ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ನಿರಂಜನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ನಮ್ಮ ಸಮಕಾಲೀನ ಸಾಹಿತಿಗಳಲ್ಲಿ ಅವರು ಮಹತ್ವದ ಲೇಖಕರು. ಅವರ ಬರವಣಿಗೆಯ ಹರಹು ಸಾಕಷ್ಟಿದೆ. ಅವುಗಳಲ್ಲಿ ಕಥೆ ಕಾದಂಬರಿ ಅಂಕಣ ಬರೆಹ ಪ್ರಮುಖವಾದುದು. ಇವಲ್ಲದೆ ಅವರು ಕಿರಿಯರಿಗಾಗಿ ಸಿದ್ಧಪಡಿಸಿಕೊಟ್ಟ 'ಜ್ಞಾನಗಂಗೋತ್ರಿ' ವಿಶ್ವ ಕೋಶದ ಏಳು ಸಂಪುಟಗಳು ಕನ್ನಡಕ್ಕೆ ಹೊಸದು, ವಿಶಿಷ್ಟ. ಅವರ ಸಂಪಾದಕತ್ವದಲ್ಲಿ ಹೊರಬಂದ 25 ಸಂಪುಟಗಳ 'ವಿಶ್ವಕಥಾ ಕೋಶ'ವೂ ಆ "ಮಾದರಿಯಲ್ಲಿ ಮೊದಲನೆಯದು; ಅದು ಕನ್ನಡ ಕಥೆಗಳ ಭಂಡಾರಕ್ಕೆ ಬೆಲೆಯುಳ್ಳ ವಿನೂತನ ಕೊಡುಗೆ.

ಕರ್ನಾಟಕದ ಗಡಿಗಳನ್ನು ದಾಟಿ ಅನ್ಯಭಾಷಾವಲಯಕ್ಕೆ, ಜಾಗತಿಕ ವೇದಿಕೆಗೆ ಪರಿಚಿತರಾಗಿರುವ ಕನ್ನಡದ ಕೆಲವೇ ಲೇಖಕರಲ್ಲಿ ನಿರಂಜನ ಗಣ್ಯರು. ಚಿರಸ್ಮರಣೆ, ವಿಮೋಚನೆ ಮೃತುಂಜಯ ಮೊದಲಾದ ಅವರ ಕಾದಂಬರಿಗಳು ತೆಲುಗು ತಮಿಳು ಮಲೆಯಾಳಂ ಬಂಗಾಳಿ ರಷ್ಯನ್ ಇಂಗ್ಲಿಷ್ ಮುಂತಾದ ಸಂಪನ್ನ ಭಾಷೆಗಳಿಗೆ ಅನುವಾದಗೊಂಡಿವೆ. ನಿರಂಜನರ ಕುಲಾವಿಗೆ ಅನೇಕ ಸಾಧನೆಗಳ ಗರಿಗಳಿವೆ. ಬಹುಮುಖ ಪ್ರತಿಭೆಯ ಅವರ ದೈತ್ಯಶಕ್ತಿ, ಹಲವು ಕಾರ್ಯಕ್ಷೇತ್ರಗಳಲ್ಲಿ ಪ್ರಕಟವಾಗಿದೆ. ಪ್ರತಿಕೂಲ ಪರಿಸ್ಥಿತಿಗಳು ತೊಡರುಗಾಲು ಹಾಕಿ ಬದುಕು ಎಸೆದ ಸವಾಲುಗಳನ್ನು ತಮ್ಮ ಚಿರಂತನ ಕ್ರಿಯಾಶೀಲತೆಯಿಂದ ಎದುರಿಸಿದ ನಿರಂಜನರು ಕಡೆಗೆ ಕಾಲನನ್ನೂ ಕಡೆಗಣಿಸಿ 'ಮೃತ್ಯುಂಜಯ'ರಾದದ್ದೇ ಒಂದು ರೋಚಕ ಕಾದಂಬರಿ. ಕ್ಷೇಯೋಭೆಗೊಳ್ಳಲು ಸಹಜವಾಗಿಯೇ ಇರುವ ವಾತಾವರಣದ ನಡುವೆಯೂ ಪ್ರಾಂಜಲ ಅಂತಃಕರಣವನ್ನು ಕಲುಷಿತ ವಾಗದಂತೆ ಆದ್ರರ್ಯವಾಗಿರಿಸಿಕೊಂಡರು. ಭಿನಾಭಿಪ್ರಾಯಗಳ ವ್ಯವಸ್ಥೆಗಳೊಂದಿಗೆ ರಾಜಿ ಮಾಡಿಕೊಳ್ಳದೆ ಆರೋಗ್ಯಕರ ಅಂತರವಿಟ್ಟುಕೊಂಡವರು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಹೇಳುವುದಾದರೆ ನಿರಂಜನ ತುಂಬ ಎತ್ತರದ ವ್ಯಕ್ತಿತ್ವದವರು. ಬರವಣಿಗೆಯನ್ನು ಗಂಭೀರವಾಗಿ, ಒಂದು ಶಿಸ್ತಾಗಿ ಸ್ವೀಕರಿಸಿದವರು. ಕೆಲವು ಸಣ್ಣ ಕಥೆಗಳು' ಆಯ್ದ ಹತ್ತು ಕಥೆಗಳ ಸಂಕಲನ, ವಾಸ್ತವವಾಗಿ ಅವರ ಕಥೆಗಳ ಸಂಖ್ಯೆ ದೊಡ್ಡದು, ಅಷ್ಟು ಕಥೆಗಳೂ ಒಂದೆರಡು ಸೇರಿದರೆ ನಿರಂಜನರ ಒಟ್ಟು ಕಥೆಗಳ ಸ್ವರೂಪದರ್ಶನವಾದೀತು. ಅಂಥದೊಂದು ಪ್ರಯತ್ನ ನಡೆದಿದೆ. ಅವರ ಸಮಗ್ರ ಕಥೆಗಳ ಬೃಹತ್ ಸಂಪುಟವೊಂದು 'ಧ್ವನಿ'7