ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

24 ನಿರಂಜನ: ಕೆಲವು ಸಣ್ಣ ಕಥೆಗಳು ಬೆಳಕಿನಲ್ಲಿ ಕಾಣಿಸುತ್ತಲೇ ಇತ್ತು. ಆ ಯುವಕನೂ ಇನ್ನೊಬ್ಬನೂ ದಡವನ್ನೇ ರಿದರು. ಯುವಕನೆದೆಗೆ ಮಿಲಿಟರಿಯವನೊಬ್ಬ ಬಯನೆಟಿನಿಂದ ತಿವಿದ. ಆ ಸಲದ "ಇಂಕ್ವಿಲಾಬ್" ಅವನ ಕೊನೆಯ ಗರ್ಜನೆಯಾಯಿತು. ಬಯನೆಟು ಸಹಿತ, ಅದನ್ನು ಹಿಡಿದುಕೊಂಡಿದ್ದ ಮಿಲಿಟರಿಯವನನ್ನೂ ಬರಸೆಳೆದು ಆ ಯುವಕ ತಟಾಕದ ಆಳಕ್ಕೆ ಇಳಿದು ಹೋದ.

   ದಡದ ಸಮೀಪವಿದ್ದ  ಮತ್ತೊಂದು ದೋಣಿ ಒಡೆಯಿತು.  ಕ್ಷಣ ಕಾಲ

ರಣ ಗರ್ಜನೆ ಇರಲಿಲ್ಲ. ಶೇಕ-ಕಿಶನ್ ಇಬ್ಬರೂ ಹುಟ್ಟುಬಿಟ್ಟು ಉದ್ವಿಗ್ನರಾಗಿ ಎದ್ದು ನಿಂತರು. ಶೇಕ ಕೂಗಿದ. “ಇಂಕ್ವಿಲಾಬ್!” ಈಸುತ್ತಿದ್ದ ಜನ, ಮುಳುಗುತ್ತಿದ್ದ ಜನ, ಜೀವಂತವಿದ್ದ ಜನ "ಜಿಂದಾಬಾದ್" ಎಂದು ಮರು ನುಡಿದರು.

   ಮತ್ತೊಮ್ಮೆ  ಶೇಕ  ಕೂಗಿದೆ: "ಇಂಕ್ವಿಲಾಬ್!"  ಮರು  ನುಡಿಯ

ಘೋಷಣೆಯ ನಡುವೆ ಗುಂಡೊಂದು ಬಂದು ಶೇಕನೆದೆಯಲ್ಲಿನಾಟಿತು.“ಹಾ!” ಎಂದ ಕಿಶನ್. ದೋಣಿಯಲ್ಲಿ ನಿಂತಿದ್ದ ಶೇಕ ಉರುಳಿ ಹೋದ-ಕೆಳಕ್ಕೆ, ನೀರಿನ ಆಳಕ್ಕೆ!"ಹಾ!ಅಯ್ಯೋ!” ಎಂದ ಕಿಶನ್. ಆಳಕ್ಕೆ ಆ ಸಿಂಹ ಜೀವ ಇಳಿದು ಹೋಗುತ್ತಿತ್ತು.

   ...ಹೋರಾಟ  ವಿಫಲವಾದಾಗ ಉಳಿದ ಮೂರು ದೋಣಿಗಳು  ಹಿಮ್ಮೆ

ಟ್ಟಿದುವು. ಕೆಲವರು ಈಸಾಡಿ ಈಚೆ ದಡ ಸೇರಿದರು. ದೂರದಿಂದ ಬರುತ್ತಿದ್ದ ಗುಂಡುಗಳಿಗೆ ಬೆಚ್ಚಿಬೀಳುತ್ತ ತಪ್ಪಿಸಿಕೊಳ್ಳುತ್ತ ಇವರು ಇತ್ತ ಬಂದರು.

   ದಡ ಸೇರಿದವರು ಅಲ್ಲೆ ಬಿದ್ದುಕ್ಂಡರು  ಆ  ವಿಸ್ತಾರ  ಸರೋವರದಲ್ಲಿ

ಯಾವ ದಂಡೆಗೆ ಹೋದರೋ ಏನೋ ಎಂದು ರಾಜರ ಮಿಲಿಟರಿ ಅವರನ್ನು ಬೆನ್ನಟ್ಟಲಿಲ್ಲ.

   ಯಾವುದೋ ಜೀವ ದನಿತೆಗೆದು ಅಳುತ್ತಿತ್ತು.
      *          *         *         *
   ಮಾತು ಬಾರದ ಮೂಕ ಕಿಶನ್ ಮನೆಗೆ ಬಂದ.
   "ಬಂದೆಯಾ_ಬಂದೆಯಾ?" ಎಂದಳು ಹೆಂಡತಿ ನೀರಾ.
   "ಬಾ_ಬಾ ಮಗನೆ!" ಎ೦ದಳು ತಾಯಿ.
   ಕಿಶನ್ ಮಾತಾಡಲ್ಲೋಲ್ಲ.
   "ಮಗೂ! ಮಗೂ! ಯಾಕೆ ಹೀಗೆ? ಶೇಕ ಎಲ್ಲಿ?"
   ಶೇಕನ ತಂದೆ ನಡೆಗೋಲನ್ನೂ ರುತ್ತ ಬಂದು ಕೇಳಿದ:
   "ಕಿಶನ್! ಎಲ್ಲಿ ನನ್ನ ಶೇರ್? ಎಲ್ಲಿ ನನ್ನ ಶೇಕ?"