ಪುಟ:Hosa belaku.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ

೩೯

ನಿರ್ವಾಸಿತರು ಅವನ ಸಿಟ್ಟಿನ ಪ್ರಸಾದವನ್ನು ಪಡೆದಿದ್ದರು. ಆದರೆ ಇಂದು ಮಾತ್ರ ದಯಾಲಸಿಂಗನಿಗೆ ತನ್ನ ಸಿಟ್ಟನ್ನು ಹಿಂದೂಡಲೇ ಬೇಕಾಗಿತ್ತು. ಏಕೆಂದರೆ ಡಾಯರೆಕ್ಟರ ಗಂಭೀರಸಿಂಗರು ಸಂದರ್ಶನವನ್ನೀಯುವವರಿದ್ದರು. ಎಲ್ಲಿಯಾದರೂ ತನ್ನ ಸಿಟ್ಟು ಅವರ ಕಿವೀವರೆಗೂ ಹೋಗಿ ಮುಟ್ಟಿದರೆ ತನ್ನಗತಿ ಏನು ಎನ್ನುವ ಭೀತಿ ಅವನಿಗಿತ್ತು. ಅದಕ್ಕೆ ದಯಾಲ, ಜಸವಂತ ಸಿಂಗನ ಜತೆಯಲ್ಲಿ ಮೃದುಸ್ವರದಲ್ಲಿಯೇ ಮಾತಿಗಾರಂಭಿಸಿದ:

"ಏನು ಯೋಚನೆ ಮಾಡುತ್ತಿದ್ದೀ ಜಸವಂತ?"
"ಎಲ್ಲರನ್ನು ಕಳೆದುಕೊಂಡವ ಮತ್ತೇನನ್ನು ಯೋಚಿಸಬೇಕು?
"ಹೌದಪ್ಪ…… ಹೊಟ್ಟೆನೋವು ಬಂದವನಿಗೆ ಅದರ ದುಃಖ ಗೊತ್ತಿರುತ್ತೆ. ಬೇರೆಯವರಿಗೆ ಅದರ ನೋವು ತಿಳಿಯಬಹುದೇ?"
"……" ಜಸವಂತಸಿಂಗ ನಿರುತ್ತರನಾಗಿದ್ದ.

ಮತ್ತೆ ದಯಾಸಿಂಗ ಮಾತನಾಡಿಸಿದ: "ನೋಡು ಇಂದು ಅವರು ನಮ್ಮ ಕ್ಯಾಂಪ ನೋಡಲು ಬರುವವರಿದ್ದಾರೆ. ಹೋಗು, ಅಚ್ಚುಕಟ್ಟಾಗಿ ಇರು, ಅಚ್ಚುಕಟ್ಟಾಗಿ ಇರೋದರಿಂದ ಮನುಷ್ಯ ತುಂಬಾ ಚುರುಕಾಗಿ ಕಾಣುತ್ತಾನೆ. ಚುರುಕ ಹುಡುಗ ಸುಂದರವಾಗಿ ಕಾಣುತ್ತಾನೆ. ಹುಡುಗನನ್ನೇ ಗಂಭೀರಸಿಂಗ ದತ್ತು ತೆಗೆದುಕೊಳ್ಳುತ್ತಾರೆ. ಕಡೆಗೆ ನಮ್ಮ ಜಸವಂತಸಿಂಗ ನಮ್ಮನ್ನು ಗುರುತಿಸುವದಕ್ಕೂ ಬರಲಾರ, ಹಃ ಹ!!" ಎಂದು ಉಬ್ಬಿಸುವ ಸ್ವರದಲ್ಲಿ ದಯಾಲಸಿಂಗ ನುಡಿದ.

"ಹ್ಞೂ!" ಜಸವಂತನ ನಿರಾಶಯುಕ್ತ ಹೂಂಕಾರ ದಯಾನ ಮಾತಿಗೆ ಉತ್ತರರೂಪವಾಗಿ ದೊರೆಯಿತು. ದಯಾಲ ಮೆಲ್ಲಗೆ ಹೇಳಿದ"

"ನೀನು ತುಂಬಾ ಹುಚ್ಚ ನೋಡು."
"ನಮ್ಮ ಜನವೆಲ್ಲ ಹುಚ್ಚೇ."
"ಏನೋ........"
"ನನಗನಿಸಿತು."
"ನಿಜ, ಹುಚ್ಚನಿಗೆ ಎಲ್ಲರೂ ಹುಚ್ಚಾಗಿಯೇ ಕಾಣುತ್ತಾರೆ."
"ನಾನು ಹುಚ್ಚನಾಗುವದು ಸಾಧ್ಯವಿಲ್ಲಾ."
"ಹುಚ್ಚನಲ್ಲದೇ ಮತ್ತೇನು?"