ಪುಟ:Hosa belaku.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಲ ಮಹಿಮೆ.

ತಮ್ಮ ಮಗಳು ಶೀಲಾ ತಂದ ಸುದ್ದಿಯಿಂದ ಕೇಶವರಾಯರು ಆನಂದ ಹೊಂದಿದ್ದರೂ, ಮನೆಯ ಹೊಸ್ತಿಲನ್ನು ದಾಟಿ ಬೀದಿಗೆ ಇಳಿಯುವ ಮೊದಲೇ ಕಾಗೆಯೊಂದು ಬಲದಿಂದ ಎಡಬದಿಗೆ ಹಾರಿಹೋದದ್ದನ್ನು ಕಂಡು, ಅವರ ಮನಸ್ಸು ಸ್ವಲ್ಪ ಅಸ್ತವ್ಯಸ್ತವಾಯಿತು. ಹಕ್ಕಿಗಳ ಹಾರಾಟದ ಶಕುನಾಪಶಕುನಗಳನ್ನು ಎಣಿಸುವಷ್ಟು ಸನಾತನ ಶರಿಣರಾಗಿರಲಿಲ್ಲ ಕೇಶವರಾಯರು. ಆದರೂ ಮಾಡಹೊರಟ ಕೆಲಸವೇ ಅಷ್ಟೊಂದು ಮಹತ್ವದ್ದಿತು. ಅದಕ್ಕೆ–

ದಿನವೂ ಶಾಲೆಗೆ ಹೋಗುವ ವಿದ್ಯಾರ್ಥಿ, ಮನೆ ಬಿಟ್ಟಾಕ್ಷಣ, ಎದುರು ಯಾರು ಬಂದರು ಎಂಬುದನ್ನು ಪರಿಗಣಿಸಲಾರ. ಆದರೆ ಪರೀಕ್ಷೆಯ ದಿನ ಮಾತ್ರ, ಎದುರಿಗೆ ಬಂದ ವ್ಯಕ್ತಿಯನ್ನ ದೃಷ್ಟಿಸಿ ಅದರ ಮೇಲಿಂದ ತಮ್ಮ ಶಕುನಾಪಶಕುನದ ಫಲಗಳನ್ನು ಕಟ್ಟುತ್ತಾರಲ್ಲವೇ?

ಹಾಗೇ ಕೇಶವರಾಯರು ಈ ಮೊದಲು ಎಷ್ಟೋ ಸಲ ಮನೆ ಬಿಟ್ಟು ಹೊರಬಿದ್ದುದೂ ಉಂಟು. ಆದರೆ ಎಂದೂ ಶಕುನಾಪಶಕುನದತ್ತ ಲಕ್ಷವನ್ನೇ ಕೊಡದವರು ಇಂದೇಕೋ, ಆ ಬದಿಗೆ ತಮ್ಮ ಲಕ್ಷವನ್ನು ಹೊರಳಿಸಿದ್ದರು.

"ಎಲಾ ನಿನs" ಎಂದು ತಮ್ಮಷ್ಟಕ್ಕೆ ತಾವೇ ಮನಸ್ಸಿನಲ್ಲಿ ಆ ಕಾಗೆಯನ್ನು ಶಪಿಸುತ್ತ ಹಾಗೇ ಮುಂದುವರಿದರು.

ದಾರಿಯುದ್ದಕ್ಕೂ ನಡೆದಂತೆ ನಿರಾಶೆ ಅವರನ್ನು ಮುತ್ತತೊಡಗಿತ್ತು. ಕಾಗೆ ಎಡಗಟ್ಟಿದುದರ ಪರಿಣಾಮ ಅದು. ಆದರೂ ಅವರಲ್ಲಿಯ ಸುಧಾರಕತೆ, ಅವರ ಮನಸ್ಸಿಗೆ ಸಮಾಧಾನ ತಂದುಕೊಟ್ಟು ಆ ನಿರಾಶೆಯನ್ನು ಹೊಡೆದೋಡಿಸುತ್ತಿತ್ತು. ಅಕ್ಕಪಕ್ಕದಲ್ಲಿ ನಡೆದ ಜನರ ಚಲನವಲನದತ್ತ ಅವರ ಲಕ್ಷವೇ ಇರಲಿಲ್ಲ. ನಡಿಗೆಯಲ್ಲಿ ಸ್ವಲ್ಪ ಶೀಘ್ರತೆಯನ್ನು ತಂದು ದಾರಿಯನ್ನು