ಪುಟ:Indic Wikipedia Policies and Guidelines Handbook.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾರ್ಯನೀತಿಗಳ ಬಗ್ಗೆ

ವಿಕಿಪೀಡಿಯಾ ಸಮುದಾಯದಲ್ಲಿ ಮಂಡಿಸಿ,ಚರ್ಚೆಗೊಳಪಟ್ಟು, ಒಪ್ಪಿಗೆ ಪಡೆದ ಕಾರ್ಯನಿರ್ವಹಣಾ ನಿಯಮಗಳೇ ಕಾರ್ಯನೀತಿ ಮತ್ತು ಮಾರ್ಗದರ್ಶಿಗಳು. ಇದು ಮುಖ್ಯವಾಗಿ ಕೆಳಕಂಡ ಅಂಶಗಳನ್ನು ನಿರ್ದೇಶಿಸುತ್ತದೆ

  1. ಸಮುದಾಯದ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಸಮುದಾಯವೇ ಒಪ್ಪಿದ ನಿಯಮಗಳು
  2. ಮಾನದಂಡಗಳನ್ನ ಮತ್ತು ಉತ್ತಮ ಆಚರಣೆಗಳು

ಕಾರ್ಯನೀತಿಗಳ ವಿಧಗಳು

ಹಲವು ತರಹದ ಕಾರ್ಯನೀತಿಗಳಿರುತ್ತದೆ. ಅವೆಂದರೆ

ಪಠ್ಯ

ವಿಕಿಪೀಡಿಯಾದಲ್ಲಿರುವ ಪಠ್ಯ ಯಾವ ರೀತಿಯಾಗಿರಬೇಕು ಎಂಬುದನ್ನು ಇದು ತಿಳಿಸುತ್ತದೆ. ಉದಾಹರಣೆಗೆ: ರಸಹೀನವಾಗಿ,ವಿಶೇಷಣಗಳಿಲ್ಲದೆ,ನಿಷ್ಪಕ್ಷಪಾತವಾಗಿ, ಯಾವುದೇ ಮೂಲ ಕೃತಿಯ ಚೌರ್ಯವಾಗದಂತೆ, ಉಲ್ಲೇಖಗಳ ಸಹಿತ

ನಡತೆ

ಸಂಪಾದಕರು ಹೇಗೆ ನಡೆದುಕೊಳ್ಳಬೇಕು ಮತ್ತು ಪರಸ್ಪರರೊಂದಿಗೆ ಹೇಗೆ ವ್ಯವಹರಿಸಬೇಕು ಎಂದುದನ್ನು ಇದು ತಿಳಿಸುತ್ತದೆ ಉದಾಹರಣೆಗೆ: ವೈಯುಕ್ತಿಕ ನಿಂದನೆ ಸಲ್ಲ, ಮಾಹಿತಿ ಹಕ್ಕಿನ ಉಲ್ಲಂಘನೆ ಸಲ್ಲ, ಸಾಮಾಜಿಕ ನಿಯಮಗಳಿಗೆ ಬದ್ದತೆ, ದೌರ್ಜನ್ಯ,ದಬ್ಬಾಳಿಕೆ ಸಲ್ಲ ಇತ್ಯಾದಿ

ಅಳಿಸುವಿಕೆ

ವಿಕಿಪಿಡಿಯಕ್ಕೆ ಸೂಕ್ತವಲ್ಲದ ಪಠ್ಯವನ್ನು ಅಳಿಸುವಿಕೆಯ ಪ್ರಕ್ರಿಯೆಗಳ ಬಗ್ಗೆ ಮತ್ತು ನಿಯಮಗಳ ಬಗ್ಗೆ ಇದು ನಿರ್ದೇಶಿಸುತ್ತದೆ. ಉದಾಃ ಪಠ್ಯವನ್ನು ಶೀರ್ಘವಾಗಿ ಅಳಿಸಲು ಇರಬೇಕಾದ ಮಾನದಂಡಗಳು,ಅಳಿಸುವಿಕೆಗೆ ಪ್ರಸ್ತಾಪಿಸುವುದು,ವಿವಾದಿತ ಪುಟಗಳು ಇತ್ಯಾದಿ

ಕಾರ್ಯರೀತಿ

ವಿಕಿಪೀಡಿಯದ ಮಾನದಂಡಗಳನ್ನು ಕಾಯ್ದುಕೊಳ್ಳಲು ಅನುವಾಗುವಂತಹ ಕಾರ್ಯನೀತಿಗಳ ಬಗ್ಗೆ ಇದು ತಿಳಿಸುತ್ತದೆ ಉದಾ: ಬ್ಲಾಕ್ ಮಾಡುವ ನಿಯಮಗಳು, ನಿಷೇಧ ನಿಯಮಗಳು, ರಕ್ಷಣೆ ನಿಯಮಗಳು

ಚಿತ್ರಗಳು

ವಿಕಿಪೀಡಿಯದಲ್ಲಿ ಚಿತ್ರಗಳನ್ನು ಬಳಸುವಾಗ ಯಾವ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನು ಇದು ತಿಳಿಸುತ್ತದೆ

ಯೋಜನೆಗಳಿಗೆ ಸಂಬಂಧಪಟ್ಟ ನಿಯಮಗಳು

ಕೆಲವು ವಿಕಿಪೀಡಿಯ ಯೋಜನೆಗಳಲ್ಲಿ ಆಯಾ ಯೋಜನೆಗಳಿಗೆ ಸಂಬಂಧಪಟ್ಟ ನಿಯಮಗಳಿರಬಹುದು.

ಕಾರ್ಯನೀತಿ ಪುಟದ ಲಕ್ಷಣಗಳು

ಒಂದು ಕಾರ್ಯನೀತಿ ಪುಟ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು

ಸ್ಪಷ್ಟತೆ

ಕಾರ್ಯನೀತಿಗಳನ್ನು ಸರಳ ಮತ್ತು ಸ್ಪಷ್ಟ ವಾಕ್ಯಗಳಲ್ಲಿ ತಿಳಿಸಬೇಕು. ಇದು ಅಸ್ಪಷ್ಟ ಮತ್ತು ಗೊಂದಲಮಯ ವಾಕ್ಯಗಳನ್ನು ಒಳಗೊಂಡಿರಬಾರದು

ಸಂಕ್ಷಿಪ್ತತೆ

ಕಾರ್ಯನೀತಿ ಪುಟ ಸಂಕ್ಷಿಪ್ತವಾಗಿಯೂ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಳ್ಳುವಂತೆಯೂ ಇರಬೇಕು.ಅಂಶಗಳ ಪುಸರಾವರ್ತನೆ ಸಲ್ಲ

ಉದ್ದೇಶ ಮತ್ತು ಧ್ಯೇಯಗಳ ಸ್ಪಷ್ಟೀಕರಣ

ಕಾರ್ಯನೀತಿಯ ಉದ್ದೇಶವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು

ಸಮುದಾಯದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಿಕೆ

ಈ ವಿಷಯದ ಬಗ್ಗೆ ಸಮುದಾಯದ ನಿಲುವುಗಳೇನು ಮತ್ತು ಒಪ್ಪಿಗೆಯೇನು ಎಂಬುದನ್ನು ಸ್ಪಷ್ಟಪಡಿಸಬೇಕು

ಪರಸ್ಪರ ವಿರೋಧಿಸುವಂತಿರಬಾರದು

ಒಂದು ಕಾರ್ಯನೀತಿ ಈಗಾಗಲೇ ಜಾರಿಯಲ್ಲಿರುವ ಕಾರ್ಯನೀತಿಗೆ ವಿರೋಧಿಯಾಗಿರಬಾರದು.