ಪುಟ:Hosa belaku.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ಸಾಲ ಪರಿಹಾರ

ದಳು. ಹೊಸಗಾಳಿ ಬೀಸಿದಾಗ ಕಲೆತ ಕಾರ್ಮೋಡಗಳು ಚಲವಿಚಲವಾಗಿದ್ದಂತೆ ಸೋಮನ ಮುಖ ನಿಚ್ಚಳವಾಗಿತ್ತು. ಅವನ ಮುಖದ ಮೇಲಿನ ಚರ್ಯೆಯನ್ನು ನೋಡಿ ಹೋದ ಕೆಲಸ "ಗಂಡು" ಎಂದು ಚಿನ್ನಿ ಮನದಲ್ಲಿಯೇ ನಿರ್ಧರಿಸಿದಳು. ಆದರೂ ಮನಸ್ಸಿಗೆ ಸಂದೇಹವನ್ನು ನಿವಾರಿಸಿ ಕೊಳ್ಳುವದಕ್ಕೆ-

"ಅಪ್ಪಾ ಹೋದ ಕೆಲಸs ಗಂಡೇ?"
"ಎರಡೂ ಅಲ್ಲ.”

ಚಿನ್ನಿ ಬಿಚ್ಚಿದಳು. ಅವನ ನಗುಮುಖ ನೋಡಿದರೆ ಸಂಕಟ ಮುಕ್ತತೆಯ ಸುಚಿನ್ಹ ಕಾಣುತ್ತಿತ್ತು. ಹಾಗಾದರೆ ? ಅಪ್ಪ ತನ್ನ ಜತೆಯಲ್ಲಿ ಸುಳ್ಳಾಡುತ್ತಿರಬಹುದೇ ? ಛೇ, ಹಿರೀ ಮೀನು ಕಿರಿ ಮೀನನ್ನು ನುಂಗುತ್ತಿರಬಹುದು. ನಾಯಿ ನಾಯಿಯನ್ನು ನೋಡಿ ಬೊಗಳಬಹುದು. ಆದರೆ ತನ್ನ ತಂದೆ-ತಾಯಿಯ ಸುಖವನ್ನೇ ಅರಿಯದ ತನಗೆ ಸೋಮನೇ ತಾಯಿಯಾಗಿದ್ದ. ತಾಯಿ ಮಗಳಿಗೆ ಎರಡು ಬಗೆಯಬಹುದೇ ?- ಅತಿ ವಿರಳ. ಆವಿರಳರಲ್ಲಿ ತನ್ನ ತಂದೆ ಕೂಡಲಾರ. ಮಗಳ ವಿಚಾರ, ಪ್ರಶ್ನಾರ್ಥಕ ಮುದ್ರೆ ನೋಡಿ ಸೋಮನೇ-

"ಅನ್ನ ಬೇಯಿಸಿದ್ದೀಯಾ?"
"ಇಲ್ಲ, ರಾಗಿ ಹಿಟ್ಟಿನ ಮುದ್ದೆ ತಿರಿದೀನಿ. ”

ಸೋಮ ಒಂದು ಸಲ ನಕ್ಕ. ಆ ನಗು ಶುಷ್ಕವಾಗಿತ್ತು. ಆ ನಗುವಿನ ಹಿಂದೆ ನೋವಿತ್ತು. ಹೆಣದ ಮೇಲೆ ಹೊದ್ದ ಶುಭ್ರ ವಸ್ತ್ರವಿರುತ್ತದಲ್ಲಾ .

"ಅಪ್ಪಾs… ಯಾಕೆ ನಕ್ಕೆ?”
"ಮತ್ತೇನು ಅಳಬೇಕೇ?”
"..........?" ಚಿನ್ನಿ ನಿರುತ್ತರಳಾದಳು.
"ಅಳು ಹೆಚ್ಚಾಯ್ತಂದ್ರೆ ನಗೂ ಬರ್ತದೆ ಕಣೆ?”

ಚಿನ್ನಿಗೆ ತಡೆಯಲಾಗಲಿಲ್ಲ. ಕಣ್ಣೀರು ಕೋಡಿಯಾಗಿ ಹರಿಯಿತು. ಸೋಮ ಚಿನ್ನಿಯನ್ನು ತಬ್ಬಿದ. ಆದರೆ ಅವನ ಕಣ್ಣಲ್ಲಿ ನೀರೇ ಬರಲಿಲ್ಲ. ಮತ್ತೆ ಅದೇ ತರಹದ ನಗು--ಎಷ್ಟು ಭೀಷಣವಾಗಿತ್ತು ಆ ನಗು.

ಆ ನಗು ನಾಳಿನ ಅಳುವಿಗೆ ನಾಂದಿಯಾಗುವಂತಿದ್ದರೆ––