ಪುಟ:KELAVU SANNA KATHEGALU.pdf/೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಇದು ಪ್ರಕಟವಾಗುತ್ತಿದ್ದಂತೆ,ಒಂದು ಸಂದೇಶ ಬಂತು. ಈ ಸಲ ಧಾರವಾಡದಿಂದ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೆಶಕ ಪ್ರೊ. (ಡಾ.) ಎಸ್.ಎಂ. ವೃಷಭೇಂದ್ರಸ್ವಾಮಿ ಅವರಿಂದ. “ನಿರಂಜನ: ಕೆಲವು ಸಣ್ಣ ಕಥೆಗಳು' ಕರ್ನಾಟಕ ವಿಶ್ವವಿದ್ಯಾಲಯದ ಬಿ. ಎ. ಪದವಿ ಪ್ರಥಮ ಭಾಗಕ್ಕೋಸ್ಕರ ಉಪಪಠ್ಯವೆಂದು ಆಯ್ಕೆಯಾಗಿದೆ.”

ಆ ಕಾರಣದಿಂದ 'ನಿರಂಜನ: ಕೆಲವು ಸಣ್ಣ ಕಥೆಗಳು' ಸಂಕಲನದ ಈ ಹೊಸ ಆವೃತ್ತಿ ಹೊರಬರುತ್ತಿದೆ.

ಮೇಲೆ ಹೆಸರಿಸಿರುವ ಎಲ್ಲ ಮಹನೀಯರಿಗೆ ನಾನೂ, ಪುಸ್ತಕದ ಕೃತಿ ಸ್ವಾಮ್ಯ ಹೊಂದಿರುವ ಸೀಮಂತಿನಿಯನೂ ಕೃತಜ್ಞರು.


೧೫ನೇ ಮೇ ೧೯೮೭
-ನಿರಂಜನ
 

'ಕಥೆ'
515 (ಹೊಸತು 702), 7ನೇ ಮುಖ್ಯ ಬೀದಿ
46ನೇ ಅಡ್ಡರಸ್ತೆ, 5ನೇ ಬಾಕ್'
ಜಯನಗರ, ಬೆಂಗಳೂರು-560 041.