ಪುಟ:KELAVU SANNA KATHEGALU.pdf/೨೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

6 ನಿರ೦ಜನ:ಕಲವು ಸಣ್ಣ ಕಥೆಗಳು

“ಬಾಪೂಜಿ!..ಕೊನೆಯ ತನಕ ನಾವು ನಿಮ್ಮ విಧೇಯ ಹಿಂಬಾಲಕರಾಗಿ ಉಳಿದೆವು."

“ಸಂಶಯವೇನು? ವಿಧೇಯತೆಯ ಸೋಗನ್ನು ನೀವು ಕೆಲವರು ಹಾಕಿ ಕೊಂಡಿದ್ದೀರಿ .ನಿಜವಾಗಿಯೂ ನನ್ನನ್ನು ಅನುಸರಿಸುತ್ತಿದ್ದ ಅಸಂಖ್ಯ ಸರಳ ಹೃದಯರನ್ನು ನೀವು ಮೋಸಗೊಳಿಸಿದ್ದೀರಿ.ಯಂತ್ರದೇವತೆಯ ಅಡಿಯಾಳಾ ಗಿದ್ದೀರಿ ಇಂದು! ಹಿಂಸೆಗೆ . ಅಸತ್ಯದ ಪ್ರತಿಪಾದಕರಾಗಿದ್ದೀರಿ...." -

....ಸೋಜಾಜಿ ತುಟಿಪಿಟಕ್ಕೆ ನ್ನದೆ ಅವನತಶಿರರಾಗಿದ್ದರು. “ನಾನು ಹೋಗುತ್ತೇನೆ!...” ಕಣ್ಣೀರು ಕೋಡಿಗಟ್ಟಿ ಆ ಅಸ್ಥಿ ನಿರ್ಮಿತ ಮುಖದ ಮೇಲಿಂದ ಪಳಪಳನೆ ಹರಿಯುತ್ತಿತ್ತು.

“ಪುನಃ ಬರುವುದಿಲ್ಲ.ಆದರೆ ಎಚ್ಚರ! ನಿಮ್ಮ ವರ್ತನೆಯಿಂದ ಭೀಕರ ಪಾಪಕ್ಕೆ ನೀವು ಬಲಿಯಾಗುವಿರಿ. ನನ್ನ ವರ್ತ್ಯಂತುತ್ಸವವನ್ನು ಆಚರಿಸುವಂತೆ ಮಾಡಿದರೆ, ಆ ದಿನ ಎಲ್ಲರಿಗೂ ರಜಾ ಸಿಗುವಂತೆ ಮಾಡಿಬಿಟ್ಟರೆ, ನಿಮ್ಮ ಬಾಪೂಜಿಯ ಅತ್ಮಕ್ಕೆ ತೃಪ್ತಿಯಾಗುತ್ತೆ ಅಂದುಕೊಂಡಿರಾ?...ಎಚ್ಚತ್ತಿರಾದರೆ ಶ್ರೇಯಸ್ಸಿದೆ-ಇಲ್ಲವೆ ಸರ್ವನಾಶ!...”

ತಮ್ಮ ಊರುಗೋಲನ್ನೆತ್ತಿ ಬಾಪೂಜಿ ಆಕಾಶದತ್ತ ಶೂನ್ಯದೃಷ್ಟಿಯನ್ನು ಬೀರುತ್ತಿದ್ದರು. ಸುತ್ತಲೂ ಸಹಸ್ರ ಉಲ್ಕಾಪಾತವಾದಂತೆ ನೋಟ.. ಭೂಮಿ ಬಿರಿದಂತೆ ಕ೦ಪನ!

ಆ ಬೆಳಕು ಹೊರಟುಹೋಯಿತು. ಸೋಜಾಜಿ ನಿಶ್ಟಾತರಾಗಿದರು. ಅವರ ದೃಷ್ಟಿ ಅರ್ಥಶೂನ್ಯವಾಗಿತ್ತು. ಗೊರಕೆಯ ಸ್ವರದಂತೆ ಶಾಸ ಒಳಕ್ಕೂ ಹೊರಕ್ಕೂ ಓಡಾಡುತ್ತಿತ್ತು

  *       *    *     *

ಊರುಗೋಲಿನ ಆ ಪಥಿಕರು-ಬಾಪೂಜಿಯ ಪ್ರತಿಛಾಯೆ-ಕೊನೆಯಿಲ್ಲದ ಆ ಹಾದಿಯಲ್ಲಿ ನಡೆಯುತ್ತಿದ್ದರು. ಉಷಾ ಮೆಲ್ಲಮೆಲ್ಲನೆ ಎಚ್ಚರುತ್ತೆದ್ದಳು.

ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದುವು.ದೂರದ ಕ್ರೈಸ್ತ ದೇವಾಲಯದ ಗಂಟೆ ಬಾರಿಸುತ್ತಿತ್ತು, ಮಸೀದಿಯ ಗುರು ಕರೆಕೊಡುತ್ತಿದ್ದ. ದೇವಮಂದಿರ ದಲ್ಲಿ ಅರ್ಚಕರು ಉಚ್ಛಸ್ವರದಲ್ಲಿ ಮಂತ್ರಪಠನ ಮಾಡುತ್ತಿದ್ದರು.ಹೆಂಗಳೆಯರು ದನಿಗೊಡುತ್ತಿದ್ದರು. ಪ್ರಕೃತಿಮಾತೆ ಮೆಲ್ಲಮೆಲ್ಲನೆ ಎಚ್ಚರುತ್ತಿದ್ದಳು. ಪ್ರಭಾತವೆ?... ಮಂಗಲ ಪ್ರಭಾತವೆ?