ಪುಟ:KELAVU SANNA KATHEGALU.pdf/೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

18

ಒಳನೋಟಕ್ಕೆ ಇನ್ನೆರಡು ಸoಗತಿಗಳು ನಿಚ್ಛಳವಾಗುತ್ತವೆ ರೈಲು ಮನೆಯ ಪರಿಸರ ನಿರ್ಮಿಸುವಿಕೆ ಮತ್ತು ಮೊಮ್ಮಗನ ಜನನದ ಒತ್ತಡದ ಪ್ರಕ್ರಿಯೆ. ಕಥೆಗಾರರ ಚುರುಕು ಕಣ್ಣು ಸವಿವರವಾಗಿ ರೈಲು ನಿಲ್ದಾಣದ ಒಟ್ಟು ಆವರಣವನ್ನೂ ಅಲ್ಲಿನ ವ್ಯವಹಾರವನ್ನೂ ಫೋಟೋ ತೆಗೆದಿಟ್ಟಿದೆ. ಪೋರ್ಟರುಗಳ ನಿಕಟ ಪರಿಚಯ, ರೈಲುಗಳ ಆಗಮನ ನಿರ್ಗಮನ ಕಾಲದ ಜನಸಮ್ಮರ್ದ ಹಮಾಲನ ಸ್ವoತ ಸಂಸಾರದವರು ಊಟ ತಿಂಡಿ ತರುವುದು, ಜತೆಗಾರರ ಗುಣಸ್ವಭಾವ ಪ್ರಕಟವಾಗುವ ಸಂದರ್ಭಗಳು, ಸ್ಟೇಷನ್ನಿನ ಪರಿಸರ, ಕಲ್ಲುಬೆಂಚು, ನೀರಿನ ನಳ (ನಲ್ಲಿ), ಸಾಲುಮರ ಕಟಕಟೆ-ರೈಲ್ವೆ ಪ್ರಪಂಚವೇ ಇಲ್ಲಿದೆ.

ಮೊಮ್ಮಗನ ಜನನ ಪ್ರಸಂಗ ತಾತನನ್ನು ಬಹುವಾಗಿ ಕಾಡುತ್ತದೆ. ಜೀವವನ್ನೇ ಹಿಂಡುತ್ತದೆ. ಆ ತಳಮಳ ಇಡೀ ದಿನ ಹಮಾಲ ಇಮಾಮನನ್ನು ನಿಸ್ತೇಜಗೊಳಿಸುತ್ತದೆ. ಸೊಸೆಯ ಹೆರಿಗೆ ಸಸೂತ್ರವಾಗಿ ಆದೀತೊ ಇಲ್ಲವೊ ಎoಬುದೊoದೇ ಹಳವಂಡಕ್ಕೆ ಕಾರಣವಲ್ಲ. ತಾನೂ ಲೆಕ್ಕಕ್ಕೆ ಐವರು ಮಕ್ಕಳ ತಂದೆ. ಆದರೆ ಮೊದಲಿನ ನಾಲ್ಕು ಜನ ಬoದೊಡನೆ ಮುoಬಯಿಗೆ ಪಾಕಿಸ್ತಾನಕ್ಕೆ ಸರ್ಕಸಿಗೆ ಹೊರಟು ಹೋದರು. ಐದನೆಯ ಮಗನೊಬ್ಬ ಮುಪ್ಪಿನ ಕಾಲಕ್ಕೆ ಈ ಅಪ್ಪನ ಬಳಿ ಇದ್ದಾನೆ. ಆ ಕಡೆಯ ಮಗನಿಗೆ ಈಗ ಮಗುವೊಂದು ಹುಟ್ಟಲಿದೆ. ತನ್ನ ವಂಶದ ಎರಡನೆಯ ಕುಡಿ ದಾoಗುಡಿಯಿಡಲಿದೆ. ತನ್ನ ಮನೆಯಲ್ಲಿ ಇನ್ನೊಂದು ಜೀವ ಅರಳಲಿದೆ. ಅದನ್ನು ಕಣ್ಣಾರೆ ಕಾಣುವ ಹoಬಲ.ಈ ಬಯಕೆ ಎಲ್ಲಿ ಹೆಚ್ಚುಕಡಮೆಯಾಗಿ ತಾನು ಕಟ್ಟಿಕೊಂಡಿರುವ ಕನಸು ಒಡೆದೀತೊ ಎಂಬ ಹೆದರಿಕೆ. ಆತನ ಆತಂಕದ ಕ್ಷಣಗಳನ್ನು ಹಿನ್ನೆಲೆಯಾಗಿರಿಸಿ ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿಯೊಬ್ಬನ ವರ್ತನೆಯನ್ನು ಕಥೆಗಾರರು ಚಿತ್ರಕಾರನಂತೆ ಅದ್ಭುತವಾಗಿ ಕಂಡರಿಸಿದ್ದಾರೆ. ಕುಸುರಿ ಕೆಲಸದ ಈ ನಯ ನಾಜೂಕು ವಿಮರ್ಶಕರ ವಿಶೇಷ ಗಮನಿಕೆಗೆ ಅರ್ಹವಾಗಿದೆ.

ದಿನದ ದುಡಿಮೆ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಇಮಾಮನಿಗೆ ಮೊಮ್ಮಗು ಹುಟ್ಟಿದ ಹರ್ಷದ ಸುದ್ದಿ ತಿಳಿಯುತ್ತದೆ. ಆನಂದಾಧಿಕ್ಯದಿಂದ ಎದೆಯೊಡೆಯುತ್ತದೆ. ಆದರೆ ಒಟ್ಟು ಕಥೆಯ ಚೌಕಟ್ಟಿನಲ್ಲಿಟ್ಟಾಗ ಆ ಸಾವೂ ಸಾರ್ಥಕವಾಗುತ್ತದೆ, ಅರ್ಥಪೂರ್ಣವಾಗುತ್ತದೆ. ಮನೆಯಲ್ಲೋಂದು ಹೊಸ ಜೀವದ ಉದ್ಭವ ಹಳೆಯ ಜೀವದ ಅವಸಾನ. ಜೀವನ ಜೋಕಾಲಿ ನಿಲ್ಲುವುದಿಲ್ಲ.