ಪುಟ:Hosa belaku.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತಾಂತರ

೭೫


"––ಹುಚ್ಚು ಮಹಮ್ಮದ ತಘಲಕ ದೇಶದಲ್ಲಿಯ ಆರ್ಥಿಕ ಪರಿಸ್ಥಿತಿ ಗಂಭೀರವಾದಾಗ, ದುಡ್ಡು-ಆಣೆಗಳನ್ನೇ ರೂಪಾಯಿಗಳೆಂದು ತಿಳಿಯಬೇಕೆಂದು ಆಜ್ಞೆ ವಿಧಿಸಿದನು. ಇದರಿಂದ ಹೊರದೇಶದವರು ಈ ದೇಶಕ್ಕೆ ಬಂದು ಕೊಂಚ ಹಣದಲ್ಲಿ ಅಪಾರ ಸರಕನ್ನು ಮಾರಲಿಕ್ಕೆ ಕೊಂಡು ಹೊರಗೆ ಹೋಗಿ ಲಾಭ ಹೊಡೆಯಹತ್ತಿದರು.....

ಇತಿಹಾಸದ ಕೆಲ ಸಾಲು ಕಿವಿಗೆ ಅಪ್ಪಳಿಸತೊಡಗಿತ್ತು. ನಿಂತಲ್ಲಿಯೇ ವಿಚಾರಿಸತೊಡಗಿದೆ. "ದ್ವಿಭಾರ್ಯಾ ಪ್ರತಿಬಂಧಕ" ಕಾಯಿದೆ, ಮಹಮ್ಮದ ತಘಲಕನ ಆರ್ಥಿಕ ಕಾಯಿದೆಯಂತೆ ಸ್ವರೂಪ ತಳೆದರೆ.....?

ಹಲ್ಲಿ ಲೊಟುಗುಟ್ಟಿತು. ಅಂಜಿದೆ. ಮನಸ್ಸಿಲ್ಲದ ಮನಸ್ಸಿನಿಂದ ಕೋರ್ಟಿನ ಕಡೆಗೆ ನಡೆದೆ.