ಪುಟ:Hosa belaku.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೭

ಕಾಲ ಮಹಿಮೆ

ಏನನ್ನೋ ಮಾಮಾನಿಗೆ ಆಡಿಬಿಟ್ಟೆ. ಈಗ ನನಗೆ ತುಂಬಾ ಪಶ್ಚಾತ್ತಾಪವಾಯಿತು. ಮನುಷ್ಯತ್ವದ ಮುಂದೆ ಅಂತಸ್ತು ಗಿಂತಸ್ತು ಎಲ್ಲ ಸುಳ್ಳು ಎಂದು ಮಾಮಾ ಆಡಿದ ಮಾತು ನನ್ನ ಮನಸ್ಸನ್ನು ವಿಚಾರಕ್ಕೆ ಗುರಿಮಾಡಿತು. ಈಗ ನಿನ್ನ ಜತೆಯಲ್ಲಿಯೇ ಲಗ್ನವಾಗುವದನ್ನು ನಿರ್ಧರಿಸಿದ್ದೇನೆ. ಮಾಮಾ ನನ್ನ ಮೇಲೆ ತುಂಬಾ ಕೋಪಿಸಿಕೊಂಡಿರಬಹುದೆಂದು, ಪತ್ರವನ್ನು ಅವರಿಗೆ ಬರೆಯದೇ ನಿನಗೆ ಬರೆಯುತ್ತಿದ್ದೇನೆ. ಬಹುಶಃ ನಾಳೆಯೇ ನಮ್ಮ ದೇಶಕ್ಕೆ ತಲುಪಬಹುದು. ಇದೇ ತಿಂಗಳು ಕೊನೆಗೆ ನಾನು ರಜೆಯ ಮೇಲೆ ಊರಿಗೆ ಬರುತ್ತೇನೆ. ಲಗ್ನಕ್ಕೆ ನಿನ್ನ ತಂದೆ ಒಪ್ಪಿದರೆ ಈ ರಜೆಯಲ್ಲಿಯೇ ಲಗ್ನವಾಗಿ ಹೋಗಲಿ. ಆದರೆ ಒಂದು ಮಾತು. ಲಗ್ನ ವೈದಿಕ ಪದ್ಧತಿಯಿಂದಾಗುವದಕ್ಕೆ ನನಗೆ ಸಮ್ಮತವಿಲ್ಲ ರಜಿಸ್ಟರ್ ಪದ್ಧತಿಯಂತೆ ಲಗ್ನವಾಗಬೇಕು. ಮಾಮಾ ಇದಕ್ಕೆ ಒಪ್ಪುತ್ತಾರೋ ಇಲ್ಲವೋ ತಿಳಿಸು.

ಇತಿ ನಿನ್ನವ
ವಸಂತ.


ಓದು ಮುಗಿಸಿದಾಗ ಕೇಶವರಾಯರ ಕಣ್ಣಲ್ಲಿ ಆನಂದ ಬಾಷ್ಪಗಳು ಕಾಣಿಸಿಕೊಂಡುವು. ಶೀಲೆಯೂ ಸದ್ಗದಿತಳಾಗಿಯೇ ಹೇಳಿದಳು: "ಅಪ್ಪಾ, ವಸಂತ ಅಂಥಾ ಕೆಟ್ಟ ಮನುಷ್ಯ ಅಲ್ಲ ಅನ್ನೋದು ನನಗೆ ಗೊತ್ತಿತ್ತು"

"ಹೌದು, ಯಾರ ಅಕ್ಕನ ಮಗ ಅಂವ" ಎಂದು ಅಭಿಮಾನದಿಂದ ಕೇಶವರಾಯರು ನುಡಿದರು.

ಆ ಮಾತಿನಲ್ಲಿಯೇ ರಜಿಸ್ಟರ ಪದ್ಧತಿಯ ವಿವಾಹಕ್ಕೆ ಅವರ ಸಮ್ಮತಿ ಸಿಕ್ಕು ಹೋಗಿತ್ತು.


ವಸಂತ ಸುಶೀಲೆಯರ ಮದುವೆ ರಜಿಸ್ಟರ ಪದ್ಧತಿಯಿಂದ, ಬೆಳಗಿನಲ್ಲಿಯೇ ಜರುಗಿ ಹೋಗಿತ್ತು. ವಸಂತ ಸೂಟು ಬೂಟಿನಲ್ಲಿಯೇ ತನ್ನ ಕೋಣೆಯನ್ನು ಪ್ರವೇಶಿಸಿ ಮಂಚದ ಮೇಲೆ ಕುಳಿತ. ಗೆಳತಿಯರ ತಂಡ