ಪುಟ:Hosa belaku.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತಾ೦ತರ

೭೧

ಮರುದಿನ ಕೋರ್ಟಿಗೆ ಹೊರಡುವವನಿದ್ದೆ. ಊಟ ಮಾಡಿ ಮನೆಯಿಂದ ಹೊರಬೀಳುವದರಲ್ಲಿದ್ದೆ. ಆಗಲೇ ಪೋಸ್ಟಮನ್ ನನ್ನ ಕೈಗೆ ದಪ್ಪವಾದ ಪಾಕೀಟನ್ನು ಕೊಟ್ಟು ನಡೆದ. ನಾನು ಇಂಥ ದೊಡ್ಡ ವಕೀಲನಾವರೂ ಶುಭಾಶುಭ ಫಲಗಳನ್ನು ನೋಡುವ ನನ್ನ ಸಂಪ್ರದಾಯತೆ ನನ್ನಲ್ಲಿ ಹಾಗೆಯೇ ಉಳಿದಿತ್ತು. ಬಂದ ಪತ್ರದಿಂದ ನನಗೆ ಶುಭವೇ ಅಶುಭವೇ ಎಂದ. ವಿಚಾರಿಸುತ್ತ, ಸ್ವಲ್ಪ ಅಧೀರತೆಯಿಂದಲೇ ಪಾಕೀಟನ್ನು ಒಡೆದು ಓದತೊಡಗಿದೆ.

ವಿತ್ರವರ್ಯನಿಗೆ--

ದೇಶಪಾಂಡೆಯ ಅನಂತ ನಂದನೆಗಳು. ತರುವಾಯ ಇದೇ ಪತ್ರವನ್ನು ನಾಲೈದು ದಿನಗಳಿಂದ ಬರೆಯುತ್ತಿದ್ದೇನೆ. ಬರೆದು ಎಷ್ಟೋ ಸಲ ಪೂರ್ಣವಾಗಿ ಮುಗಿಸಿದೆ. ಆದರೂ ಅದನ್ನು ಪೋಷ್ಟಿನ ಡಬ್ಬಿಯನ್ನು ಕಾಣಿಸಲಾಗಲಿಲ್ಲ. ಎಷ್ಟು ಪತ್ರಗಳನ್ನು ಹಾಗೆ ಹರಿದು ಒಗೆದೆನೋ ತಿಳಿಯದು. ಆದರೆ ಈಗ ಯಾವುದೋ ಒಂದು ಧೈರ್ಯದಿಂದ ಈ ಪತ್ರ ಬರೆಯುತ್ತಿದ್ದೇನೆ. ಎದುರು ನಿಂತು ನಾನು ನನ್ನ ಕರುಣ ಕಥೆಯನ್ನು ಹೇಳಲೆತ್ನಿಸಿದ್ದರೆ ನೀನು ನನ್ನನ್ನು ಮಾತನಾಡಿಸಿಯೇಗೊಡುತ್ತಿರಲಿಲ್ಲ. ಇಡೀ ಸಮಾಜ ನನ್ನನ್ನು ಇಂದು ಬಯ್ಯುವಂತೆ, ನೀನೂ ನನ್ನ ಮೇಲೆ ಬೈಗಳ ಸುರಿಮಳೆಯನ್ನು ಸರಿಸುತ್ತಿದ್ದೆ. ಆದರೆ ಹೃದಯದ ಕಪಾಟವನ್ನು ತೆರೆದಿಡುವದಕ್ಕೆ ಪತ್ರವೊಂದೇ ಶುದ್ಧ ಸಾಧನ.

--ನಾನು ನೀನೂ ಕೂಡಿಯೇ ಓದಿದೆವು, ಆಡಿದೆವು. ನಾನು ಪೋಲಿಸ ಖಾತೆಯನ್ನು ಸೇರಿದೆ. ನೀನು ವಕೀಲನಾದೆ. ಮುಂದೆ ನಮ್ಮಿಬ್ಬರ ಮದುವೆಗಳೂ ಆದವು. ನನ್ನ ಮದುವೆಯಾದ ದಿನದಿಂದ ತೊಂದರೆಯ ಕಾಲ ಪ್ರಾರಂಭವಾಯಿತು.

'––ಕಾಮಪ್ರಕೃತಿ, ಪ್ರೇಮ ಸಂಸ್ಕೃತಿ' ಎಂದು ಬಲ್ಲವರು ಹೇಳುತ್ತಾರೆ. ನನ್ನ ಸೌಭಾಗ್ಯವೋ ದುರ್ಭಾಗ್ಯವೋ ನನ್ನ ಹೆಂಡತಿಯಾಗಿ ಬಂದವಳು, ಸಿರಿವಂತರ ಮನೆಯಲ್ಲಿ ಜನ್ಮವೆತ್ತಿದ್ದಳು. ತನ್ನ ಸಿರಿತನ, ತನ್ನ ದೊಡ್ಡಸ್ತಿಕೆಯಲ್ಲಿಯೇ ಅವಳು ಸದಾಕಾಲ ಕಳೆಯಹತ್ತಿದ್ದಳು. ಕಾಮಪ್ರಕೃತಿ ಎಂದು ಹೇಳಿದ್ದಾರಷ್ಟೇ. ಅದೊಂದು ಸಹಜ ಪ್ರಕೃತಿ ಸ್ವಭಾವ. ಹಸಿವಾದಾಗ