ಪುಟ:Hosa belaku.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಕೆಳಗಿನ ನೆರಳು

ಹುಡುಗಾಟಿಕೆಯ ಸ್ವರದಲ್ಲಿ ತ೦ದೆಗೆ ವನಜಾ ಒತ್ತಾಯಪಡಿಸಿದಳು. "ಹಾಗಾದರೆ ನಿನ್ನ ಆಫೀಸಿನಲ್ಲಿ ಕೊಟ್ಟು ಬಿಡಪ್ಪಾ."

ಅವಳ ಮಾತು ಮುಗಿಯುವ ಮೊದಲೇ ದರಿದ್ರ ದಯಾಸಂಘದ ಜನ, ಧರ್ಮಮಾರ್ತಂಡರು ಹಣ ಸಹಾಯ ಕೇಳಲು ತಮ್ಮ ಸಮಿತಿಯ ಹಣದ ಪೆಟ್ಟಿಗೆಯನ್ನು ಮುಂದೊಡ್ಡಿದರು.

ಪೆಟ್ಟಿಗೆಯತ್ತ ಲಕ್ಷವಿಲ್ಲದವರಂತೆ ಧರ್ಮಮಾರ್ತಂಡ ಗೋಪಾಲಸ್ವಾಮಿ ಯವರು ಕೂಗಿದರು:

"ಸುಬ್ಬ, ಈಗ ನಿರುದ್ಯೋಗಿಯಾಗಿದ್ದೀಯೋ?"
"ಹೌದು, ನಿಜಕ್ಕೂ.... " ತಾನು ಉತ್ತರಿಸಿದ್ದು.
"ಹಾಗಾದರೆ ನಾಳಿನಿಂದ ರೇಶನಿಂಗ ಆಫೀಸಿನಲ್ಲಿ ಕೆಲಸಕ್ಕೆ ಬಾ. ಹುಕುಮನ್ನು ನಾಳೆ ಕೊಡುವೆ. ಅಪಾಯಂಟಮೆಂಟ ನಾಳಿನಿಂದಲೇ ಮಾಡುವೆ. "

ನಿರುತ್ಸಾಹದಲ್ಲಿ ಒಮ್ಮೆಲೆ ಆಶೆ-ಗೆರಸೊಪ್ಪೆಯ ಧಬಧಬೆಯಂತೆ ಹರಿದು ಬಂದಂತಾಯಿತು. ಒಮ್ಮೆಲೇ ಓಡಿಹೋಗಿ ಧರ್ಮಮಾರ್ತಂಡರ ಕಾಲುಗಳಿಗೆ ನಮಸ್ಕರಿಸಿ ತಾನು ಬಾಗಿಲ ಹೊರಗೆ ಬಿದ್ದ. ಹೊರಗೆ ಬೀಳುವಾಗಲೇ ಧರ್ಮ ಮಾರ್ತಂಡರ ಕೆಲ ಮಾತು ಕೇಳಿಸಿತ್ತು.

"ನೀವು ದರಿದ್ರ ದಯಾ ಸಂಘ ಅಂತಾ ಫಂಡ ಜಮಾ ಮಾಡುತ್ತೀರಿ. ಆದರೆ ನಾನು ದರಿದ್ರರಿಗೆ ನೌಕರಿ ಕೊಟ್ಟು ಉದ್ಧರಿಸುತ್ತೇನೆ. ಫಂಡು ಕೊಟ್ಟು ದುದರಕಿಂತಲೂ ಹೆಚ್ಚು ಕೆಲಸ ನಾನೀಗ ಮಾಡುತ್ತಿದ್ದೇನೆ. "

ಮುಂದೆ ನವಕರಿಯೂ ದೊರೆಯಿತು. ಧರ್ಮಮಾರ್ತಂಡರು ತಮ್ಮ ನವಕರರ ಜತೆಯಲ್ಲಿ ಹೆಚ್ಚು ಮಾತಾಡುತ್ತಲೂ ಇರಲಿಲ್ಲ. ವನಜಾ ಕಾಲೇಜ ಕಲಿಯಲು ಬೆಂಗಳೂರನ್ನು ಸೇರಿದಳೆಂದು ಜನರ ಬಾಯಿಂದ ತಿಳಿಯಿತು. ಏಕೆಂದರೆ, ಅವರ ಮನೆಗೆ ಹೋಗಲು ಯಾವ ಕಾರಕೂನನಿಗೂ ಧೈರ್ಯವಾಗುತ್ತಿರಲಿಲ್ಲ. ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ಶಿಸ್ತೆ ಆ ರೀತಿ ಯದಾಗಿತ್ತು. ಆಫೀಸಿನಲ್ಲಿ ಕಂಡಕ್ಟ ಸರ್ಟಿಫಿಕೇಟ ಹಾಜರಪಡಿಸಲಿಲ್ಲದವನೆಂದರೆ ತಾನೊಬ್ಬನೇ. ಅದನ್ನು ಹಾಜರ ಪಡಿಸದಿದ್ದರೂ ತನ್ನಲ್ಲಿ ಯಾವ