ಪುಟ:KELAVU SANNA KATHEGALU.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

52

ನಿರಂಜನ: ಕೆಲವು ಸಣ್ಣ ಕಥೆಗಳು

“ಸುಲಭವೋ ಕಷ್ಟವೋ ನಮ್ಮ ಕರ್ತವ್ಯ ನಾವು ಮಾಡಬೇಕು..."

«ಒಂದಲ್ಲ ಒಂದು ದಿವ್ಸ ಗೋವಾ ಭಾರತಕ್ಕೆ ಖಂಡಿತ ಸೇರ್‍ಕೊಳ್ಳುತ್ತೆ. ಗ್ಯಾರಂಟ-ನೋಡ್ಕೊಳ್ಳಿ!"

"ವಾಹೆವ್ವಾ!"

ಮಾತು ನಿಜ. ಆದರೂ ಜೀವಂತ ರಾಷ್ಟ್ರದ ಉಸಿರಾಡುವ ಪ್ರಜೆಗಳು ಅಡುವ ಮಾತು. ಸಿದ್ಧಿ ಹೊಂದಿದ ಸುಸ್ನರವಲ್ಲದೆ ಹೋದರೂ ಸಾಕಷ್ಟು ಇಂಪಾದ ಧ್ವನಿಯೇ. ನಾವು ಸ್ವತಂತ್ರರೆನ್ನುವುದಕ್ಕೆ ಸಾಕ್ಷ್ಯವೀಯುವಂತಹ ಲೋಕ ಪ್ರಶ್ನೆ.

ನಿಲ್ದಾಣದಲ್ಲಿ ಕಾದಿದ್ದ ಕಾರವಾರದ ಬರೆಹಗಾರ ಗೆಳೆಯರೊಬ್ಬರೊಡನೆ ಅವರ ಮನೆಗೆ ಹೊರಟಿ. ಅಲ್ಲಿಯೇ ಪೋಲೀಸ್‌ ಸ್ಟೇಷನ್ನು ಜಡವಾಗಿ ನಿಂತಿತ್ತು. ನಾನು ಮರೆಯಲಾಗದ ಕಂಬಿಗಳು-ಲಾಕಪ್ಟು-ಒಳಗಿದ್ದ ಏಳುಜನ-ಪೀಪಾಯಿ-ನಾಯಕನ ಕಥೆ...

ಸಂಜೆ ಕಡಲ ತೀರದುದ್ದಕ್ಕೂ ನಾನೂ ಆ ಗೆಳೆಯರೂ ನಡೆದುಹೋದಿವು. ದೂರದಲ್ಲೊಂದು ಹಡಗು. ಅದೇ ಆಗ ಬೆಳಕು ಹಾಯಿಸತೊಡಗಿದ್ದ ದೀಪಸ್ತಂಭ. ಭೋರ್ಗರೆಯುತ್ತಿದ್ದ ಕಡಲು. ದಡ ಸೇರಿದೊಡನೆ ಬೆನ್ನು ತಿರುಗಿಸುತ್ತಿದ್ದ ಉತ್ತರಕುಮಾರ ತೆರೆಗಳು. ಡಬಾಲ್-ಸುಯ್‌, ಡಬಾಲ್‌-ಸುಯ್, ಜುಳು ಜುಳು ಜುಳು...

ಇಷ್ಟಿದ್ವರೂ ನಾವು ಆಡುತ್ತಿದ್ಹುದು ಗೋವಾದ ಮಾತು.

"ಹಾಯಾಗಿ ನಾಲ್ಕು ದಿನ ಇರೋಣ ಅಂತ ನೀವು ಬಂದರೆ ಇಲ್ಲಿ ಈ ಗದ್ದಲ" ಎಂದರು ಗೆಳೆಯರು.

ನಾನೆಂದೆ:

“ಹಾಗೇನಿಲ್ಲ. ನನ್ಮು ಜನ ಹೊಸ ಇತಿಹಾಸ ಬರೀತಿರುವಾಗ ಇಷ್ಟು ಹತ್ತಿರ ನಿಂತು ನಿರೀಕ್ಸಿಸೋದು ದೊಡ್ಡ ಅವಕಾಶವೇ."

ಅನರು ಹಿಂದಿನ ದಿನ ಕಾಳೀನದಿಯನ್ನು ದಾಟಿ ಸದಾಶಿವಗಡಕ್ಕೆ ಹೋಗಿದ್ವರಂತೆ. ಮಾಜಾಳಿ ಅಲ್ಲಿಗೆ ಬಲು ಸಮೀಪ. ಗೋವಾದ ಗಡಿ ಆ ಊರು.

“ಕಣ್ಣಾರೆ ಕಂಡೆ-ಅಬ್ಬ! ಒಂದೇ ಹೊಟ್ಟೇಲಿ ಹುಟ್ಟಿದೋರು ನಾವು ಅಂತ ಕೂಗ್ಳೊಂಡು ನಮ್ಮ ರಾಷ್ಟ್ರಧ್ವಜ ಹಿಡ್ಕೊಂಡು ಹೋಗ್ತಿದ್ರೆ, ಆ ಕಡೆಯಿಂದ ಎಂಥಾ ಹಿಂಸೆ ಕೊಡ್ತಿದ್ರೂಂತ! ಲಾಠಿ ಬೀಸಿ ಶರೀರ ನಬ್ಚು ಗುಜ್ಜು ಆಗೋ ಹಾಗೆ ಹೊಡಿಯೋದು. ನೆತ್ತಿ ಕೂದಲು ಕೀಳೋದು. ಮೀಸೆ ಸುಡೋದು. ಹಲ್ಲು ಮುರಿಯೋದು, ಹೊಲಸು ಮಾತು, ಹೊಲಸು ಬೈಗಳು. ಥೂ-ಥೂ-