ಕಡಲ ಮೇಲಿನಿಂದ ತೆರೆಗಾಳಿ ಬೀಸುತ್ತಿತ್ತು, ದೂರದಿಂದ ಕೇಳಿಸುತ್ತಿದ್ದ ತೆರೆಗಳ ಸದ್ದು...ದಾರಿ, ತೀರದ ಸಮಿಪಕ್ಕೆ ಬಂದಾಗಲಂತೂ ಭೊರ್ಗರೆವ ಮೊರೆತ... ಒಣ ಮೀನಿನ, ಹಸಿ ಮೀನಿನ ವಾಸನೆ...
ಹಿಂದೊಮ್ಮೆ ನಾನು ಕಂಡಿದ್ದ ಪ್ರದೇಶ. ಆಗಿನಂತೆಯೇ ಈಗಲೂ. ಪಶ್ಚಿಮ ಸಮುದ್ರದ ತೆರೆಗಳ ತೆಕ್ಕೆಗಳಲ್ಲೇ ಮಲಗಿರುವ ಊರು ಕಾರವಾರ... ಎತ್ತರಕ್ಕೆ ಬೆಳೆದ ಗಾಳಿ ಮರಗಳು- ಸರುವೆ ಮರಗಳು. ಒಟ್ಟಿಗಿದ್ದರೂ ಒಂಟಿ ಜೀವ, ಪ್ರತಿಯೊಂದು ಮರವೂ.. ಅವುಗಳ ಸುಯ್ಲಾಟವೇ ఒంದು ಸಂಗೀತ. ಕಡಲ ದಂಡೆ, ಮರಗಳ ರಾಶಿ, ನುಣ್ಣನೆಯ ಮರಗಳು, ದೊರಗು ಮರಳು, ಬಿಳಿಯ ಚಿಪ್ಪುಗಳು, ಬಣ್ಣ ಬಣ್ಣದ ಚಿಪ್ಪುಗಳು. ಒಂದು ಫರ್ಲಾಂಗಿನಾಚೆ ನಡುಗಡ್ಡೆಯ ಮೇಲೆ ಇದ್ದ ದೀಪಸ್ತಂಭ, Light House. ತಿರುತಿರುಗುತ್ತ ತೀರಕ್ಕೆ ಪ್ರತಿ ನಿಮಿಷವೂ ಅದು ಹಾಯಿಸುತ್ತಿದ್ದ ಪ್ರಕಾಶ, ತಿಂಗಳ ಬೆಳಕಿನ ಮಬ್ಬಿನಲ್ಲಿ ಆಕಾಶವನ್ನೇ ಅಪ್ಪಿಕೊಂಡಿದ್ದ ಕಡಲು! ಎಂತಹ ಸೊಬಗು! ఒంಟಿ ಯಾಗಿ ಯಾರೂ ಇಲ್ಲಿಗೆ ಬರಬಾರದು-ಬರಬಾರದು. ತೆರೆಗಳ ಡಬಾಲ್-ಸುಯ್, ಡಬಾಲ್-ಸುಯ್, ಜುಳು ಜುಳು ಜುಳು, ನರನ ಕಲೆಯರಿಯದ ಕೈ, ಮುಟ್ಟಿ ಹೊಲಸು ಮಾಡದೆ ಉಳಿದಿರುವ ರೂಪರಾಶಿ...
“ಸ್ಟೇಷನ್ ಮುಂದೆ నిಲ್ಸು!"
ಸಮಾಧಿಯಿಂದ ಎಚ್ಚತ್ತು ನಾನು ಪಕ್ಕಕ್ಕೆ ತಿರುಗಿ ನೋಡಿದೆ. ಆ ಗಡಸು ಧ್ವನಿಯಿಂದ ಆಜ್ಞೆ ಇತ್ತವನು ಅಧಿಕಾರಿ.
ವಾಹನ ನಿಂತಿತು. ಕತ್ತಲು ವಿದ್ಯುದ್ದೀಪವಿಲ್ಲ. ಮಂದವಾದ ಲಾಟೀನು ಬೆಳಕು.
“ಇವರ್ನ ಲಾಕಪ್ಪಿಗೆ ಸೇರ್ಸು!” । ಅದು ದಫೇದಾರನಿಗೆ ಆಜ್ಞೆ ಬಳಿಕ ನನ್ನ ಕಡೆ ತಿರುಗಿ--
“ನಾಳೆ ಸಿಗ್ತೀನಿ ಮಿಸ್ಟರ್ ಇವರೆ..
ಮರಳ ರಾಶಿಯಿರುವ ಸಮುದ್ರ ದಂಡೆಗಲ್ಲ, ಸರಳ ಬಾಗಿಲಾಚೆಗಿನ ಲಾಕಪ್ಪಿಗೆ! ಕಿರ್ರೆಂದಿತು ಬಾಗಿಲು.
"ಎಲ್ಲಿ, ಸರೊಳ್ಳಿ! ಇನ್ನೊಬ್ರಿಗೆ ಜಾಗ ಮಾಡಿ!" ತುಂಬಿದ್ದ ಲಾಕಪ್ಪು, ಎಚ್ಚರಗೊಂಡ ಕೆಲವರು ಎದ್ದು ಕುಳಿತರು, ಲಾಟಿನಿನ ಬೆಳಕಿಗೆ ಆ ಪಿಳಿ ಪಿಳಿ ಕಣ್ಣುಗಳನ್ನು ಕಂಡೆ. ಗೊರಕೆ ನಿಂತು ನಿದ್ರಾ ಭಂಗವಾಯಿತೆಂದು ಒಬ್ಬ ನರಳಾಡಿದ. ಇನ್ನೊಬ್ಬ ಸೊಳ್ಳೆಯನ್ನು ಕೊಲ್ಲಲೆಂದು ತನ್ನ ಕೆನ್ನೆಗೆ ತಾನೇ ಹೊಡೆದುಕೊಂಡ. ಬೇರೊಬ್ಬ ಕೈಗಳಿಗೆ ತುರಿಸುವ ಕೆಲಸ