ಪುಟ:Hosa belaku.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೨೧

ಸಿನ ಗೋಡೆಗಳಿಗೆ ಅಪ್ಪಳಿಸಿ ಸ್ಫೋಟವಾಯಿತು. ನಗುವಿನ ರಭಸ ಕಡಿಮೆಯಾದಂತೆ ಮತ್ತೆ ಮಾತಿಗೆ ಪ್ರಾರಂಭವಾಯಿತು.

ಪಾಪ, ವಾಸಂತಿಯದಾದರೂ ತಪ್ಪೇನು ? ಅವಳು 'Virgin Widow' ವಯಸ್ಸಿಗೆ ಬರೋ ಮೊದಲೇ ವಿಧವೆಯಾದವಳು. ಅವಳದೂ ಜೀವ. ಅವಳಿಗೂ ಆಶೆ ಆಕಾಂಕ್ಷೆ, ಇಚ್ಛೆಗಳಿರುವುದು ಸ್ವಾಭಾವಿಕ."

"ಓಹೋ, ಪ್ರಗತಿಶೀಲ ಸಾಹಿತಿಗಳೇ, ತಮ್ಮ ಅಭಿಪ್ರಾಯ ಹೊರಗೆ ಹೋಗಿ ವ್ಯಕ್ತ ಮಾಡಿ.”

"ಪಟ್, ಪಟ್, ಪಟ್ " –ಚಪ್ಪಲಿನ ಸಪ್ಪಳ ಅವರ ಹರಟೆಗೆ ತಡೆಮಾಡಿತು. ವಾಸಂತಿ ಮ್ಲಾನವದನಳಾಗಿ, ಆಫೀಸಿನಲ್ಲಿ ಬಂದು ನೇರಾಗಿ ಟಾಯಿಪ ಟೇಬಲ್ಲಿನ ಹತ್ತಿರ ಬಂದು ಕುಳಿತಳು. ಒಂದೆಡೆಯಲ್ಲಿ ಕಲೆತ ಕಾರಕೂನರು ತಮ್ಮ ತಮ್ಮ ಜಾಗೆಗೆ ತೆರಳಿದರು. ಅವರ ಪಿಸುಮಾತುಗಳು ವಾಸಂತಿಯ ಹೃದಯಕ್ಕೆ ಕಾದ ಕಬ್ಬಿಣದಿಂದ ಬರೆ ಕೊಡುತ್ತಿರುವಂತೆ ಭಾಸವಾಯಿತು. ತನ್ನ ವಿಷಯದ ಕಲ ಮಾತುಗಳು ಮಂದಿಯ ಬಾಯಲ್ಲಿ ಮೂಡಿದಂದಿನಿಂದ, ಅವಳು ಒಂದು ವಾರ ರಜೆ ಪಡೆದುಕೊಂಡು ಮನೆಯಲ್ಲಿಯೇ ಕುಳಿತುಕೊಂಡಿದ್ದಳು. ಜನತೆಯ ಎದುರು ತನ್ನ ಮುಖವನ್ನು ತೋರಿಸುವುದಕ್ಕೂ ಅವಳು ನಾಚಿದ್ದಳು, ಅಂಜಿದ್ದಳು. ಜಗತ್ತಿನಲ್ಲಿದ್ದ ಸನಾತನ ಶೃಂಖಲೆಯನ್ನು ಮುರಿದು ಮುಂದಡಿಯನ್ನು ಇಡುವೆನೆಂದು ದೃಢಸಂಕಲ್ಪವನ್ನು ಮಾಡಿಕೊಂಡ ವಾಸಂತಿ ಇಂದು ಪ್ರತಿಯೊಬ್ಬರಿಗೂ ಅಂಜುತಿದ್ದಳು. ತನ್ನ ಮುಖವನ್ನು ಮೇಲಕ್ಕೆತ್ತಿ ನಡೆಯಲೂ ಅವಳಿಗೆ ಧೈರ್ಯವಾಗುತ್ತಿರಲಿಲ್ಲ. ಆಫೀಸಿನಲ್ಲಿದ್ದ ೩೦ ಮಂದಿ ಕಾರಕೂನರ ದೃಷ್ಟಿ ತನ್ನೆಡೆಗೆಯೇ ಇದೆ ಎಂಬುದು, ತಾನು ಕೆಳಮುಖ ಹಾಕಿದ್ದರೂ, ಅವಳಿಗೆ ಚನ್ನಾಗಿ ಗೊತ್ತಿತ್ತು, ನಖಶಿಖಾಂತ ಬೆವೆತು ಹೋದ ವಾಸಂತಿಗೆ ಏನು ಮಾಡಬೇಕೆಂಬುದೇ ತಿಳಿಯದಾಯಿತು. ಸುಮ್ಮನೇ ಕೂಡುವದಕ್ಕಿಂತಲೂ ಏನಾದರೂ ಮಾಡಬೇಕೆಂದು ಟಾಯಿಪಿನ ರಾಡರನ್ನು ಅತ್ತಿಂದಿತ್ತ ತಿರುಗಿಸಿ, ಅದನ್ನು ಸರಿಪಡಿಸತೊಡಗಿದಳು. ಇಂಥ ಕೆಲಸದಲ್ಲಿ ನಿಮಗ್ನಳಾಗಿ ತನ್ನಷ್ಟಕ್ಕೆ ತಾನು ಯಾವದೋ ನಿರ್ಜನ ಪ್ರದೇಶದಲ್ಲಿದ್ದೇನೆ ಎಂಬ ಭಾವನೆಯನ್ನು ಕ್ಷಣಕಾಲವಾದರೂ ಮನಸ್ಸಿನಲ್ಲಿ ತಂದುಕೊಂಡಳು. ಅವಳಿಗೆ ಈ ಮೂವತ್ತು ಕಾರ