ರಕ್ತ ಸರೋವರ 21 ಹೇಳಿ ಶೇಕ ಹೊರಟ ತಂದೆ, ಕಿಶನಚಂದನ ಮನೆಯವರೆಗೆ ಬಿಂದು ಮಗನನ್ನು ಬೀಳ್ಕೊಟ್ಟಿ.
ಕಿಶನಚಂದ ಹಿಂದೂ ಹುಡುಗ. ಶೇಕನ ಒಡನಾಡಿ. ಮದುವೆಯಾಗಿ
ಆರು ತಿಂಗಳೂ ಆಗಿರಲಿಲ್ಲ. ಹುಡುಗಿ ನೀರಾ "ಹೊಗುತ್ತೀಯಾ? ಹೋಗಲೇ ಬೇಕೆ?” ಎಂದು ಗೋಳಾಡಿದಳು.
ಎಲ್ಲ ಮಾತೂ ವ್ಯರ್ಥವಾದ ಮೇಲೆ ಇದ್ದೊಬ್ಬಳೇ ತಾಯಿ ಹೇಳಿದಳು.
“ನಿನ್ನ ಹಟ ನಿನಗೆ. ಒಳ್ಳೇದು. ಹೋಗು. ಹೋಗಿ ಬಾ. ನನಗಾಗಿ ಅಲ್ಲ ವಾದರೂ ಈ ಹೆಣ್ಣು ಕೂಸಿನ ಮೋರೆ ನೋಡಿ ಹಿಂದೆ ಬಾ-” ಎಂದು.
ಜತೆಯಲ್ಲೇ,“ಶೇಕ,ಕಿಶೂ ನಿನಗಿಂತಲೂ ಸಣ್ಣವ. ನಿನ್ನ ತಮ್ಮ ಅಂತ
ಜೋಪಾನವಾಗಿ ನೋಡಿಕೋ. ಯಾವ ಹೊತ್ತಿಗೂ ಅವನ ಜತೆ ಬಿಡಬೇಡ” ಎಂದು ತುಂಬಿ ಬರುತ್ತಿದ್ದ ಕಂಬನಿಯನ್ನು ಒತ್ತಿಹಿಡಿದು ಆ ತಾಯಿ ದೈನ್ಯದಿಂದ ಮಾತಾಡಿದಳು.
* * * * ಆ ಊರಿನ ಎಪ್ಪತ್ತಾರು ಗಂಡುಗಲಿಗಳು ಅವರು ಆ ತಾಯ್ನೆಲದ
ಮಮತೆಯ ಮಕ್ಕಳು. ಈ ರಾತ್ರಿ ಅವರೊಂದು ಮಹಾಸಾಹಸದ ಕೆಲಸ ವನ್ನು ಮಡುವರು. ಅವರ ಹಿರಿಯರೊಂದೂ ಆಂಥಾದ್ದನ್ನು ಮಡಿರಲಿಲ್ಲ. “ನಮ್ಮ ನಾಡಿನ ಇತಿಹಾಸದಲ್ಲೇ ಇಂಥ ಪರಿಸ್ಥಿತಿ ಬಂದದ್ದಿಲ್ಲ" ಎಂದು ಅವರ
ಹಳ್ಳಿಯ ಸಾಲೆಯ ಮಾಸ್ತರನೂ ಆ ದಿನ ಹೇಳಿದ್ದ. ಶಿಕಾರಾಗಳು ಸಿದ್ಧವಾಗಿದ್ದವು. ಆರು ದೋಣಿಗಳಲ್ಲಿ ಆ ಎಪ್ಪತ್ತಾರು
ಮಂದೆ ಕುಳಿತು ಹುಟ್ಟುಹಾಕಿದ್ದರು. ನಿದ್ರಿಸಿದ್ದ ಸರೋವರವನ್ನು ಸೀಳಿ ಅವರ 'ನೌಕಾಪಡೆ'ಮುಂದೆ ಸಾಗಿತು.
ಅಲ್ಲೇ ಒಂದೂವರೆ ಮೈಲಿನಾಚೆ ವಾಯವ್ಯದ ದಂಡೆಯಲ್ಲಿ ಕಾಶ್ಮೀರದ
ಮಹಾರಾಜರು ರಾಣೀವಾಸದೊಡನೆ ಸುಖನಿದ್ರೆ ಮಾಡುತ್ತಿದ್ದಾರೆ. ಪ್ರಧಾನಿ ಕಾಕನ ಕೈಯಲ್ಲಿ ರಾಜ್ಯಸೂತ್ರವನ್ನು ಕೊಟ್ಟು,ಬಂದೂಕು ಮಶಿನ್‍ಗನ್ನುಗಳ ಗು೦ಡಿನ ಸಪ್ಪಳದಿಂದ ದೂರವಿರಬೇಕೆಂದು ಆ ವಿಹಾರ ಸರೋವರದ ದಂಡೆಗೆ ಅವರು ಬಂದಿದ್ದಾರೆ. ಅಲ್ಲಿ ಕೆಂಪು ತಾವರೆಗಳ ಮೇಲಿಂದ ಕಂಪಿನಲರು ಬೀಸು ವುದು. ಹೊರಗಿನೆಲ್ಲ ಗೊಂದಲಗಳನ್ನು ಮರೆತು ಆ ಅಮೃತ ಶಾಂತಿಯಲ್ಲಿ, ಭೂಮಿಯ ಮೇಲಿನ ಸ್ವರ್ಗದಲ್ಲಿ, ಸುಖವಾಗಿರಬಹುದು. ಆದರೆ ಪ್ರಧಾನಿ ಕಾಕ ಹೇಳಿದ್ದ:"ಈ ಪ್ರಜೆಗಳನ್ನು ನಂಬುವ ಹಾಗಿಲ್ಲ ಮಹಾರಾಜ. ಹಳ್ಳಿ ಯವರಾದರೇನು? ಯಾವ ಹೊತ್ತಿನಲ್ಲಿ ಏನು ಮಾಡುವರೋ ಹೇಳುವುದು