ಪುಟ:KELAVU SANNA KATHEGALU.pdf/೩೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

16 ನಿರಂಜನ: ಕೆಲವು ಸಣ್ಣ ಕಥೆಗಳು ఆ గుత్తిర్లిల్ల. ಲಿಲ್ಲಿ ಮೇಕಪ್‍ಗೆ ಆರಂಭಿಸಿದಳು. ಹೆಚ್ಚು ಮಾಡಿಕೊಳ್ಳಬಾರದು. ಮೆಳ್ಳೆಗಣ್ಣಿನ ಸಿಸ್ಟರ್ ಒಬ್ಬಳಿಗೆ ಮೇಕಪ್ ಕಂಡರೆ ಆಗುವುದಿಲ್ಲ..." ತಮ್ಮ ಪಾಲಿಗಂತೂ ಆತ್ಮನಿಗ್ರಹವೇ ಗತಿ.... ಇತರರು ಚೆನ್ನಾಗಿದ್ದರೂ ಅಸೂಯೆ ಇವರಿಗೆ,” ರೆಂದುಕೊಂಡಳು లిల్లి. ನಿಲುವುಗನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿ, ಹೆಮ್ಮೆಯಿಂದ ಭುಜ ಅಲುಗಿಸಿದಳು. ಮೇಲು ತುಟಿಯ ಲಿಪ್‍ಸ್ಟಿಕ್ ಕೊಂಚ ಹೆಚ್ಚು ಮೇಲಕ್ಕೆ ಹೋಗಿ ಕಾಣದ ಮೀಸೆಯನ್ನು ಕೆಂಪಾಗಿಸಿತು. ಅದನ್ನು ತೊಡೆಯುತ್ತ ಲಿಲ್ಲಿ ಯೋಚಿಸಿದಳು:

    ತನಗೆ ಮೆಚ್ಚುಗೆಯಾಗುವುದು ಯಾರ ಮೀಸೆ? ರಮಣನದೆ? ಫ್ರೆಡ್ಡಿಯದೆ?
   ಲಿಲ್ಲಿಯ ಶೃಂಗಾರವಾಗುತ್ತಿದ್ದಾಗ ಡ್ರೈವರ್ ವಾಪಸು ಬಂದ.

"ಮೇರಿಯ ಆಂಟಿಗೆ ಕಾಹಿಲೆ ಜಾಸ್ತಿಯಾಗಿದೆಯಂತೆ. ಆಕೆ ಬರೋದಿಲ್ಲ ವಂತೆ,” ಎಂದು ಆತ ವರದಿ ಒಪ್ಪಿಸಿದ. ಮಮ್ಮಿ ಒಂದು ಕಪ್ ಟೀ ಮತ್ತು ಬಿಸ್ಕತ್ತು ತಂದರು. ಘಟ್ಟಿ ಹಾಲನ್ನು ಹಾಕಿ ಮಾಡಿದ್ದ ಟೀ ಅದು. ಥರ್ಮಾಸ್ ಫ್ಯಾಸ್ಕಿನಲ್ಲೂ ತುಂಬಿದು ದಾಯಿತು. లిల్లి ತನ್ನ ಹೊಸ ಹೊಸ ಸ್ಕೌಟ್ ಡ್ರೆಸ್ ಹಾಕಿಕೊಂಡಳು.ಬ್ಲೂ ಬರ್ಡ್ ಷೂಸ್ ಮೆಟ್ಟಿಕೊಂಡಳು. ಮತ್ತೆ ಕೆದರಿದ ಕ್ಯಾಪನ್ನು ಕಂಡು ಕೆರಳಿ, ಶೃಂಗಾರ ಮಾಡಿದಳು. ನಿಲುವುಗನ್ನಡಿಯ ಎದುರು, ತನ್ನನ್ನು ತಾಯಿಗೆ ತೋರಿಸುತ್ತ, లిల్లి ಒಂದು ಸುತ್ತು ತಿರುಗಿದುದಾಯಿತು. “Perfect!” ಎಂದರು ಮಮ್ಮಿ. ಅದು ಅವರ ಭಾಷೆ. ದೇಶ ಭಾರತ ನಿಜ. ಆದರೆ ಅವರ ಮನೆ ಮಾತು ಪರದೇಶದು. ಸೂಟ್ಕೇಸನ್ನು ಕಾರಿನಲ್ಲಿರಿಸಿದರು. ಒಂದು ದಿನದ ಪಿಕ್ನಿಕ್ಗಾಗಿ ಆರು ಜತೆ ಡ್ರೆಸ್ ಗಳನ್ನು ಲಿಲ್ಲಿ ತೆಗೆದುಕೊಂಡಿದ್ದಳು. ಬೇತಿಂಗ್ ಸೂಟನ್ನೂ ಮರೆತಿರಲಿಲ್ಲ. ಸಿಸ್ಟರ್ ಗಳ ಕಣ್ಣು ತಪ್ಪಿಸಿ ಈಸುಹೋಗುವ ಅವಕಾಶ ದೊರೆತರೆ? ಕೇರಂಬೋಡರ್ಲೂ ಇತ್ತು, ಉಳಿದ ಹುಡುಗಿಯರಲ್ಲಿ ಕೆಲವರಿಗಿ೦ತಲಾದರು ತಾನು ದೊಡ್ಡವಳಾಗುವುದು ಬೇಡವೆ? ವಯಲಿನ್, ಗಿಟಾರ್, ಯಾವುದನ್ನೂ ಅಲ್ಲಿ ಬಿಟ್ಟಿರಲಿಲ್ಲ. ಪಪ್ಪನೂ ಮಮ್ಮಿಯೂ ಗುಪ್ಪಾಲೋಚನೆ ಮಾಡಿ ಗ್ರಾಮಾ ಪೆದೋನ್ ಪೆಟ.ಗೆಯನೂ ಹಲವು ರೆಕಾರ್ಡುಗಳನ್ನೂ ತೆಗೆದಿರಿಸಿದರು. ಲಿಲಿ