ಎದೆಗುಂಡಿಯ ಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲ ಬೆವತಿದ್ದುವು.
ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತ ಊರಿನಿಂತ ಬಂದಿದ್ದ ಹಲವರೊಡನೆ, ರಾತ್ರೆ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾವರ್‌ಸಾಬಿ ಹಿಂದಿರುಗಿದ.
ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:
“ಭಾರಿ ಸಂಪಾದನೆಯಾಗಿರ್‍ಬೇಕು ಇಮಾಮ್‌ಗೆ!”
ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದ್ಕು ಕಣ್ಣಿಗೆ ಕತ್ತಲು ಕವಿದಂತಾಯಿತು ಈತನಿಗೆ.
ಇವನು ಸ್ವರವೇರಿಸಿ ಅಂದಿದ್ದ:
"ಥೂ ನಿಮ್ಮ! ನೀವು ಮನುಷ್ಯರೊ ಮೃಗಗಳೊ?"
ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದ್ಹುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.
ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂ ನಡುವೆ ಸದಾಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನು ಕಾಡಿಸಿ ಪೀಡಿಸಿ ಅದೆಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು! ಎಷ್ಟೋ ಸಾರಿ ಯಶಸ್ವಿಗಳಾಗುತ್ತಿದ್ದರು. ಯಾರಾದರೂ ಗದರಿದರೆ ಜಗಳ ಕಾಯುತ್ತಿದ್ದರು. ಇಮಾಮ್‌ಸಾಬಿ ಮಾತ್ರ, ಅಷ್ಟು ಕೊಡಿ--ಇಷ್ಟು ಕೊಡಿ ಎಂದು ಯಾವತ್ತೂ ಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಪ್ರಶ್ನಿಸಿದರೆ, ಇಂತಿಷ್ಟು-ಎಂದು ನ್ಕಾಯಸಮ್ಮತವಾದುದನ್ನು ತಿಳಿಸುತ್ತಿದ್ದ....
ಮತ್ತೆ ಹಲ್ಲೋ! ಹಲ್ಲೋ! (ಫೋನಿನ ಖಣಖಣತ್ಯಾರ)
ನೌಕರಿ ಘಂಟಿ ಬಾರಿಸಿದ.
ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ. ಕೈಕಂಬ ಮಿಸುಕಿ ಸಿಗ್ನಲ್ ಬಿತ್ತು.
ಘಂಟಿಯ ಸಪ್ಸಳ ಇಮಾಮ್‌ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟವಾಗಿಯೇ. ಕೈಕಂಬ ಕಾಣಿಸುತ್ತಿದ್ದುದೂ ಮಸುಕು ಮಸುಕಾಗಿಯೇ. ಆದರೂ ಸಿಗ್ನಲ್ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.
ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇ ಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು-ಎಂದು ಛೀಗಳೆಯುತ್ತ ಇಮಾವರ್ ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ದೇಹದ ಭಾರ