ಪುಟ:KELAVU SANNA KATHEGALU.pdf/೪೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

19 ೪ ರಕ್ತ ಸರೋವರ ಕಣ್ಣೋರೆಸಿಕೊಂಡಳು ಜೈನಬಿ. ನುಂಗಲಾಗದೊಂದು ಉಗುಳು ಗಂಟಲಲ್ಲಿ ತಡೆದು ನಿಂತಿತ್ತು .ಮಾತು ಹೊರಡುತ್ತಿರಲಿಲ್ಲ. ಮುದುಕ ಮಾವ ಮುಸ್ಸಂಜೆಯ ನಮಾಜು ಮಾಡುತ್ತಿದ್ದ, ಪುಟ್ಟ ಮಗು ಓಡಿಯಾಡಿ ಬಸವಳಿದು ನಿದ್ದೆ ಹೋಗಿತ್ತು, ಶೇಕ ಮೂಕನಾಗಿ ಕುಳಿತಿದ್ದ, ತುಟಿಯಲುಗುತ್ತಿರಲಿಲ್ಲ; ಆದರೆ ಕಣ್ಣ ಮಾತಾಡುತ್ತಿತ್ತು. ಮನಸ್ಸು-ಭಾವನೆಗಳನ್ನು ಮುಗ್ಧಗೊಳಿಸುವ ನೀರವತೆ ಸುತ್ತಲೂ ಹರಡಿತ್ತು. ನೆರೆಮನೆಯೊಂದರಲ್ಲಿ ನಡೆಯುತ್ತಿದ್ದ ಕೊರಾನಿನ ಪಠನ ಅಲೆಯಲೆ ಯಾಗಿ ಬಂದು ಬಂದು ಆ ಮೂರು ಜೀವಗಳ ಸುತ್ತಲೂ ಅವ್ಯಕ್ತ ಜಾಲವನ್ನು ಹೆಣೆಯುತ್ತಿತ್ತು. ಶೇಕ ಆ ಸ್ವಪ್ನ ಸಮಾನ ಮೌನವನ್ನು ಭೇದಿಸಿ ಹೇಳಿದ: “ಬೆಳಕು ಹರಿಯುವ ಹೊತ್ತಿಗೆ ಮರಳಿ ಬರುತ್ತೇವೆ ಜೈನಬಿ.” ಜೈನಬಿ ಆ ದಲ್ ತಟಾಕವನ್ನು ನೋಡಿದ್ದಳು. ಕೆಂದಾವರೆಗಳಿಗಾಗಿ ಆಸೆಪಟ್ಟಿದ್ದಳು. ಮದುವೆಯಾದ ಮೊದಲ ದಿನಗಳಲ್ಲೊಮ್ಮೆ, "ಶೇಕ! ಒಂದು ಬಾರಿ ಶಿಕಾರಾ (ದೋಣಿ)ದಲ್ಲಿ ಕುಳಿತು ನಾವು ವಿಹಾರಕ್ಕೆ ಹೋಗಬಾರ ದೇಕೆ?” ಎಂದಿದ್ದಳು. “ಹುಚ್ಚಿ ಬೇರೆ ಊರಿನಿಂದ ಬರುವ ಶ್ರೀಮಂತರು • ಮಾತ್ರ ಅಲ್ಲಿ ವಿಹರಿಸುವುದು. ಅದು ರಾಜರ ಸರೋವರ, ನಮ್ಮಂಥವರು ಅಲ್ಲಿಗೆ ಹೋಗಬಾರದು” ಎಂದು ಶೇಕ ಉತ್ತರ ಕೊಟ್ಟಿದ್ದ. ಅದು ಮೂರು ವರ್ಷಗಳ ಹಿಂದಿನ ಮಾತು. ತಮ್ಮ ಬಡ ಗುಡಿಸಲಿನಲ್ಲಿ - ತಾವೇ ರಾಜರಾಣಿಯರಾಗಿ ಶೇಕ ಮತ್ತು ಜೈನಬಿ ಬಾಳಿದರು. ಸುಂದರ ನಾಡಾದ ಕಾಶ್ಮೀರದಲ್ಲಿ ಅರಳಿಯೂ ಬಾಡಿ ಹೋಗುವ, ಅರಳದೆ ಮುದುಡಿ ಹೋಗುವ, ಮಾನವ ಸುಮಗಳು ಲೆಕ್ಕವಿಲ್ಲದಷ್ಟು. ಅವು ಗಳಲ್ಲಿ ಜೈನಬಿ ಒಂದೂ ಹೂ, ಶೇಕ ಒಂದು ಹೂ. ಅವು ವನಸುಮಗಳೂ ಅಲ್ಲ; ಉದ್ಯಾನದ ಹೂಗಳೂ ಅಲ್ಲ; ಆ ರಾಜ