ಪುಟ:Hosa belaku.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ

೪೭

ಮೇಲಕ್ಕೆತ್ತಿ ಹಿಡಿದಿರಿ. ಅದರಂತೆ ನಾನೂ ಒಬ್ಬ ಬೀದಿಯಲ್ಲಿ ಬಿದ್ದವಳನ್ನೇ ಮೇಲಕ್ಕೆತ್ತಿ ಹಿಡಿಯಬೇಕೆಂದು ಆಸೆ."

ಜಸವಂತಸಿಂಗನ ಮಾತಿನ ಅರ್ಥ ದಂಪತಿಗಳಿಬ್ಬರಿಗೂ ಆಗಲಿಲ್ಲ. ಗಂಭೀರಸಿಂಗರೇ ಮತ್ತೆ ಕೇಳಿದರು:

"ಬಿಡಿಸಿ ಹೇಳು ಮಗೂ."
"ಬೀದಿಯಲ್ಲಿ ಬಿದ್ದವಳೆಂದರೆ, ತಪ್ಪು ಅರ್ಥ ಮಾಡಿಕೊಳ್ಳಬೇಡಿ. ನನ್ನ ಹಾಗೆ ಮನೆ ಮಾರು ತಪ್ಪಿಸಿಕೊಂಡು ನಿರ್ವಾಸಿತಳಾದಂಥ ಹುಡುಗಿಯನ್ನೇ ನೋಡಿ ನನ್ನ ಮದುವೆ ಮಾಡಿ ಎಂದಿಷ್ಟೇ ಅರ್ಥ."

ದಂಪತಿಗಳಿಬ್ಬರೂ ಅವನ ಮಾತನ್ನು ಕೇಳಿ, ಅವನಿಗೆ ತನ್ನ ಸಮ್ಮತಿಯನ್ನು ಸೂಚಿಸಿದರು. ಜಸವಂತನ ಮನ ನೋಯಿಸದ ಹಾಗೇ ನಡೆದುಕೊಳ್ಳುವದೆಂದು ಅವರು ನಿರ್ಧರಿಸಿದ್ದರು. ಮಾರನೇ ದಿನವೇ ಗಂಭೀರಸಿಂಗರ ನಿರ್ವಾಸಿತ ಕ್ಯಾಂಪಿನಲ್ಲಿ ಕನ್ಯಾನ್ವೇಷಣೆಗಾಗಿ ಜಬಲ್ಪೂರಕ್ಕೆ ನಡೆದರು. ಶೀಖರಲ್ಲಿ ಲಗ್ನವಾಗುವವರೆಗೂ ಗಂಡು ಹೆಣ್ಣನ್ನು ನೋಡುವಂತಿರುವದಿಲ್ಲ. ಅದಕ್ಕಾಗಿ ಜಸವಂತಸಿಂಗ ಗಂಭೀರಸಿಂಗರ ಜತೆಯಲ್ಲಿ ಹೋಗದೇ ನಾಗಪೂರದಲ್ಲಿಯೇ ಉಳಿದುಕೊಂಡ.

ಗಂಭೀರಸಿಂಗರ ಮನೆಯಲ್ಲಿ ಮಂಗಲವಾದ್ಯಗಳು ಮೊಳಗತೊಡಗಿದ್ದವು. ಜಸವಂತಸಿಂಗನ ಮದುವೆಗೆ ಒಂದು ವಿಶೇಷ ಮಹತ್ವ ಬಂದಿತ್ತು. ಇಷ್ಟು ದೊಡ್ಡ ಮನೆತನಸ್ಥವನಾಗಿದ್ದರೂ ಒಬ್ಬ ನಿರ್ವಾಸಿತ ಹುಡಿಗೆಯ ಜತೆಯಲ್ಲಿ ಅವನು ಮದುವೆಗೆ ಒಪ್ಪಿದ್ದೇ ಒಂದು ವಿಶೇಷ ಕಾರಣ. ಮದುವೆಗೆ ಬಂದ ಮಹನೀಯರೆಲ್ಲರೂ "ಇದೊಂದು ಉದ್ಧಾರದ ಕಾರ್ಯ" ಎಂದು ಕೊಂಡಾಡಿದರು. ಮದುವೆ ಮನೆಯಲ್ಲಿ ಎಲ್ಲರೂ ಆನಂದಭರಿತರಾಗಿದ್ದರು. ಗಂಭೀರಸಿಂಗರ ಪತ್ನಿ ಯಾವಾಗಲೂ ಜಸವಂತನ ಬಳಿಯಲ್ಲಿಯೇ ನಿಂತು ಆತನನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲವಿದ್ದರೂ ಜಸವಂತಸಿಂಗನ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯತೊಡಗಿತ್ತು. ಅದನ್ನು ನೋಡಿದ ಗಂಭೀರಸಿಂಗರ ಪತ್ನಿ ಮಗನಿಗೆ "ಮಗೂ, ಇಂದು ಶುಭ ದಿನ. ಹೀಗೆ ಅಮಂಗಲವಾಗಿ