ಪುಟ:KELAVU SANNA KATHEGALU.pdf/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಬಾಪೂಜಿ!...ಬಾಪೂ!...

ಬಾಪೂಜಿ ದಿವಂಗತರಾಗಿದ್ದರು!

ಭಾರತದ ಕ್ರಾಂತಿಪುರಷರಾದ, ಭಾರತಿಯನ್ನು ಬಂಧವಿಮುಕ್ತಳನ್ನಾಗಿ ಮಾಡಿದ, ಬಾಪುಜಿ ಅಂತರ್ಧಾನರಾಗಿದ್ದರು!

****

ಭುರ್ ....ಭುರ್ರ್ ರ್ರ್......!

ಆ ಹಳ್ಳಿಯ ನಿವಾಸಿಗಳೆಲ್ಲ ಹೊರಗೋಡಿ ಬಂದರು. ಸ್ವತಂತ್ರ ಭಾರತದ ವಿಮಾನಪಡೆಯೊಂದು ಭಾರತದ ಸಮುದ್ರ ತೀರಗಳನ್ನು ರಕ್ಶಿಸುತ್ತ ಹಾರಾಡುತ್ತಿತ್ತು ಹಳ್ಳಿಗರು ಅಜ್ಞಾನದಿಂದ, ವಾಯುನಾವೆಗಳ ಜೋಗುಳ್ಳಕ್ಕೆ ಕ್ಶಣಕಾಲ ನಿದ್ರಾವಶರಾದಂತೆ ತಲೆದೂಗಿ, ಬಳಿಕ ಸಂಭ್ರಮದಿಂದ ಸಂತೊಷ ಪ್ರದರ್ಶನ ಮಾಡಿದರು.

****

ಒಂಭತ್ತು ಗಂಟೆಗಳ ದುಡಿತ!

ಕಾರ್ಖಾನೆಯ ಕರ್ಣಭೇದಕ ಧ್ವನಿ. ಚಲಿಸುವ ಯಂತ್ರಗಲ ಭೀಕರ ಸದ್ದು. ಅಲ್ಲಿ ಕುಳಿತಿರುವವರು ಸೆಠ್‍ಜಿ ರಾಜರಾಮ್‍ಜಿ. ಭಾರತದ ಉತ್ಪಾದನ ಶಾಖೆಯ ಸಮಿತಿಯ ಸದಸ್ಯರಲೊಬ್ಬರು. ಹಿಂದಿಂನಿಂದಲೂ ಹೆಸರಾಂತ ಉದ್ದಿಮೆದಾರರು ಬಂಡವಾಳಶಾಹಿ ಪದ್ಧತಿಯ ಆಧಾರಸ್ತಂಭ. ತನ್ನ ಹಣದ ಬೆಂಬಲದಿಂದ, ಜನತೆಯ ಮತದಾನವೆಂಬ ಸೋಗಿನ ಮೂಲಕ, ಆ ಸ್ಥಾನಕ್ಕೆರಿದವರು.

ಅವರ ಅಧೀನದಲ್ಲೆ, ವಿಮಾನ-ಹಡಗು-ಯಂತ್ರನಿರ್ಮಾಣಗಳ ಕಾರ್ಖಾನೆಗಳಿರುವುದು. ಅಲ್ಲಿಯೇ ಹಳ್ಳಿಯ ಜನತೆಯನ್ನು ನಗರಗಳಲ್ಲಿ ಆಕರ್ಷಿಸುವ ಸೂಜಿಗಲ್ಲು ಅಡಕವಾಗಿರುವುದು. ಅವರ ನಿರ್ಮಾಣ ಗ್ರುಹಗಳಲ್ಲಿಯೆ, ಬಡ–ಇನ್ನೂ ಬಡ–ಭಾರತೀಯರು ಬೆವರಿಳಿಸಿ ದುಡಿಯುತ್ತಿರುವುದು.