ಪುಟ:Hosa belaku.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

೧೧

ಇಲ್ಲ. ನಿನ್ನನ್ನೇ ನಂಬಿದ್ದೇನೆ ! "

"ನಿಮ್ಮನ್ನು ನಡುನೀರಿನಲ್ಲಿ ಬಿಡಲಿಲ್ಲವಲ್ಲಾ, ಉಪವಾಸ ಕೆಡವಿದ್ದೇನೆಯೇ ? »"
"ಹೊಟ್ಟೆ ಹೇಗೋ ತುಂಬುತ್ತದೆ; ಆದರೆ ಸ್ವಾರಸ್ಯವಿಲ್ಲ ! ಸಂಸಾರರಥದ ಒಂದು ಗಾಲಿ ಮುರಿಯಿತು. ಆ ಗಾಲಿಯನ್ನು ಬೈದೇನು ಪ್ರಯೋಜನ ? ಸರಿಯಾಗಿದ್ದಷ್ಟೂ ದಿನ ರಥ ಎಳೆಯಿತು; ನಡುವೆ ಮುರಿದದ್ದು

ಅದರ ದೋಷವೇ ? "

"ಮುರಿದ ಗಾಲಿಯನ್ನು ಬೀಸಾಡಿ, ಬೇರೆ ಗಾಲಿ––"

ಅರ್ಧಕ್ಕೆ ಗಾಬರಿಯಾಗಿ ಲೀಲಾಬಾಯಿ ತಡೆಹಿಡಿದರು. ದೇಶಪಾಂಡೆಯವರು "ಹೌದು ಹೊಸ ಗಾಲಿ ಹಾಕಬೇಕು; ಆದರೆ ಮೊದಲಿನ ಗಾಲಿಯನ್ನು ಬೀಸಾಟದ ನಂತರ. ನಾನು ನನ್ನ ಕರ್ತವ್ಯವನ್ನು ನೆರವೇರಿಸಿದೆ. 'ಗಂಡ ಕುಂಟನಾಗಿ ಹೆಂಡತಿಯನ್ನು ಬಿಕ್ಕೆಗೆ ಕಳಿಸಿದ' ಎಂಬ ಲೋಕಾಪವಾದ ಬಾರದ ಹಾಗೆ, ನಾನು ನಿನಗೆ ಕಲಿಸಿದೆ, ಒಂದು ಮಾರ್ಗಕ್ಕೆ ಹಚ್ಚಿದೆ. ಈಗ ನನಗೆ ಓಡಾಡಲೂ ಆಗದು; ನೀನೇ ಬಾಂವಿಯ ವರೆಗೆ––"

ಗದ್ಗದ ಕಂಠದಿಂದ ವಾಕ್ಯವನ್ನು ಅರ್ಧಕ್ಕೆ ಮುಗಿಸಿ, ದೇಶಪಾಂಡೆಯವರು ಖೋಲಿಯಿಂದ ಹೊರಗೆ ನಡೆದರು. ಲೀಲಾಬಾಯಿಯವರು ತಮ್ಮ ಕೋಣೆಯಲ್ಲಿ ಕದಲದೇ ನಿಂತರು. ಗಂಡನ ಕೊನೆಯ ವಾಕ್ಯ ಅವರನ್ನು ವಿಚಾರಕ್ಕೆ ಗುರಿ ಮಾಡಿತು. ವಿಚಾರಿಸತೊಡಗಿದರು:––

ಹಳೆಯ ಗಾಲಿ––ಬಾಂವಿಗೆ––ಛೇ, ಮಾರ್ಗದಲ್ಲಿಯ ಮುಳ್ಳನ್ನು ತೆಗೆಯುವದಕ್ಕೆ ವೇಳೆ ಹತ್ತದು; ಆದರೆ ತಾನು ವಿಧವೆಯಾದ ಮೇಲೆ, ಬೇರೆ ಸದ್ಗೃಹಸ್ಥರು ನನ್ನನ್ನು ಮದುವೆಯಾಗಲು ಮುಂದೆ ಬರುವರೇ ? ಯಾರಾದರೂ ಬಂದರೆ, ಅವರೆಲ್ಲರೂ ಚಾರಿತ್ರ ಶುದ್ಧವಿಲ್ಲದವರೆಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು-ಹೌದು ! ಎಸೆದ ಎಂಜಲೆಲೆಯನ್ನು ತಿನ್ನಲು ಸಾಕಿದ ನಾಯಿಗಳೆಲ್ಲಿ ಬರುತ್ತವೆ ? ಬೀಡಾಡಿ ನಾಯಿಗಳೇ––'

––ತಾನು ವಿಧವೆಯಾದರೆ, ತನ್ನ ಸೌಂದರ್ಯಕ್ಕೆ ಮರುಳಾಗಿ ಮುಜುಮ್‍ದಾರರು ತನ್ನನ್ನು ಛೇ, ಅವರು ಈಗಾಗಲೇ ಸಪತ್ನೀಕರು !––ವಿಚಾರ ಮಾಡುತ್ತಿರುವಂತೆ ಲೀಲಾಬಾಯಿಯವರ ಕಣ್ಣ ಮುಂದೆ ಮುಜುಮ್‍