ಪುಟ:KELAVU SANNA KATHEGALU.pdf/೪೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

18 ನಿರಂಜನ: ಕೆಲವು ಸಣ್ಣ ಕಥೆಗಳು ಮೇಕಪ್ ಕೆಟ್ಟಿದಾಗ, ತನ್ನನ್ನು ಅವನು ಕಾಣಬೇಕಾಗಿತ್ತಲ್ಲವೆ? ಆದರೆ ಅವನು ಯಾರು? ಮೇರಿಯ ಸ್ನೇಹಿತ-ಆತ ಯಾರು? .......ಕಾರು ಮನೆ ಸವಿಾಪಿಸುತ್ತಿದ್ದಂತೆ ಮೇರಿ, “ಗುಡ್ನೈಟ್” ಎಂದಳು. లిల్లి ಉತ್ತರಿಸಲಿಲ್ಲ. ....ಮನೆಯಲ್ಲೂ ಲಿಲ್ಲಿ ಸಿಡುಕಿನ ಮುಖವಾಡ ಧರಿಸಿದಳು. ಮನಬಿಚ್ಚಿ ಯಾರೊಡನೆಯೂ ಮಾತಾಡಲಿಲ್ಲ. - ಕೆಳ ಹಜಾರದ ಕೊಠಡಿಯಲ್ಲಿ ಹಣ್ಣು ತುಂಬಿದ ಬುಟ್ಟಿ ಇತ್ತು. ಊಳಿಗದ ಹುಡುಗಿ ಹೇಳಿದಳು. “ಮೇರಿಯ ಅಣ್ಣ ಯುದ್ಧದಿಂದ ವಾಪಸು ಬಂದಿದ್ದಾನೆ. ಆತ ಕಳಿಸಿ ಕೊಟ್ಟಿರೋದು ಈ ಬುಟ್ಟಿ.” "ಬಾಯ್ ಮುಚ್ಚು!” ಎಂದು లిల్లి ಗರ್ಜಿಸಿದಳು. "ಮೇರಿಯ ಆಂಟೀನ ಆಸ್ಪತ್ರೆಗೆ ತಗೊಂಡು ಹೋದರು" ಎಂದಳು ಅದೇ ಹುಡುಗಿ. “ಬಾಯಿ ಮುಚ್ಚು ಎಂದೆನಲ್ಲ!” ಎಂದು ಲಿಲ್ಲಿ ಮತ್ತೂ ಸ್ವರವೇರಿಸಿ ಗದರಿದಳು.

                            -೧೯೪೩