ಪುಟ:Hosa belaku.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೨೩

"ಲೋ ಸುಬ್ಬ, ಈ ಕಣ್ಣುಮುಚ್ಚಾಲೆಯ ಆಟ ಬಿಟ್ಟು, ಬೆಳಕೀಗೆ ಬಾರೋ ಹೀಗೆ"

ಸುಬ್ಬಣ್ಣ ಯಾರಿಗೂ ಉತ್ತರ ಕೊಡಲಿಲ್ಲ. ಕೊಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ನೇರಾಗಿ ತನ್ನ ಟೇಬಲ್ಲಿನತ್ತ ನಡೆದು ತನ್ನ ಖುರ್ಚಿಯಬಳಿ ಸಾರಿದ. ಒಂದು ಸಲ ಆಫೀಸಿನಲ್ಲಿಯ ಕಾರಕೂನರ ಮುಖಗಳನ್ನು ದೃಷ್ಟಿಸಿದ. ಆಗ ಅವನಿಗೆ ಕಂಡಿದ್ದು ಎಲ್ಲರ ಪ್ರಶ್ನಾರ್ಥಕ ಮುದ್ರೆ, ತಾನು ತಪ್ಪಿತಸ್ಥನಲ್ಲ ಎನ್ನುವದು ಸುಬ್ಬನಿಗೆ ಗೊತ್ತಿದ್ದರೂ, ಮಂದಿಯ ಬಾಯಿ ಅವನನ್ನು ತಪ್ಪಿತಸ್ಥನನ್ನಾಗಿ ನಿರ್ಣಯಿಸಿತ್ತು. ನಾಲ್ಕು ಜನ ಒಬ್ಬನನ್ನು ಹುಚ್ಚನೆಂದು ಕರೆದು ಹಾಗೆ ಅವನನ್ನು ಕಾಣತೊಡಗಿದರೆ, ಅವನು ಎಷ್ಟೋ ಸರಿ ಇದ್ದರೂ, ಸ್ವಲ್ಪಾದರೂ ಹುಚ್ಚು ಕಳೆ ಅವನ ಮುಖದ ಮೇಲೆ ಪಸರಿಸುತ್ತದೆ. ಇದೊಂದು ಸ್ವಾಭಾವಿಕ ಮಾನಸಿಕ ರೋಗ, ಸುಬ್ಬನೂ ಒಬ್ಬ ಸಾಮಾನ್ಯ ಮನುಷ್ಯ. ಇಂಥ ಮಾನಸಿಕ ರೋಗದಿಂದ ಮುಕ್ತನಾಗುವದು ಸುಲಭ ಸಾಧ್ಯವಿದ್ದ ಮಾತಲ್ಲ ತಾನು ಮಾಡುತ್ತಿರುವ ಕೆಲಸ ಯೋಗ್ಯವಲ್ಲವೆಂದು ಹೇಳಿ ಹೀಯಾಳಿಸುವ ಜನಕ್ಕೆ ಉತ್ತರ ಕೊಡಬೇಕೆಂದು ಒಂದುಸಲ ಸುಬ್ಬ ಯೋಚಿಸಿದ. ಆದರೆ ಬಾಯಿಯೇ ಏಳಲಿಲ್ಲ. ಹಾಗೆಯೇ ಖುರ್ಚಿಯಲ್ಲಿ ಕುಳಿತುಕೊಂಡ, ಈಗ ಮಾತನಾಡಿ ಫಲವೇನು, ಅದೂ ಸಂಬಂಧವಿಲ್ಲದವರ ಜತೆಯಲ್ಲಿ ಮಾತನಾಡಿ ಫಲವೇನು ? ತನ್ನ ನಡಾವಳಿಯ ಬಗ್ಗೆ ವಿಚಾರಿಸುವ ಧರ್ಮಮಾರ್ತಂಡ ಗೋಪಾಲಸ್ವಾಮಿಯವರಿಗೆ ಧೈರ್ಯವಾಗಿಯೇ ಹೇಳುವದನ್ನು ಹೇಳಿದರಾಯಿತು ಎಂದು ವಿಚಾರಿಸಿ ಟೇಬಲ್ಲಿನ ಮೇಲಿದ್ದ ಕಾಗದರಾಶಿಗೆ ಕೈ ಹಾಕಿದ.

ಧರ್ಮ ಮಾರ್ತಂಡ ಗೋಪಾಲ ಸ್ವಾಮಿಯವರ ಬಗ್ಗೆ ಮನಸ್ಸಿನಲ್ಲಿ ವಿಚಾರಿಸುತ್ತಿರುವಾಗಲೇ, ಸುಬ್ಬ ಮೈ ತುಂಬ ಬೆವೆತು ಹೋದ, ಕೆಲಸದ ಕಡೆಯ ಲಕ್ಷವೆಲ್ಲಿಯೋ ಹೋಯಿತು. ಹಾಗೇ ಕೈಯಲ್ಲಿದ್ದ ಕಾಗದದ ಮೇಲೆ ಕಣ್ಣನಿಟ್ಟು ವಿಚಾರಿಸತೊಡಗಿದ.

––ತಾನೂ ಧರ್ನು ಮಾರ್ತಂಡ ಗೋಪಾಲಸ್ವಾಮಿಯವರ ಊರಿನವನೇ, ತಾನೂ ಅವರ ಮಗಳೂ-ವನಜಾಕ್ಷಿ-ಕೂಡಿ ಲೋವ್ಹರ್ ಸೆಕೆಂಡರಿವರೆಗೂ ಕೂಡಿ ಕಲಿತವರು. ಅವರ ಮಗಳು-ವನಜಾಕ್ಷಿಯ ಜತೆಯಲ್ಲಿ,