವಾಗ