ಪುಟ:KELAVU SANNA KATHEGALU.pdf/೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕೃತಜ್ಞತೆ

ಕಳೆದ ಮೂರು ವರ್ಷಗಳಿಂದ ನನ್ನ ಸಮಗ್ರ ಕಥಾಸಮುಚ್ಚಯ ‘ಧ್ವನಿ'ಯ ಕನಸನ್ನು ನಾನೂ, ಮಗಳು ಸೀಮಂತಿನಿಯನೂ ಕಾಣತೊಡಗಿದ್ದೆವು. ಅದು ಸಾವಿರ-ಸಾವಿರದಿನ್ನೂರು ಪುಟಗಳ ನೂರು-ನೂರರವತ್ತು ಕಥೆಗಳನ್ನು ಸಂಕಲಿಸಿ ಮುದ್ರಿಸುವ ಯೋಚನೆ. ಕಥೆಗಳನ್ನು ಪೋಣಿಸುವ ಕೆಲಸ ನಡೆದಿದಾಗ,ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. (ಡಾ.) ಬಿ. ಎ. ವಿವೆಕ ರೈ ಅವರಿಂದ ಒಂದು ಸಂದೇಶ ಬಂತು: “ಧ್ವನಿಯಿಂದ, ಕೆಲವು ಕಥೆಗಳನ್ನು ಆರಿಸಿ ಪ್ರತ್ಯೇಕಿಸ ಬಹುದಲ್ಲ?” ಆ ಸಲಹೆಯ ಪರಿಣಾಮವೇ 'ನಿರಂಜನ: ಕೆಲವು ಸಣ್ಣ ಕಥೆಗಳು' ಸಂಕಲನ.

ಅದಕ್ಕೆ ಒಂದು ಮೌಲಿಕ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. (ಡಾ.) ಹಂಪನಾ ಬರೆದರು.

ನನ್ನ ಆ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ೧೯೮೬-೮೭ರ ಪ್ರಥಮ ಪದವಿ ಪರೀಕ್ಷೆಗೆ ಅವಿಸ್ತರ ಪಠ್ಯವೆಂದು ಸ್ವೀಕೃತವಾಯಿತು. ಆ ಆವೃತ್ತಿಯನ್ನು ಪುತ್ತೂರಿನ ಲಲಿತ ಪ್ರಕಾಶನದವರು ಹೊರತಂದರು.

ಅರ್ಧ ಶತಮಾನದ ನನ್ನ ಸಹಿತ್ಯ ಕೃಷಿಯನ್ನು(೧೫,೦೦೦ ಪುಟಗಳಿಗೂ ಹೆಚ್ಚು) ಮೂವತ್ತು ಸಂಪುಟಗಳಲ್ಲಿ ಪ್ರಕಟಿಸಲು ಮುಂದೆ ಬಂದವರು ಕನ್ನಡ ಅಕ್ಷರಲೋಕದಲ್ಲಿ ಸಾಹಸಕ್ಕೆ ಇನ್ನೊಂದು ಹೆಸರಾದ ಐಬಿಎಚ್ ಪ್ರಕಾಶನದ ಜನರಲ್ ಮಾನೇಜರ್ ಶ್ರೀ ಜಿ. ಕೆ. ಅನಂತರಾವನ್. ಈ ವಿಶಿಷ್ಟ ಸರಣಿಯ ಮೊದಲ ಎರಡು: ಜೋಡಿ ಸಂಪುಟ 'ಧ್ವನಿ'.