ಪುಟ:Hosa belaku.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಕೆಳಗಿನ ನೆರಳು

ಕೂನರ ಭೇದಕ ದೃಷ್ಟಿಯು ಅಷ್ಟೊಂದು ಮಹತ್ವವೆನಿಸಲಿಲ್ಲ. ಅದು ಕೇವಲ ಬರಲಿರುವ ದೊಡ್ಡ ಬಿರುಗಾಳಿಯ ಮೊದಲ ಸೆಳಕು-ಬಿರುಗಾಳಿಯ ಭಯಾನಕ ಸ್ವರೂಪ-ಧರ್ಮ ಮಾರ್ತಂಡ ಗೋಪಾಲ ಸ್ವಾಮಿಯವರು: ಅಬ್ಬಾ, ಗೋಪಾಲಸ್ವಾಮಿಯವರ ಹೆಸರು ಕೇಳಿದಾಕ್ಷಣ, ವಾಸಂತಿಯು ಬೆವರಿನ ಸುರಿಮಳೆಯಲ್ಲಿ ತೊಯ್ದು ಹೋದಳು. ಕೈಯಿಂದ ಟಾಯಿಪಿನ ರಾಡರ ತಿಕ್ಕುತಿದ್ದ ಹಾಗೆಯೇ ವಾಸಂತಿ ವಿಚಾರಿಸಹತ್ತಿದಳು.

"––ಗೋಪಾಲ ಸ್ವಾಮಿಯವರಿಗೆ–– ಸರಕಾರ 'ಧರ್ಮಮಾರ್ತಂಡ' ಎಂಬ ಬಿರುದು ಕೊಟ್ಟಿದೆ. ಅವರ ದೃಷ್ಟಿಯಲ್ಲಿ ನಾನು ಮಾಡಿದ್ದು-ಮಾಡಿದ್ದು ಅಲ್ಲ; ಮಾಡಬೇಕೆನ್ನುವದು ಅಧರ್ಮದ ಕೆಲಸ. ಆದರೆ ನಾನು ಮಾಡುತ್ತಿರುವದು ಅನ್ಯಾಯವೇ ? ಛೇ, ನನ್ನ ಮನೋದೇವತೆ ನನಗೆ ಧೈರ್ಯ ಕೊಡುತ್ತಿದ್ದಾಳೆ. ಒಂದು ವೇಳೆ ಧೈರ್ಯದಿಂದ ಈ ಕೆಲಸವನ್ನು ಮಾಡಿಬಿಟ್ಟರೆ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ರುದ್ರ ದೃಷ್ಟಿಯಲ್ಲಿ ನಾವಿಬ್ಬರೂ ಸುಟ್ಟು ಭಸ್ಮವಾಗಬಹದು. ನಾನು ಸುಟ್ಟರೂ ಅಡ್ಡಿ ಇಲ್ಲ. ನನ್ನ ಸುಬ್ಬಗೂ ಸುಖವಾಗಿರಬೇಕೆಂಬುದೇ ನನ್ನ ಆಶೆ- "

ವಾಸಂತಿ ಇನ್ನೂ ಏನೇನನ್ನೋ ವಿಚಾರಿಸುವದರಲ್ಲಿದ್ದಳು. ಆದರೆ ಕಾರಕೂನರಲ್ಲಿ ಮಾತಿನ ಗೋಜೆ ಒಮ್ಮೆಲೇ ಹೆಚ್ಚಾಯಿತು. ವಾಸಂತಿ ತಿರುಗಿ ನೋಡಿದಳು. ಆಫೀಸಿನ ತಲೆ ಬಾಗಿಲಿನಿಂದ ಸುಬ್ಬಣ್ಣ ಒಳಗೆ ಬರತೊಡಗಿದ್ದ. ರಾಜದರ್ಬಾರಿನಲ್ಲಿ ಅರಸು ಬರಹತ್ತಿದನೆಂದರೆ ಭಟ್ಟಂಗಿ ಹೆಳವರ ಹೊಗಳಿಕೆಗೆ ಪ್ರಾರಂಭವಾಗುತ್ತದೆ. ಹಾಗೆಯೇ ಕುಳಿತ ಕಾರಕೂನರು, ಸುಬ್ಬಣ್ಣನಿಗೆ ಒಂದೊಂದೇ ಶಬ್ದವನ್ನಾಡುತ್ತಿದ್ದರು. ಆದರೆ ಅದು ಹೋಗಳಿಕೆಯದಾಗಿರಲಿಲ್ಲ,

"ಓಹೋ ಸುಬ್ಬಣ್ಣನವರೇ, ಧನ್ಯನಾದಗಳು. ನೀವಿಬ್ಬರೂ ಸುಖವಾಗಿರಬೇಕೆಂಬುದೇ ನನ್ನ ಆಶೆ."
"ಸುಬ್ಬಣ್ಣ, ನಿನ್ನ ಧೈರ್ಯಕ್ಕೆ ನಾನು ಮೆಚ್ಚಿದೆ. ನಾವೆಲ್ಲರೂ ಪ್ರಗತಿಶೀಲರಾಗಬೇಕು."
"ಹೌದು. ವಿಧವೆ ಸುಂದರ ಸುರೂಪಿಯಾಗಿದ್ದರೆ ಮಾತ್ರ ನಾನೂ ಪ್ರಗತಿಶೀಲರ ಬಳಗಕ್ಕೆ ಸೇರಬಯಸುತ್ತೇನೆ."