ಪುಟ:KELAVU SANNA KATHEGALU.pdf/೧೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕತೆಗಾರನ ಟಿಪ್ಪಣಿ
95
 

ಒಂಟಿ ನಕ್ಷತ್ರ ನಕ್ಕಿತು

೧೯೪೭ರ ಬೇಸಗೆಯಲ್ಲಿ ಹರಪನಹಳ್ಳಿಯಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ, ಹುಬ್ಬಳ್ಳಿಯಿಂದ. 'ಜನಶಕ್ತಿ' ಸಾಪ್ತಾಹಿಕ ಅದೇ ಆಗ ಆರಂಭವಾಗಿತ್ತು. ಅವಸರದಲ್ಲಿ ಹಿಂತಿರುಗಬೇಕು. ತುಂಗಭದ್ರಾ ಜಲಾಶಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಆಗ. ಅಲ್ಲಿದ್ದ ಎಂಜಿನಿಯರೊಬ್ಬರಿಗೆ ಪರಿಚಯ ತಿಳಿಸುವ ಕಾಗದ ನನ್ನ ಬಳಿ ಇತ್ತು. ಹರಪನಹಳ್ಳಿಯಿಂದ ಅಲ್ಲಿಗೆ ಧಾವಿಸಿದೆ. ಹಲವು ಸಹಸ್ರ ಜನ ದುಡಿಯುತ್ತಿದ್ದ ಚಿತ್ರವನ್ನು ನೋಟದಲ್ಲಿ ಸೆರೆಹಿಡಿದು ಮನಸ್ಸಿನಲ್ಲಿ ದಾಖಲಿಸಿದೆ. ೧೯೫೭ ರಲ್ಲಿ ದಿಲ್ಲಿಯ ಸಾಹಿತ್ಯ ಸಮಾರೋಹಕ್ಕೆ ಕರೆದರು. (ಆಕಾಶವಾಣಿ ವ್ಯವಸ್ಥೆ) ಅಲ್ಲಿ ಈ ಹೊಸ ಕತೆಯ ವಾಚನ. ದೇಶದ ಹದಿನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಸಾರ, ಒಳಗಿದ್ದ ಮಸುಕು ರೇಖೆಗಳನ್ನು ಆಧರಿಸಿ ಚಿತ್ರ ರಚಿಸಿದೆ, ಬಳಸಿದ್ದು ಕಲ್ಪನೆಯ ಬಣ್ಣಗಳನ್ನು, ಹೀಗೆ ಸಿದ್ಧವಾಯಿತು-ಒಂಟಿ ನಕ್ಷತ್ರ ನಕ್ಕಿತು.' ದಿಲ್ಲಿ ಯಾತ್ರೆಯಲ್ಲಿ ಜತೆಗಿದ್ದರು: ಶ್ರೀರಂಗ, ವಿ. ಸೀ. ಬೇಂದ್ರೆ ಮತ್ತು ನಾ. ಕಸ್ತೂರಿ, ವೇದಿಕೆಯ ಮೇಲೆ ಭಾರತೀಯ ಕತೆಗಾರರ ಜತೆ ಕುಳಿತವರು ಆಗಿನ ಪ್ರಧಾನಿ ಜವಾಹರಲಾಲ ನೆಹರು.

ಹಮಾಲ ಇಮಾಮ್‍ಸಾಬಿ

ಇಮಾಮ್‌ಸಾಬಿಯ ರೂಪದರ್ಶಿಯನ್ನು ನಾನು ಕಂಡದ್ದು ಧಾರವಾಡದ ರೈಲು ನಿಲ್ದಾಣದಲ್ಲಿ, ಆ ಊರಿನಲ್ಲಿ ನಾನು ವಾಸವಾಗಿದ್ದಾಗ, ೧೯೫೮- ೬೧ರ ಅವಧಿಯಲ್ಲಿ. ಮುಖಚರ್ಯೆ, ವಯಸ್ಸಿಗೆ ಸಂಬಂಧಿಸಿ ಮಾತ್ರ ಏಕರೂಪತೆ. ಮಿಕ್ಕಿದ್ದು ಕಲ್ಪನೆ.

ಮೊದಲ ಪ್ರಕಟಣೆ 'ಪ್ರಜಾಮತ' ದೀಪಾವಳಿ ವಿಶೇಷಾಂಕದಲ್ಲಿ (೧೯೬೧). ಸಂಪಾದಕರು: ಹ. ವೆಂ. ನಾಗರಾಜ ರಾವ್,

ಹರಕೆಯ ಖಡ್ಗ

ಟಿಪ್ಪು (ಟೀಪೂ) ಬ್ರಿಟಿಷರ ವೈರಿಯಾಗಿದ್ದ. ಅವರಿಗಿದಿರಾಗಿ ಹೋರಾಡುತ್ತ ಮಡಿದ. ಅವನ ಮರಣಾನಂತರ ಕೆಲ ವರ್ಷ-ಹತ್ತೊಂಭತ್ತನೆಯ ಶತಮಾನದ ಆದಿ ಭಾಗ-ಕನ್ನಡ ನೆಲದಲ್ಲಿ ಆಂಗ್ಲರಿಗೆ ದುಃಸ್ವಪ್ನವಾದವನು ಚನ್ನಗಿರಿಯ ಧೋಂಡಿಯಾ ವಾಫ್, ೧೯೫೦ ರ ವರ್ಷಗಳಲ್ಲಿ