ಪುಟ:Kadaliya Karpoora.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪

ಕದಳಿಯ ಕರ್ಪೂರ

ಬಳಿ ಬಂದಿದ್ದೇನೆ. ನೀವು ಅದನ್ನು ಅರಿತು ಆ ಮಟ್ಟಕ್ಕೆ ನಿಮ್ಮ ಪ್ರೇಮವನ್ನು ತಿರುಗಿಸುವುದಾದರೆ ಮಾತ್ರ ದೈವಸಂಕಲ್ಪದಂತೆ ಕೆಲವು ಕಾಲ ನಿಮ್ಮ ಅರಮನೆಯಲ್ಲಿ ನಾನು ಇರಬಲ್ಲೆ.

``ಹೌದು, ಈ ಅರಮನೆಯಲ್ಲಿ ನೀನು ಇರಲೇಬೇಕು. ನೀನಿಲ್ಲದೆ ಈ ಅರಮನೆ ಸ್ಮಶಾನಕ್ಕೆ ಸಮ ನನಗೆ. - ಧ್ವನಿಯಲ್ಲಿ ಆಜ್ಞೆಯ ಠೀವಿ ಇರಲಿಲ್ಲ. ಬೇಡಿಕೆಯ ದೈನ್ಯತೆ ಇತ್ತು.

``ಹಾಗಾದರೆ ನಾನು ಹೇಳುವ ಷರತ್ತುಗಳಿಗೆ ನಿಮ್ಮ ಒಪ್ಪಿಗೆಯೇ? ಮತ್ತೆ ಮಹಾದೇವಿ ಕೇಳಿದಳು.

``ನೀನು ಹೇಳಿದ ಹಾಗೆ ಕೇಳುತ್ತೇನೆ. ನಿನ್ನ ಎಲ್ಲ ಷರತ್ತುಗಳಿಗೂ ಒಪ್ಪುತ್ತೇನೆ.

``ಅವು ಏನೆಂಬುದು ನಿಮಗೆ ಗೊತ್ತಿರಬೇಕಲ್ಲವೇ ? ನಿಮ್ಮ ಗೆಳಯರು ಎಲ್ಲವನ್ನೂ ಹೇಳಿರಬೇಕು. ಆದರೂ ನಾನೂ ಇನ್ನೊಮ್ಮೆ ಹೇಳುತ್ತೇನೆ ಕೇಳಿರಿ: ಮಾತು ಕೊಡುವ ಮುನ್ನ ಚೆನ್ನಾಗಿ ಆಲೋಚಿಸಿ ಎಂದು ಮಹಾದೇವಿ ತನ್ನ ಷರತ್ತುಗಳನ್ನು ಹೇಳತೊಡಗಿದಳು :

``ನನ್ನ ಮನೋಧರ್ಮಕ್ಕೆ ವಿರುದ್ಧವಾದ ಬಲಾತ್ಕಾರವನ್ನು ಮಾಡುವುದಿಲ್ಲವೆಂದು ಭರವಸೆ ಕೊಡಬೇಕು.

``ಅಗತ್ಯವಾಗಿ : ನಿನ್ನ ಮನಸ್ಸು ಕರಗಿದಾಗ ನನ್ನನ್ನು ಪ್ರೀತಿಸು. ಬಲಾತ್ಕಾರವನ್ನು ಮಾಡುವಷ್ಟು ಕ್ಷುದ್ರನಲ್ಲ ನಾನು. ಹೇಳಿದ ಕೌಶಿಕ.

``ನನ್ನ ಭಕ್ತಿಸಾಧನೆಗೆ ಅಡ್ಡಿಬರಬಾರದು. ಎರಡನೇ ಷರತ್ತನ್ನು ಹೇಳಿದಳು ಮಹಾದೇವಿ.

``ಖಂಡಿತವಾಗಿಯೂ ಇಲ್ಲ ; ನಿನ್ನ ಇಷ್ಟವಿರುವಂತೆ ನಿನ್ನ ಭಕ್ತಿ ಸಾಧನೆಯನ್ನು ಮುಂದುವರಿಸು ಆಶ್ವಾಸನವಿತ್ತ ಕೌಶಿಕ.

``ನೀವು ಭಕ್ತಿ ಸಾಧನೆಯ ಕಡೆಗೆ ಮನಸ್ಸು ಕೊಡಬೇಕು - ತನ್ನ ಮೂರನೆಯ ಷರತ್ತನ್ನು ಮುಂದಿಟ್ಟಳು ಮಹಾದೇವಿ. ಕೌಶಿಕ ಕ್ಷಣಕಾಲ ಆಲೋಚಿಸಿ ಹೇಳಿದ :

``ಅದನ್ನು ನಿರ್ಧಾರವಾಗಿ ಹೇಳಲಾರೆ, ಪ್ರಯತ್ನಿಸುತ್ತೇನೆ.

ಇದನ್ನು ಕೇಳಿ ಮಹಾದೇವಿಗೆ ಸಂತೋಷವಾಯಿತು. ಏಕೆಂದರೆ ರಾಜ ತಾನು ಹೇಳುತ್ತಿರುವ ಮಾತುಗಳನ್ನು, ಪರಿಪಾಲಿಸಬೇಕಾದ ಹೊಣೆಗಾರಿಕೆಯಿಂದ ಹೇಳುತ್ತಿದ್ದಾನೆಂದು ಅವನ ಈ ಮಾತಿನಿಂದ ತಿಳಿಯಿತು. ಹೇಳಿದಳು :

``ಹಾಗೆಯೇ ಆಗಲಿ, ಕೊಟ್ಟ ಮಾತುಗಳೆಲ್ಲಾ ನೆನಪಿನಲ್ಲಿರಲಿ. ಈ ನಿಮ್ಮ