ಇವರು ಈ ವಿಷಯವನ್ನೆತ್ತಿ ತಮ್ಮನ್ನು ಹಂಗಿಸುವುದಕ್ಕಾಗಿಯೇ ಬಂದವರೆಂದು ಲಿಂಗಮ್ಮನಿಗೆ ತಿಳಿಯದೇ ಇರಲಿಲ್ಲ. ಆದರೆ ಅದನ್ನು ತಪ್ಪಿಸಲು ಆ ಸಾತ್ವಿಕ ಗೃಹಿಣಿ ಅಶಕ್ತಳಾಗಿದ್ದಳು.
ಮತ್ತೆ ಹೇಳಿದರು ಬಂಗಾರಮ್ಮ : "ಆದರೂ.... ಆ ಮದುವೆಯಾಗದ ಮಗಳನ್ನು ಹೀಗೆ ರಾಜನಿಗೆ ಒಪ್ಪಿಸಲು ನಿಮಗೆ ಮನಸ್ಸು ಹೇಗೆ ಬಂತಮ್ಮ ! ರಾಜನಿಗೆ ಅಷ್ಟೊಂದು ಹೆದರಿಬಿಟ್ಟಿರಾ?"
ಲಿಂಗಮ್ಮನ ರಕ್ತ ಕುದಿಯಿತು ಕೋಪದಿಂದ. ಆದರೆ ಕೋಪಿಸಿಕೊಳ್ಳುವುದು ವ್ಯರ್ಥವೆಂಬುದನ್ನು ಮರುಕ್ಷಣವೇ ಅರಿತಳು. ಅನ್ನುವವರಿಗೆ ಆಡಿಕೊಳ್ಳುವವರಿಗೆ ಇಂತಹ ಒಂದು ಅವಕಾಶ ಸಿಕ್ಕಿದಂತಾಗಿತ್ತು. ಈ ಘಟನೆಯಿಂದ.
ಪಕ್ಕದಲ್ಲಿದ್ದ ಕಲ್ಯಾಣಮ್ಮನಿಗೆ ಇದನ್ನು ಸಹಿಸಲು ಆಗಲಿಲ್ಲ. ಅಸಹನೆಯಿಂದ ಕೇಳಿದಳು :
"ಬಂಗಾರಮ್ಮನವರೇ, ನಂಜಮ್ಮನವರೇ, ಈಗ ಅವರು ಪಡುತ್ತಿರುವ ದುಃಖವೇ ಸಾಕಾಗಿದೆ. ನೀವು ಅದರ ಮೇಲೆ ಮತ್ತೆ ಮತ್ತೆ ಮೆಣಸು ಅರೆಯುವುದು ಬೇಕಾಗಿಲ್ಲ. ಈಗ ನಾವು ಏನು ಹೇಳಿದರೂ ಅವರ ದುಃಖವೇ ಹೆಚ್ಚುತ್ತದೆ. ಏಳಿ ಹೋಗೋಣ ಎಂದು ತನ್ನನ್ನೂ ಜೊತೆಯಲ್ಲಿ ಸೇರಿಸಿಕೊಂಡಳು ಕಲ್ಯಾಣಮ್ಮ.
ಅನ್ಯರ ನಿಂದೆಯೇ ಅನ್ನಾಹಾರಗಳಂತೆ ಇದ್ದ ಅವರಿಗೆ ಈಗಾಗಲೇ ಸ್ವಲ್ಪ ಆಹಾರ ಸಿಕ್ಕಿದುದರಿಂದ ಕಲ್ಯಾಣಮ್ಮನ ಮಾತಿಗೆ ಬೆಲೆಕೊಟ್ಟು ಎದ್ದರು.
"ಇನ್ನೂ ಎಂತೆಂತಹ ಮಾತುಗಳನ್ನು ಕೇಳಬೇಕಾಗಿದೆಯೋ ಈ ಘಟನೆಯಿಂದ ಎಂದುಕೊಂಡಳು ಲಿಂಗಮ್ಮ.
ಇತ್ತ ಮಹಾದೇವಿಯು ಕುಳಿತ ಮೇನೆ ಅರಮನೆಯನ್ನು ಸಮೀಪಿಸುತ್ತಿತ್ತು. ವಸಂತಕನಾಗಲೇ ಕುದುರೆಯನ್ನು ಮುಂದೆ ಓಡಿಸಿ, ಅರಮನೆಯ ಮುಂದೆ ಮಹಾದೇವಿಯನ್ನು ಎದುರುಗೊಳ್ಳಲು ಸಿದ್ಧನಾಗಿದ್ದ. ಮಂತ್ರಿಗಳೇ ಮೊದಲಾದ ಪ್ರಮುಖರೆಲ್ಲರೂ ತಮ್ಮ ಭಾವೀ ಮಹಾರಾಣಿಯನ್ನು ಸ್ವಾಗತಿಸಲು ಕಾದು ನಿಂತಿದ್ದರು.
ಮೇನೆ ನಿಂತಿತು ; ಕೆಳಗಿಳಿಯಿತು. ಜೊತೆಯಲ್ಲಿಯೇ ನಡೆದು ಬರುತ್ತಿದ್ದ ಅಂತಃಪುರದ ಸ್ತ್ರೀಯರಲ್ಲಿ ಇಬ್ಬರು ಬಂದು ಮೇನೆಯ ಬಾಗಿಲನ್ನು ತೆರೆದರು. ಮಹಾದೇವಿ ಹೊರಗೆ ಬಂದಳು.
ಅವಳು ಹೊರಗೆ ಕಾಲಿಡುತ್ತಿದ್ದಂತೆಯೇ, ನಡೆಮಡಿಯನ್ನು ಹಾಸಿಕೊಂಡು ಹೋಗುವುದಕ್ಕಾಗಿ ನೇಮಕವಾಗಿದ್ದ ಸೇವಕರು ಸಿದ್ಧವಾಗಿದ್ದರು. ಅವರು ತಮ್ಮ
ಪುಟ:Kadaliya Karpoora.pdf/೧೦೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಕದಳಿಯ ಕರ್ಪೂರ