ಪುಟ:KELAVU SANNA KATHEGALU.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹಮಾಲ ಇಮಾಮ್‌‌ಸಾಬಿ

69

ಎಂಟಿರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿಯನ್ನೂ ಇದಿರುನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು...

ಧಡ್‌ ಧಡಾಲ್!

[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು ತುಣುಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹೆಸ್ರ ತೋಫುಗಳು ಏಕಕಾಲದಲ್ಲೇ ಗುಂಡಿನ ಮಳೆಗಳೆದಂತಹ್ ಸದ್ದು]

“ಆಕ್ಸಿಡೆಂಟ್!"

ಇಮಾಮ್‌ಸಾಬಿ ಹೌಹಾರಿ ಎದ್ದು ಬೊಬ್ಬಿಟ್ಟ:

“ಆಕ್ಸಿಡೆಂಟ್!"

ಬೆಂಕಿ ಬಿದ್ದ ಮನೆಯ ಎದುರು ನಿಂತು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್‌ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.

ಓಡುತ್ತ, ಏದುಸಿರು ಬಿಡುತ್ತ, ಅತ ಕೂಗಿ ಕೇಳಿದ:

"ಎಲ್ಲಿ ಏನಾಯ್ತು?"

ಕಿವಿಯಿಂದ ಧ್ವನಿ ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್‌ ಮಾಸ್ತರು, ಓಡಿಬರುತ್ತಲಿದ್ದ ಇಮಾನರ್‌ಸಾಬಿಯನ್ನು ತಡೆಯುತ್ತ ಅಂದರು:

“ಯಾಕಪ್ಪಾ? ಏನಿದು?”

ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್‌ಸಾಬಿಯ ಬಗೆಗೆ ಆಗಲೇ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತಿತ್ತು. ಮುಗುಳುನಗೆ ಮೂಡಿತ್ತು ಮುಖದ ಮೇಲೆ.

“ಆಕ್ಸಿಡೆಂಟ್‌ ಆಗಿಲ್ವ ಮಾಸ್ತರ್‌ಸಾಬ್‌?"

“ಮತ್ತೆ ಕನಸು ಬಿತ್ತೇನಪ್ಪ?”

ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟಿಗೆ ತಾಗಿ ನಿಂತಿತ್ತು ಮಾಲ್‌ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ ತುಸು ಗದ್ದಲ ಮಾಡಿದ್ದುವು.

ಅದೇ ಸದ್ದು-ಧಡ್‌ಧಡಾಲ್‌.

ಆಕ್ಸಿಡೆಂಟ್!

ನಾಚಿಕೆಯಿಂದ ಇಮಾಮ್‌ಸಾಬಿಯ ಮುಖ ಕೆಂಪೇರಿತು.

“ವಯಸ್ಸಾಗೋಯ್ತು ನಂಗೆ!” ಎಂದು ನುಡಿದು, ತಲೆ ತಗ್ಗಿಸಿ ನೆಲ