ಪುಟ:Hosa belaku.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತಾಂತರ

೬೯

ದ್ದಾರಂತೆ. ನಿನ್ನ ಯಜಮಾನರು ಧಾರವಾಡದಲ್ಲಿ ಗಣ್ಯ ವಕೀಲರೆಂದು ಹೆಸರಾಗಿದ್ದಾರೆ. ಅವರಿಗೆ ಈ ಕೇಸಿನಲ್ಲಿ ಹೆಚ್ಚು ಜಾಗರೂಕತೆಯನ್ನು ವಹಿಸಲಿಕ್ಕೆ ಹೇಳು. ಇದು ನನ್ನೊಬ್ಬಳದೇ ಪ್ರಶ್ನೆ ಅಲ್ಲ. ಸ್ತ್ರೀ ಜಾತಿಯ ಮಾನದ ಪ್ರಶ್ನೆಯಾಗಿದೆ.

ನಾರಿಯನ್ನು ಬರೀ ಭೋಗದ ವಸ್ತುವೆಂದು ತಿಳಿದ ಈ ನೀಚ ಗಂಡಂದಿರಿಗೆ ನಾವು ಕೇವಲ ಭೋಗದ ವಸ್ತುವಲ್ಲ. ಕೆಣಕಿದಾಗ ವಿಷಕಾರುವ ಘಟಸರ್ಪವೆಂಬುದನ್ನು ತೋರಿಸಬೇಕಾಗಿದೆ.

ಈ ಕೋರ್ಟಿನಲ್ಲಿ ಅವರಿಗೆ ಜೈಲಾದರೆ ನನ್ನ ತಳಮಳಿಸುವ ಜೀವಕ್ಕೆ ಅತ್ಯಾನಂದವಾಗುತ್ತದೆ. ಆಗಲೇ ನನಗೆ ಶಾಂತಿ–ಶಾಂತಿ–ಶಾಂತಿ. ಆಗಲೇ ನನಗೆ ಸಮಾಧಾನ, ಸಮಾಧಾನ.

ನಿನ್ನ
ನಲಿನಿ ದೇಶಪಾಂಡೆ.


ಪತ್ರವನ್ನು ಓದಿ ಮುಗಿಸಿದಾಗ ನನ್ನ ಮೈಯೆಲ್ಲಾ ಬೆವೆತಿತು. ಪತ್ರದಲ್ಲಿಯ ಸೇಡಿನ ಕಾಡ್ಗಿಚ್ಚಿಗಾಗಿ, ನಾನು ಆಗ ಕೋರ್ಟಿನಲ್ಲಿ ಹಿಡಿದ ಕೇಸು ನಲಿನಿಯ ತಂದೆಯವರದೇ ಆಗಿತ್ತು. ಅವಳ ತಂದೆಯೂ ಸಾಮಾನ್ಯ ಮನೆತನಕ್ಕೆ ಸೇರಿದವರಲ್ಲ, ತುಂಬಾ ಸಿರಿವಂತರು. ಮೇಲಾಗಿ ಒಂದು ತಾಲ್ಲೂಕಿನ ಮಾಮಲೇದಾರರು. ಅದಕ್ಕೆಯೇ ನಾನು ಅವರ ಖಟ್ಟೆಯನ್ನು ಹಿಡಿಯುವದಕ್ಕೆ ಮನಸ್ಸು ಮಾಡಿದ್ದೆ. ಹಿಡಿದೂ ಬಿಟ್ಟಿದ್ದೆ. ಕೊರತೆಯ ದಿನಗಳಲ್ಲಿ ನನಗೆ ಈ ಕೇಸು ಒರತೆಯಾಗಿಯೇ ಕಂಡಿತ್ತು. ನನಗೆ ಆ ಬಡಪಾಯಿಯ ಗೋಳು ಅಷ್ಟಕ್ಕಷ್ಟೇ ಆಗಿತ್ತು.

––ಡಾಕ್ಟರರು ತಮ್ಮ ಕರ್ತವ್ಯ ನೆರವೇರಿಸುತ್ತಾರೆ. ರೋಗಿ ಸತ್ತರೆ, ಅವರ ಕಣ್ಣಲ್ಲಿ ನೀರು ಬರಬಹುದೇ?

ಆದರೆ ಈ ಪತ್ರ ಓದಿದ ನಂತರ ನನ್ನ ಭಾವವೇ ಬದಲಾಯಿತು. ಯಾವದೋ ಒಳಗುದಿ ನನ್ನ ಎದೆಯನ್ನು ಕೊರೆಯತೊಡಗಿತ್ತು. ನಾನಾರಿಗೂ ಅಂಜದಿದ್ದರೂ ಹೆಣ್ಣನ್ನು ನೋಯಿಸುವ ಗೋಜಿಗೆ ನಾನು ಹೋಗುತ್ತಿರಲಿಲ್ಲ. ಆದರೆ ಈ ಹೆಣ್ಣು ಬರೆದ ಪತ್ರ ನನ್ನ ಹೃದಯಚದ ಕಳವಳಗಳ ಮಿಶ್ರಣದ ಹುಡಿಯನ್ನೆಬ್ಬಿಸಿತು.