ಪುಟ:Hosa belaku.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಹೊಸ ಬೆಳಕು

ಯಲ್ಲಿ ರೇಡಿಯೋ ಕೇಂದ್ರಕ್ಕೆ ಬರಹೇಳಿದ್ದಳು, ಆದರೆ ನಿನ್ನ ಹಾಡೂ ಇದ್ದುದರಿಂದ, ಅವಳಿಗೆ 'ಹೆಂಡತಿಯನ್ನ ತವರ್ಮನೆಗೆ ಕಳಿಸುವುದಿದೆ' ಎಂದು ಸುಳ್ಳಾಡಿ ತಪ್ಪಿಸಿಕೊಂಡೆ. "ಸಮಾಜದ ನಿಂದೆ ನನಗೆ ಬೇಡವಾಗಿತ್ತು. ಕೇವಲ ನೀನೇ ನನ್ನ ಪ್ರಾಣ ” ಎಂದು ಮತ್ತೆ ಬಿಗಿದಪ್ಪಿದರು.

ಹೊರಗೆ ನಿಂತು ನೋಡುತ್ತಿದ್ದ ಲೀಲಾಬಾಯಿಯವರ ಗಲ್ಲಗಳು ಒದ್ದೆಯಾಗಿದ್ದುವು. ಕೈಯಲ್ಲಿಯ ಕರವಸ್ತ್ರವೂ ಒದ್ದೆಯಾಗಿತ್ತು. ಕಣ್ಣಲ್ಲಿ ನೀರು ಹರಿಯುತ್ತಲೇ ಇತ್ತು. ಹೊಸ ನೀರು ಹಳೆಯ ನೀರನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಅಲ್ಲಿಂದ ಸರಿದು ರೋಡಿಗೆ ಬಂದರು. ಚೌಕಿಗೆ ಬಂದಾಗ ಮನೆತನಕ ನಡೆದುಕೊಂಡು ಹೋಗುವಷ್ಟು ಅವರಲ್ಲಿ ತಾಳ್ಮೆ ಉಳಿದಿರಲಿಲ್ಲ. ಟಾಂಗಾ ಗೊತ್ತು ಮಾಡಿದರು.


ಲೀಲಾಬಾಯಿ ಮನೆಗೆ ಬಂದಾಗ, ಕೆಲಸಗಿತ್ತಿ ಬಾಗಿಲನ್ನು ಮುಂದೆ ಮಾಡಿ ತನ್ನ ಮನೆಗೆ ಹೋಗಿದ್ದಳು. ಲೀಲಾಬಾಯಿ ನೇರವಾಗಿ ಗಂಡನ ಕೋಣೆಗೆ ಹೋದರು. ದೇಶಪಾಂಡೆಯವರು ಮಂಚದ ಮೇಲೆ ಮಲಗಿದ್ದರು. ಸಮೀಪದಲ್ಲಿಯೇ ದೀಪ ಉರಿಯುತ್ತಿತ್ತು. ಆ ಬೆಳಕಿನಲ್ಲಿ ಗಂಡನ ದೀನಮುದ್ರೆಯನ್ನೊಮ್ಮೆ ನೋಡಿದರು. ಒಳಗಿನ ಅಂತಃಕರಣ ಉಕ್ಕಿಬಂತು. ಹೋದವರೇ ಗಂಡನ ಪಾದದಡಿಯಲ್ಲಿ ಬಿದ್ದರು. ಅಳು ಜ್ವಾಲಾಮುಖಿಯಂತೆ ಸ್ಫೋಟವಾಯಿತು. ದೇಶಪಾಂಡೆಯವರು ಒಮ್ಮೆಲೆ ಎಚ್ಚೆತ್ತು ಎದ್ದು ಕುಳಿತರು. ತಮ್ಮ ಬದಿಯಲ್ಲಿ ಹೆಂಡತಿ ಕುಳಿತು ಅಳುತ್ತಿರುವುದನ್ನು ನೋಡಿದರು, ಆಶ್ಚರ್ಯವಾಯಿತು. ಲೀಲಾಬಾಯಿಯವರು ಬಿಕ್ಕುತ್ತ "ನನ್ನನ್ನು ಕ್ಷಮಿಸಿರಿ!” ಎಂದು ಉಸುರಿದರು.

ಒಂದು ಕೈಯಿಂದ ಅವಳ ತಲೆಗೂದಲನ್ನು ನೇವರಿಸುತ್ತಾ “ ಕ್ಷಮೆ ಯಾಕೆ ? ” ಎಂದು ಕೇಳಿದರು. ಎಷ್ಟೋ ವರುಷಗಳ ನಂತರದ ಸ್ಪರ್ಶ, ಇಬ್ಬರಲ್ಲಿಯೂ ಹೊಸ ಸುಖದ ಕಲ್ಪನೆ ತಂದುಕೊಡುತ್ತಿತ್ತು. ಲೀಲಾಬಾಯಿ

ಎದ್ದು ಕುಳಿತು ಮೆಲ್ಲಗೆ ಎಂದಳು: