ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮೈಖೆಲ್ ಮಾಸ್ ಪಿಕ್‌ನಿಕ್
15


ಅವರಿಬ್ಬರಲ್ಲಿ ಹುಡುಗರೆಲ್ಲ ನೋಡುವುದು ತನ್ನನ್ನು. ಅವರಿಗೆ ಬೇಕಾದುದು ತಾನು, ಮೇರಿಯಲ್ಲ! ಫೋನ್ ಮಾಡಿ ಹೇಳೋಣವೆಂದರೆ ಮೇರಿಯ ಮನೆಯಲ್ಲಿ ಫೋನ್ ಎಲ್ಲಿಂದ ಬರಬೇಕು? ಅದು ಗುಡಿಸಲು-ಹಟ್ಟಿ! ಅವರೊಡನೆ ಬೆರೆಯುವುದು ತನ್ನ ಮನೆತನದ ಗೌರವಕ್ಕೆ ಒಂದು ರೀತಿಯಲ್ಲಿ ಕುಂದೇ ಸರಿ. ಮೇರಿ ಜಾಣೆ ನಿಜ. ತಾನು బలు ಪ್ರಯಾಸದಿಂದ ಪಾಸ್ ಮಾರ್ಕ್ಸ್ ಪಡೆದರೆ ಮೇರಿ ನಿರಾಯಾಸವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತಿದ್ದಳು... ಆದರೆ ಕಾನ್‌ವೆಂಟಿನ ಸಿಸ್ಟರ್‌ಗಳೇನೂ ఆ ಭಿಕಾರಿಯನ್ನು ಪ್ರೀತಿಸುತ್ತಿರಲಿಲ್ಲ. ಒಬ್ಬ ಟೀಚರ್ ಮಾತ್ರ ಮೇರಿಯನ್ನು ಮೆಚ್ಚುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, ಆ ಟೇಚರ್ ಕೂಡ ಬಡವೆ. ಅವಳ ಉಡುಗೆ ಅದನ್ನು ತೋರಿಸುತ್ತಿತ್ತು. ಅದಕ್ಕಿಂತಲೂ ಮುಖ್ಯ ವಿಷಯ ಹುಡುಗರು ಬರೆಯುತ್ತಿದ್ದ ಕಾಗದ. ಅವರು ಬರೆಯು ತ್ತಿದುದು ತನಗೆ-ತನ್ನಂಥ ಹುಡುಗಿಯರಿಗೆ; ಮೇರಿಗಲ್ಲ! ಅಲ್ಲಿಗೆ ಒಮ್ಮೆ ನೆನಪಾಯಿತು:

    “ನನ್ನ ಆಂಟಿಗೆ ವಾಂತಿ ಭೇದೀಂತ ತೋರುತ್ತೆ. ಆಸ್ಪತ್ರೆಗೆ ಕರಕೊಂಡು

ಹೋಗೋದಿಲ್ಲ. ಇಲ್ಲಿಯೇ ಔಷಥೋಪಚ ಮಾಡ್ತೀವಿ. ಪಿಕ್ನಿಕ್ಗೆ ಬರಲಾಗುತ್ತೊ ಇಲ್ಲವೊ,” ಎಂದು ಮೇರಿ ಸಂದೇಹದ ಸ್ವರವೆತ್ತಿದ್ದಳು ಹಿಂದಿನ ದಿನ. T

    ಹಾಗಾದರೆ-
    ಆದರೂ ಆಳನ್ನು ಕಳುಹಿ ನೋಡಬೇಕೆಂದು ಲಿಲ್ಲಿಗೆ ತೋರಿತು,
    ಮೇರಿ ಬಂದರೆ ತನಗೊಬ್ಬ ಸೇವಕಿ ಇದ್ದಂತೆಯೂ ಆಗುವುದಲ್ಲವೆ?
    ಕಾರ್ ಶೆಡ್ಡಿನಿಂದ ಹೊರಬಂದು ಸಿಧ್ಧ್ಗವಾಗಿ ನಿಂತಿತು. ಆರು ಘಂಟೆಗೆ

ತಲಪುವಂತೆ ರೈಲ್ವೆಸ್ಟೇಶನ್ನಿಗೆ ಆ ಕಾರಿನಲ್ಲಿ ಹೋಗಬೇಕು. ಅಲ್ಲಿ ಬೇರೆ ಹುಡುಗಿಯರೆಲ್ಲ ಇರುವರು. ಅವರೆದುರು ಬಲು ಠೀವಿಯಿಂದ ಕೆಳಗಿಳಿದು, ಹಲೋ ಹಲೋ ಎಂದು ವಂದಿಸುತ್ತ, ಎದೆಯೆತ್ತಿ, ತಲೆಯೆತ್ತಿ ನಡೆಯಬೇಕು.

    ಕಾರಿನ ಡೈವರ್ ಜಾನ್ನಿಯನ್ನು ಸಮೀಪದಲ್ಲೆ ಇದ್ದ ಮೇರಿಯ ಮನೆಗೆ 

ಕಳುಹಿದುದಾಯಿತು.

    ಪಪ್ಪ ಕೆಳಗಿಳಿದವರು ರೇಡಿಯೊ ತಿರುವಿದರು. ಆಹ್ವಾದಕರ ಸಂಗೀತದ 

ತೆರೆಗಳು ಬರುತ್ತಿದುವು. ಲಿಲ್ಲಿ ತನ್ನ ಪ್ರೀತಿಯ ಹಾಡನ್ನು ಇಳಿದನಿಯಲ್ಲಿ ಹಾಡುತ್ತ ಬಚ್ಚಲು ಮನೆಗೆ ಹೋಗಿಬಂದಳು. ಅಜ್ಜಿಯ ಸಂಭ್ರಮ ಹೇಳ ತೀರದು, ಆಕೆಯ ಉತ್ಸಾಹದ ಪರದಾಟದಿಂದ ಕೆಲಸ ಮಾತ್ರ ಯಾವುದೂ