ಪುಟ:Hosa belaku.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಸಾಲ ಪರಿಹಾರ


"ತನ್ನ ಮೈ ಮೇಲೆ ಕಾಲು ಕೆಡಹಿದರೆಂದು ಕಡಿದು ಸೇಡು ತೀರಿಸಿಕೊಳ್ಳುವದು ಮುಳ್ಳಿನ ಧರ್ಮ. ಆದರೆ ಹೂವಿನದಲ್ಲ. ನೀನು ಮುಳ್ಳಿನಷ್ಟು ಕೀಳನಲ್ಲ. ಪ್ರಾಮಾಣಿಕತನಕ್ಕೆ ಇಂದಿಲ್ಲದಿದ್ದರೂ ನಾಳೆಯಾದರೂ ಸುಖ ಸಿಕ್ಕಿತಷ್ಟೇ? ಬಿತ್ತಿದ ಬೆಳೆಯು ಗಾಳಿ ಮಳೆ ಬಿಸಿಲುಗಳ ಹೊಡೆತ ಸಹಿಸಬೇಕು. ತದನಂತರವೇ ಅದು ಫಲಿಸುತ್ತೆ."

ಮೊದಲನೇದು ಮತ್ತೆ "ಹುಚ್ಚು ಹೋರಾಟ. ನೀನಂತೂ ಈಗ ಹಾಳಾಗುವದು ಖಂಡಿತ. ರಾಯರ ಮಾತನ್ನು ಜ್ಞಾಪಿಸಿಕೋ. ನಿನ್ನ ಚನ್ನಪಟ್ಟಣಗಲ್ಲಿಯೊಳಗಿನ ಮನೆ-- ಹ, ಹ, ಹ. ನೀನು ಹಾಳಾಗುವ ಮೊದಲೇ ನಿನ್ನ ಹಾಳು ಮಾಡಿದವರ ಕತೆಯನ್ನು ಮುಗಿಸು.” ಸೋಮ ಒಮ್ಮೆಲೆ ತಲೆಯನ್ನು ಮೇಲೆತ್ತಿದ, ಅದು ಅವನ ದಾನವೀ ತಪಸ್ಸಿನ ಧ್ವಜವಾಗಿತ್ತು. ಈಗಾಗಲೇ ಊರ ಹೊರಗಿನ ಹೊಲಿಗೇರಿಯ ಹತ್ತಿರ ಬಂದುಬಿಟ್ಟಿದ್ದ.

ಮಾದರ ಗಿಡ್ಡ ಬದಿಯಿ೦ದಲೇ ಹೊಲಸು ಲಾವಣಿ ತೊದಲಿಸುತ್ತ ನಡೆದಿದ್ದ. ಗಿಡ್ಡನ ಮೈ ಮೇಲೆ ಎಚ್ಚರವೇ ಇರಲಿಲ್ಲ. ಸೋಮ ಚಿಟಕಿ ಬಾರಿಸಿದ. ಅವನು ವಿಚಾರಿಸುತ್ತಲೇ ಕೂಗಿದ.

"ಓಯ್ ಗಿಡ್ಡ.”

ಗಿಡ್ಡ ಆರೆಎಚ್ಚರದಲ್ಲಿಯೇ ಹೊರಳಿದ. ಮಾತು ಹೊರಡುವ ಮೊದಲೇ ತಲೆಯನ್ನು ಹೊರಳಾಡಿಸಿದ.

"ಏಯ್, ಗಡಂಗ ಎಲ್ಲೈತೋ?”
"ಇಲ್ಲಿ, ನೀಲೇಕಣೆಗೆ ಹೋಗಬೇಕು?"
"ನಡೆ, ಬರ್ತೀಯಾ?"
"ಬ್ಯಾಡ್ರಿ, ನಂಗೆ ಮನೆಗೆ ಹೋಗ್ಬೇಕು.”
"ಬಾರೋ, ನಿಂಗೂ ಎರಡು ಬಾಟ್ಲಿ ಕೊಡಸ್ತೇನೆ."

ಮನೆ ಕಡೆ ಹೊರಳಿದ ಗಿಡ್ಡನ ಮುಖ ನಿಲೇಕಣಿಯ ಕೊರಳಿತು. ಸೋಮನ ಮುಖದ ಮೇಲಿನ ಚಿಂತೆಯ ಕಳೆ ಕಾಣಿಸದಾಗಿತ್ತು. ಹಾದಿಯಲ್ಲಿ ಇಬ್ಬರೂ ಕೂಡಿಯೇ ನಡೆದಿದ್ದರೂ ಯಾರೂ ಮಾತಾಡುತ್ತಿರಲಿಲ್ಲ. ಗಿಡ್ಡನ