ಪುಟ:Hosa belaku.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ.

ದಿಲ್ಲಿ ರೆಫ್ಯೂಜಿ (ನಿರ್ವಾಸಿತ) ಕ್ಯಾಂಪಿನಲ್ಲಿ ಜಸವಂತಸಿಂಗ, ತೋಟ ಒಂದರಲ್ಲಿ ಗಿಡಬಳ್ಳಿಗಳಿಗೆ ನೀರನ್ನು ಹಣಿಸತೊಡಗಿದ್ದ. ಅಂದೇ ದಿಲ್ಲಿಯ ಆಲ್ ಇಂಡಿಯಾ ರೇಡಿಯೋದ ಅಸಿಸ್ಟಂಟ ಸ್ಟೇಶನ ಡಾಯರೆಕ್ಟರರು ಆ ಕ್ಯಾಂಪಿಗೆ ಸಂದರ್‍ಶನವೀಯುವವರಿದ್ದರು. ಸರದಾರ ದಯಾಲಸಿಂಗ, ಕ್ಯಾಂಪಿನ ಮ್ಯಾನೇಜರರು ಎಲ್ಲ ನಿರ್ವಾಸಿತರನ್ನು ಕರೆದು ಸಭೆ ಕೂಡಿಸಿ ಅವರಿಗೆ ಅಚ್ಚ ಕಟ್ಟಾಗಿಯೂ ಓರಣವಾಗಿಯೂ ಇರಲು ತಿಳಿಸಿದ. ಒಬ್ಬ ರಿಫ್ಯೂಜಿ ಕೇಳಿದ:

"ಏನು ಸರದಾರರೇ, ಮನೆ ಮಠಗಳನ್ನೇ ತೊರೆದು ಬೀದಿ ಬೀದಿ ಅಲೆಯುವ ನಮ್ಮಂಥವರು, ಎಷ್ಟು ಅಚ್ಚುಕಟ್ಟಾಗಿ ಇದ್ದರೇನು ಬಿಟ್ಟರೇನು?" ಅದಕ್ಕೆ ದಯಾಲಸಿಂಗ ಕಳಕಳಿಯಿಂದ ಉತ್ತರಿಸಿದರು.

"ನೋಡು, ನೀವು ದುಃಖಿಗಳಿರೋದು ನಿಜ. ಅಚ್ಚುಕಟ್ಟಾಗಿರೋದಕ್ಕೆ, ಸೂಟು ಬೂಟುಗಳೇ ಇರಬೇಕೆಂದರ್ಥವಲ್ಲ. ಇದ್ದುದರಲ್ಲಿಯೇ ಸ್ವಲ್ಪ ಚನ್ನಾಗಿರೋದು, ಇದರಿಂದ ನಿಮಗೇನೇ ಲಾಭ,"

"ಲಾಭ? ಅದೆಂಥ ಲಾಭ? "

"ಹೌದಪ್ಪ ಹೌದು, ಲಾಭ, ಲಾಟ್ರಿ ಹತ್ತೋದಕ್ಕೂ ಭಾಗ್ಯ ಬೇಕಾಗುತ್ತದೆ. ಡಾಯರೆಕ್ಟರರ ಇವತ್ತಿನ ಸಂದರ್ಶನವು ಇಂದು ಲಾಟ್ರಿ ಇದ್ದ ಹಾಗೆಯೇ, "

"ಸರದಾರರೇ, ಏನು ಅದು ಬಾಯಿ ಬಿಚ್ಚಿ ಹೇಳಬಾರದೇ? "

ದಯಾಲಸಿಂಗ ನಿಧಾನವಾಗಿ ಉತ್ತರಿಸಿದರು: "ಇವತ್ತು ಬರೋ ಡಾಯರೆಕ್ಟರ ಗಂಭೀರಸಿಂಗ ಈಗ ನಿಪುತ್ರಿಕರಾಗಿದ್ದಾರೆ. ತುಂಬಾ ಶಿರಿವಂತರು ಹಾಗೇ ತುಂಬಾ ಬುದ್ಧಿವಂತರು. ಅವರೂ ಪಶ್ಚಿಮ ಪಂಜಾಬದವರೇ, ಅಲ್ಲಿ