ಪುಟ:KELAVU SANNA KATHEGALU.pdf/೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಮೈಖೆಲ್ಮಾಸ್ ಪಿಕ್ನಿಕ್ 17 ಬೇಡನೆ? . "ಬೈ....ಬೈ..."ಎನ್ನುತ್ತ ಲಿಲ್ಲಿ ಹೊರಟಳು. ಕಾರು ಹೊರಟಿತು.ಗೇಟು ದಾಟಿ ದೊಡ್ಡ ಬೀದಿಗೆ ತಿರುಗುವಲ್ಲೇ ಮೇರಿಯ ಗುಡಿಸಲು... ... ಕಾರನ್ನು ನಿಲ್ಲಿಸಿದುದಾಯಿತು. ಮೇರಿ ಹೊರಬಂದಳು.ಅತ್ತು ಅತ್ತು ಆಕೆಯ ಕಣ್ಣುಗಳು ಕೆಂಪಗಾಗಿದ್ದುವು. ಆಂಟಿಗೆ ಸೌಖ್ಯವಿಲ್ಲವೆಂಬ ವ್ಯಥೆ ಯೇನೋ! ಆದರೆ ಆ ವಿರೂಪವನ್ನು ನೋಡಿ ಲಿಲ್ಲಿಗೆ ತಿರಸ್ಕಾರ ಹುಟ್ಟಿತು. ಆದರೂ, ಮೇರಿ ತನ್ನ ಡ್ರೆಸ್ ನೋಡಲಿ ಎಂದು ಲಿಲ್ಲಿ ಕೆಳಕ್ಕಿಳಿದಳು. ರೈನ್ ಕೋಟು ಕೈಮೇಲಿತ್ತು. "ನೀನು ಬರುವುದಿಲ್ಲವಲ್ಲಾ” ಎಂದಳು ಲಿಲ್ಲಿ, ಆದರೆ ಆ ಧ್ವನಿಯಲ್ಲಿ ವಿಷಾದದ ಛಾಯೆಯಿರಲಿಲ್ಲ . "ಇಲ್ಲ,ಸಾರಿ" ಎಂದಳೂ ಮೇರಿ. లిల్లి ಕೈಗೆ ಕಟ್ಟಿದ್ದ ಚಿಕ್ಕಾಸಗಲದ ಕೈಗಡಿಯಾರವನ್ನು ನೋಡುತ್ತ; “ಓ! ಟೈಮ್ ಆಯಿತು. ಹಾಳು ಮಳೆ ಬೇರೆ..ಹೋಗ್ತೀನಿ...ಡ್ರೆಸ್ ಹೇಗಿದೆ?” ಎಂದು ಕೇಳಿದಳು. “Fine !” ಎಂದಳು ಮೇರಿ. ದೊಡ್ಡವರ ಮಕ್ಕಳು ಏನು ಕೇಳಿದರೂ 'ಫ್ಲೈನ್' ಎನ್ನಬೇಕೆಂದು ಅವಳಿಗೆ ಆಕೆಯ ಆಂಟಿ ಕಲಿಸಿಕೊಟ್ಟಿದ್ದರು. ಕಾರಿನಲ್ಲಿ ಕುಳಿತು ಮುಂದುವರಿಯುತ್ತ ಲಿಲ್ಲಿ ಕರವಸ್ತ್ರ ಬೀಸಿದಳು. ಮೇರಿಯ ಕೈಬೆರಳುಗಳು ಮಾತ್ರ ಅಲುಗಿದುವು. ಆಕೆಯ ಕಣ್ಣಗಳಿಂದ ಕೋಡಿಕಟ್ಟಿ ಹರಿಯುತ್ತಿತ್ತು ಅಶ್ರುಧಾರೆ.

   *         *      *       *

........ರಾತ್ರೆಯ ರೈಲುಗಾಡಿಯಲ್ಲಿ ಲಿಲ್ಲಿ ವಾಪಸ್ಸು ಬಂದಳು. ಮಳೆ

ಸುರಿದು ಪಿಕ್ನಿಕ್ ಬರಿಯ ರೈಲು ಪ್ರವಾಸದಲ್ಲೇ ಮುಕ್ತಾಯವಾಗಿತ್ತು.

ಗ್ರಾಮಾಫೋನ್ ರೆಕಾರ್ಡುಗಳಿಗೆ ಸಿಸ್ಟರ್'ಗಳು ಬಹಿಷ್ಕಾರ ಹಾಕಿದ್ದರು. ಸ್ಕೌಟ್ ಡ್ರೆಸ್ಸೇ ಕೊನೆಯವರೆಗೂ ಗತಿಯಾವಿುತು. ಎಂತಹ ಅವಮಾನ! ಆ ರಮಣ ಬೇರೆ. ಆತ ರೈಲು ನಿಲ್ದಾಣದಲ್ಲಿ ಕಾದಿದುದು ನಳಿನಿಗಾಗಿ; ತನಗೋಸ್ಕರವಲ್ಲ, 'ಕುರೂಪಿ'ಯಾದ ನಳಿನಿ.. ಕಾರು ಲಿಲ್ಲಿಯೊಡನೆ ತಮ್ಮ ಬೀದಿಯ ಬಳಿ ಬಂದಾಗ ಮೇರಿ ಅಲ್ಲೇ ನಿಂತಿದ್ದಳು. ಜೊತೆಯಲ್ಲಿ ಯಾವನೋ ಒಬ್ಬ ಯುವಕನಿದ್ದ, ಸೈನಿಕನ ಉಡುಪಿನಲ್ಲಿ, ರಾತ್ರೆ ಹೊತ್ತಾದುದೇ ಚೆನ್ನಾಯಿತು; ಹಗಲಾಗಿರುತ್ತಿದ್ದರೆ,