ಪುಟ:Hosa belaku.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡುವಿನ ಪರದೆ

೮೯


ಕ್ಯಾಪ್ಟನ್ ರಾಮನ್ ನಾಯರ್, ಬಾಥೂ ರೋಡಿನಲ್ಲಿಯ ತಮ್ಮ ಕ್ವಾರ್ಟರ್‍ಸ್ ದಲ್ಲಿ ಉದಾಸ ಚಿತ್ತರಾಗಿ ಶತಪಧ ಹಾಕುತ್ತಿದ್ದರು. ಹಾಸ್ಪಿಟಲಿನಿಂದ ಹೊರಬಂದು ಎರಡು ದಿನಗಳಾಗಿದ್ದರೂ, ಅವರಿಗೆ ಹೊಸ ವಾತಾವರಣ ಅಷ್ಟು ಬೇಗ ಹಿಡಿಯಲಿಲ್ಲ. ಕೋಣೆಯಲ್ಲಿ ಇನ್ನೂ ಶತಪಥ ನಡೆದೇ ಇತ್ತು. ಮಿಲ್ಟ್ರೀ ಬೂಟ್ಸಿನ ಖಣ್ ಖಣ್ ಸಪ್ಪುಳವಷ್ಟೇ, ಶಬ್ದ ಮಾಡಿ ಶಾಂತತೆಯನ್ನು ಕೆಡಿಸುತ್ತಿತ್ತು. ರಾಮನ್‍ರಿಗೆ ತಮ್ಮ ಹೃದಯದ ಮೇಲೆ, ಕನ್ನ ಕೊರೆವ ಕಳ್ಳ ಹಾರೆಕೋಲಿನಿಂದ ಬಡಿದಂತೆ-ಆ ಶಬ್ದ ಭಾಸವಾಗುತ್ತಿತ್ತು. ನಡೆದಾಡುತ್ತಿರುವಂತೆಯೆ ರಾಮನ್ ತಮ್ಮ ಬಲದ ಕಿಸೆಯಿ೦ದ ಪ್ಲೇಯರ್ಸ್ ನೇವಿಕಟ್ ತೆಗೆದು ಬಾಯಲ್ಲಿರಿಸಿ, ಹೊಗೆಯಾಡಿಸತೊಡಗಿದರು. ಕೋಣೆಯ ತುಂಬೆಲ್ಲ ಹೊಗೆ ತುಂಬತೊಡಗಿತ್ತು. ಅದೇ ಆಗ ಜಾನಕಿಯಿಂದ ಬಂದ ಪತ್ರವಂತೂ ರಾಮನ್ ರ ಒಳ ಹೃದಯದಲ್ಲಿ ಪ್ರಚ೦ಡ ಹೊಗೆ ಎಬ್ಬಿಸಿಬಿಟ್ಟಿತ್ತು. ರಾಮನ್‍ರು ಮತ್ತೊಮ್ಮೆ ಆ ಪತ್ರವನ್ನು ಓದಲು ತೊಡಗಿದರು.

72 I. G. H.
Kaula Lumpur,


"ಕ್ಯಾ ರಾಮನ್ ನಾಯರರಿಗೆ–

ವಂದನೆಗಳು. ತಾವು ಹಾಸ್ಪಿಟಲಿನಿಂದ ಬಿಡುಗಡೆಯಾಗಿ ಹೋಗುವಾಗ, ನಾನು ತಮ್ಮನ್ನು ಕಾಣಲಿಲ್ಲ. ಕಾಣಲಿಕ್ಕೇಕೋ ಮನಸ್ಸು ಹಿಂಜರಿಯಿತು. ನೀವು ನನ್ನನ್ನು ಚುಂಬಿಸಿದಿರಿ. ಸ್ನಾನ ಮಾಡದೆ ದೇವರನ್ನು ಮುಟ್ಟುವುದು ಪಾಪವೆಂದೇ ನನ್ನ ಭಾವನೆ. ನಾನೂ ಹೆಣ್ಣು. ಈಗಿರುವ ನನ್ನ ಬಾಳು ಅಪೂರ್ಣವೆಂಬುದು ನನಗೆ ಗೊತ್ತಿದೆ. ನನಗೂ ಮದುವೆಯಾಗಬೇಕೆ೦ಬ ಹ೦ಬಲವಿದೆ. ಸುಖವಾಗಿ ಸಂಸಾರ ಸಾಗಿಸಬೇಕೆಂಬ ಸ್ವಪ್ನವನ್ನೂ ಕಾಣುತ್ತಲಿದ್ದೇನೆ.

ಆದರೆ ನನ್ನ ಇತಿಹಾಸದ ಹಿನ್ನೆಲೆ ತುಂಬ ಗಂಭೀರವಾಗಿದೆ. ಅದರ ಪರಿಣಾಮವಾಗಿಯೇ ನಾನು ನರ್ಸ್‌ವೃತ್ತಿಯನ್ನು ಕೈಕೊಂಡೆ. ಈ ಐದು ವರ್ಷಗಳ ನರ್ಸ್‌ವೃತ್ತಿಯಲ್ಲಿ, ನನಗೆ ಕೆಲಸದಲ್ಲಿ ಸಂಬಂಧಬರುತ್ತಿದ್ದ ಗಂಡಸರನ್ನೆಲ್ಲ ನಾನು ಪರೀಕ್ಷಿಸುತ್ತಿದ್ದೆ. ಎಲ್ಲರೂ ನನ್ನ ಸೌಂದರ್ಯವನ್ನು ಕೊಂಡಾ