ಪುಟ:Kadaliya Karpoora.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೧೦೭

``ನಿಮ್ಮ ರಾಜರು ಬಹಳ ರಸಿಕರಲ್ಲವೆ ? ಮಹಾದೇವಿ ಕೇಳಿದಳು.

``ಅದೇನೋ ತಾಯಿ, ನಾನರಿಯೆ. ಆದರೆ ಬಹಳ ಒಳ್ಳೆಯವರು. ಇಂತಹ ಮಹಾರಾಜರ ಬಳಿ ಸೇವಕರಾಗಿರುವುದೂ ಒಂದು ಪುಣ್ಯ ಎಂದು ಭಾವಿಸಿದ್ದೇವೆ.

``ಉದ್ಯಾನವನ್ನು ನೋಡಿಕೊಂಡು ಬರೋಣ, ಬರುತ್ತೀಯಾ? ತಾನು ಅವಳನ್ನು ಬಳಿಗೆ ಕರೆದ ಕಾರಣ ಸ್ಮರಿಸಿಕೊಂಡು ಕೇಳಿದಳು ಮಹಾದೇವಿ. ದೃಷ್ಟಿ ಉದ್ಯಾನದತ್ತ ತಿರುಗಿತು.

``ಖಂಡಿತವಾಗಿ, ಒಡತಿ. ತಮ್ಮ ಅಪ್ಪಣೆಯನ್ನು ಕಾಯುತ್ತಿದ್ದೇವೆ. ರಸವಂತಿ ವಿನಯಪೂರ್ವಕವಾಗಿ ಹೇಳಿದಳು. ಮಹಾದೇವಿ ಅವಳನ್ನು ಹತ್ತಿರಕ್ಕೆ ಕರೆಯುತ್ತಾ :

``ನನ್ನ ಗೆಳತಿಯಾಗಿ ಬಾ. ಸೇವಕಿಯಾಗಿ ಅಲ್ಲ.

``ತಮ್ಮ ಔದಾರ್ಯ ಬಹಳ ದೊಡ್ಡದು ತಾಯಿ ಎಂದು ರಸವಂತಿ ಹೇಳುತ್ತಿದ್ದಂತೆಯೇ ಮಹಾದೇವಿ ಮೆಟ್ಟಲುಗಳನ್ನು ಇಳಿಯತೊಡಗಿದಳು. ರಸವಂತಿ ಅವಳನ್ನು ಹಿಂಬಾಲಿಸಿದಳು. ಅನಂತರ ಉದ್ಯಾನವನಕ್ಕೆ ಹೋಗುವ ಮಾರ್ಗದತ್ತ ಮಹಾದೇವಿಯನ್ನು ಕರೆದೊಯ್ದಳು.

ಉದ್ಯಾನವನ ಮಹಾದೇವಿಯನ್ನು ಸ್ವಾಗತಿಸುವಂತೆ ಸಂಭ್ರಮದಿಂದ ಕುಣಿಯುತ್ತಾ ನಗುತ್ತಿತ್ತು. ಏರುತ್ತಿರುವ ಸೂರ್ಯನ ಕಿರಣಗಳು ಹೆಚ್ಚು ಹೆಚ್ಚು ಬಿಸಿಯಾಗುತ್ತಾ ಉದ್ಯಾನವನ್ನು ಮುಟ್ಟುತ್ತಿದ್ದರೂ ಹೂವುಗಳ ಕಾಂತಿ ಇನ್ನೂ ಬಾಡಿರಲಿಲ್ಲ.

ಅರಮನೆಯನ್ನು ಸುತ್ತಲೂ ಬಳಸಿಕೊಂಡು ಬಂದಿರುವಂತೆ ಉದ್ಯಾನವನ ಹಬ್ಬಿತ್ತು. ಪರಿಮಳ ಪ್ರವಾಹದ ಮಧ್ಯದಲ್ಲಿ ಸೌಂದರ್ಯದ ದ್ವೀಪದಂತೆ ಅರಮನೆ ಕಾಣಿಸಿತು.

ಅಂತಃಪುರಕ್ಕೆ ಸೇರಿದ ಈ ವಿಭಾಗದ ಉದ್ಯಾನವನವಂತೂ ರಾಜನ ಅಂತರಂಗಕ್ಕೆ ಸೇರಿದ ಪ್ರೇಮಮಯವಾದ ವಸ್ತುವಾಗಿತ್ತು. ರಸವಂತಿ ಹೇಳಿದಳು:

``ಇದು ನಮ ರಾಜರಿಗೆ ಪ್ರಿಯವಾದ ಉದ್ಯಾನವನ. ದಿನದಲ್ಲಿ ಕೊನೆಯ ಪಕ್ಷ ಒಂದೆರಡು ತಾಸುಗಳಾದರೂ ಇಲ್ಲಿ ಕಳೆಯುತ್ತಾರೆ ನಮ್ಮ ರಾಜರು.

ಉದ್ಯಾನವನದಲ್ಲಿ ಮುಂದೆ ಮುಂದೆ ಇವರ ಸೌಂದರ್ಯಯಾತ್ರೆ ಸಾಗಿತು. ರಸವಂತಿ ಎಲ್ಲವನ್ನು ತೋರಿಸುತ್ತಾ ವಿವರಿಸುತ್ತಾ ಉತ್ಸಾಹದಿಂದ ಕರೆದೊಯ್ಯುತ್ತಿದ್ದಳು. ಹೊಸ ಹೊಸ ಜಾತಿಯ ಹೂವುಗಳನ್ನು ತೋರಿಸಿದಳು; ಪರಿಮಳದ ಗಿಡಗಳನ್ನು ತೋರಿಸಿದಳು ; ಮಂಟಪಗಳನ್ನು ತೋರಿಸಿದಳು.