ಪುಟ:KELAVU SANNA KATHEGALU.pdf/೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

| 11

ಸಂತೃಪ್ತ. ಸರಳವಾದ ಬದುಕು, ಅತಿ ಸರಳವಾದ ಬಯಕೆ, ಬಡತನದ ರೇಖೆಗೂ ಕೆಳಗಿರುವ ಸೋಮನ ಹೃದಯ ಉದಾರವಾಗಿದೆ. ತಾನು ಹೀಗಿದ್ದರೂ ಆತನಿಗೆ ಇತರರ ಒಳಿತು ಕುರಿತು ಕಳಕಳಿ. ಜನ ಯಾಕೆ ಹೀಗೆ ಮೋಸ ಮಾಡಬೇಕೆಂಬುದು ಅವನಿಗೆ ಅರ್ಥವಾಗದ ಒಗಟು. ಯುದ್ಧ ಯಾತಕ್ಕಾಗಿ ಎಲ್ಲಿ, ಯಾರಿಗಾಗಿ, ತನಗೂ ಅದಕ್ಕೂ ಏನು ಸಂಬಂಧ-ಇವೆಲ್ಲಾ ಯಕ್ಷಪ್ರಶ್ನೆಗಳೇ. ಒಂದು ವಾರಕ್ಕೆ ಬೇಕಾದ ಒಂದು ಶೀಷೆ ಚಿಮಿಣಿ (ಸೀಮೆ ಎಣ್ಣೆ ಸಿಗಲಿಲ್ಲವೆಂಬುದಷ್ಟೇ ಅವನ ತಕರಾರು. ತನಗೆ ತಿಳಿದ ಪರಿಚಿತ ಅಂಗಡಿಯ ರಾಯರು ಕೂಡ ದಿನ ದಿನಕ್ಕೆ ಕ್ಷಿಪ್ರಗತಿಯಲ್ಲಿ ಹೊಂದಿದ ಮಾರ್ಪಾಟಿನಿಂದ ಆತ ಚಕಿತನಾಗುತ್ತಾನೆ. ದುಬಾರಿ ಬೆಲೆ ತೆತ್ತು ದವಸಧಾನ್ಯ ಕೊಳ್ಳುವುದು ತನ್ನಿಂದ ಅಸಾಧ್ಯವೆಂಬ ಹತಾಶ ಸ್ಥಿತಿಗೆ ತಲುಪಿದ ಮೇಲೆ ದೇಹದಲ್ಲಿ ಇಂಗುತ್ತಿರುವ ನೆತ್ತರು ನೆನಪಿಗೆ ಬರುತ್ತದೆ. ಆದರೆ ಪ್ರತಿಭಟಿಸಲು ಬೇಕಾದ ದಾಸ್ತಾನು ಅವನಲ್ಲಿಲ್ಲ. ತನ್ನ ಅಂಗಡಿಯಲ್ಲಿ ಹಗಲು ವ್ಯಾಪಾರವಿಲ್ಲ. ಚಿಮಿಣಿ ಎಣ್ಣೆ ಖರೀದಿಸಿ 'ವೋಚರ್' ಕೇಳಲು ಧೈರಮಾಡಿ ಅಮಾನಿತನಾಗುತ್ತಾನೆ. “ಅನ್ಯಾಯ' ಎಂದು ಹೇಗೋ ಕೂಗುತ್ತಾನೆ. ಮನೆಯಲ್ಲಿ ಮಗಳು ಜ್ವರತಪ್ತಳು. ಕೂಳಿನ ಮುಖ ಕಂಡರೆ ತಾನೆ! ಚಿಮಿಣಿ ಎಣ್ಣೆಯ ಹಂಬಲ ಹೊತ್ತು ಕೈಯಲ್ಲಿ ದೀಪದ ಬುಡ್ಡಿ ಹಿಡಿದು ಹೊರಟ ಸೋಮನ ಪ್ರಜ್ಞೆ ತಪ್ಪುತ್ತದೆ. ಬವಳಿಯಿಂದ ಅರೆ ಅರಿವಿಗೆ ಮರಳಿದ್ದು ಹೋಟಲಿನವರು ಎಸೆದ ಬಿಸಿನೀರಿನಿಂದ, ಬುದ್ಧಿ ಮಾಂದ್ಯಕ್ಕೆ ತಿರುಗಿದ್ದ ಸೋಮ 'ಎಣ್ಣೆ' ಎಂದು ಕೂಗುತ್ತಾ ಹೊರಟರೆ ಹುಡುಗರು ಅವನಿಗೆ ಹುಚ್ಚನ ಪಟ್ಟ ಕಟ್ಟಿದರು. ನಿರ್ದಯಿ ಸಮಾಜ ಆತನನ್ನು ಕಂಡದ್ದು 'ಹುಚ್ಚ'ನಾಗಿ, ವಾಹನವೊಂದು 'ಹುಚ್ಚ' ಸೋಮನನ್ನು ಚರಂಡಿಗೆಸೆದು ಮುಂದೆ ಸಾಗಿತ್ತು. ಸೋಮ ಗುಡಿಸಿ ಬಿಸಾಕಿದ ಕಾಲಕಸಕ್ಕಿಂತ ಕಡೆಯಾಗಿದ್ದ, ಯುದ್ಧ ಕರುಣಿಸಿದ್ದ ಜೀವನ ವಿಧಾನಕ್ಕೆ ಬಲಿಯಾಗಿದ್ದ. ಮೌಲ್ಯಗಳು ಅಪಮೌಲ್ಯವಾಗುವುದು ಈ ಕಥೆಯ ಜೀವನಾಡಿ, ಶ್ರೀಸಾಮಾನ್ಯನ ನಿತ್ಯ ಜೀವನ ನಿರ್ವಹಣೆಗೆ ಬೇಕಾಗುವ ಸೀಮೆ ಎಣ್ಣೆಯ ಮಾರಾಟ ವಿಚಾರದಲ್ಲೂ ಜನ ಚಕ್ಕಂದವಾಡಬಲ್ಲರೆಂದ ಮೇಲೆ ಬೇರೆ ಯಾವುದಕ್ಕೆ ತಾನೇ ಹೇಸುತ್ತಾರೆ!

'ಮೈಖೆಲ್‌ಮಾಸ್‌ ಪಿಕ್‌ನಿಕ್' ಕೂಡ ಈ ಶತಮಾನದ ಐದನೆಯ ದಶಕದ ಆರಂಭ ವರ್ಷಗಳಲ್ಲಿ ಪ್ರಕಟವಾದ ಕಥೆ: ಮೊದಲಿನ ಎರಡು ಕಥೆಗಳೂ ಅಷ್ಟೆ, ಇನ್ನೂ ಇಪ್ಪತ್ತರ ಹರೆಯ ದಾಟದ ಚಿಗುರು ಮೀಸೆಯ ತರುಣನ ವಿಚಾರ ತರಂಗಗಳನ್ನು ಈ ಸಂಕಲನದ ಮೊದಲನೆಯ ಮೂರು ಕಥೆಗಳು