ಪುಟ:Kadaliya Karpoora.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೧೦೯

ಅವಳಲ್ಲಿ ಒಡತಿಗಿಂತ ಹೆಚ್ಚಾಗಿ ಗೆಳತಿಯನ್ನೇ ಕಂಡುಕೊಂಡಳು ರಸವಂತಿ.

ಮಹಾದೇವಿ ಕೇಳಿದಳು. ``ರಾಜರು ತುಂಬಾ ವಿಲಾಸಿಗಳೇ?

ಈ ಪ್ರಶ್ನೆ ರಸವಂತಿಯನ್ನು ಆಶ್ಚರ್ಯಗೊಳಿಸಿತು. ಮಹಾದೇವಿಯನ್ನು ಕ್ಷಣಕಾಲ ದಿಟ್ಟಿಸಿ ನೋಡಿದಳು ಮತ್ತು ಕೇಳಿದಳು :

``ಅಮ್ಮಾ ನಿಜವಾಗಿ ಹೇಳಿ, ತಾವು ನಮ್ಮ ರಾಜರನ್ನು ಮೆಚ್ಚಿ ಪ್ರೀತಿಸಿ ಬಂದಿಲ್ಲವೇ?

ಈ ಪ್ರಶ್ನೆಯಿಂದ ಮಹಾದೇವಿಗೆ ಆಶ್ಚರ್ಯವಾಯಿತು.

``ಇದು ನನ್ನ ಪ್ರಶ್ನೆಗೆ ಉತ್ತರವೇ?

``ಕ್ಷಮಿಸಬೇಕು, ನೀವು ರಾಜರನ್ನು ಕುರಿತು ಕೇಳಿದ ಪ್ರಶ್ನೆಯಿಂದ ಇದನ್ನು ನಾನು ಕೇಳುವಂತಾಯಿತು.

``ಇಲ್ಲ ರಸವಂತಿ, ರಾಜರನ್ನು ಪ್ರೀತಿಸಿ ನಾನು ಬಂದವಳಲ್ಲ. ನೀನು ಆಪ್ತಳೆಂದು ಭಾವಿಸಿ ಹೇಳುತ್ತೇನೆ. ರಾಜರನ್ನು ನಾನು ಮದುವೆಯಾಗುವವಳೂ ಅಲ್ಲ ಎಂದು ಇದುವರೆಗೆ ನಡೆದುದೆಲ್ಲವನ್ನೂ ಸಂಕ್ಷೇಪವಾಗಿ ರಸವಂತಿಗೆ ತಿಳಿಸಿದಳು. ಅರಮನೆಯಲ್ಲಿ ತನ್ನ ಅಂತರಂಗದ ದುಃಖವನ್ನು ಅರಿಯಬಲ್ಲ ಒಂದು ಜೀವಿಯನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮಹಾದೇವಿಗೆ ಅವಶ್ಯಕವಾಗಿತ್ತು.

ಮಹಾದೇವಿಯ ಮಾತುಗಳಲ್ಲಿ ರಸವಂತಿಗೆ ಎಷ್ಟು ಅರ್ಥವಾಯಿತೋ ! ಅಂತೂ ಏಕಾಗ್ರಚಿತ್ತದಿಂದ ಅವುಗಳನ್ನು ಕೇಳುತ್ತಿದ್ದಳು.

ಬಿಸಿಲು ಏರುತ್ತಿತ್ತು. ರಸವಂತಿ ಅದರತ್ತ ಗಮನವನ್ನು ಸೆಳೆಯುತ್ತಾ ಏಳುವ ಸೂಚನೆಯನ್ನು ಕೊಟ್ಟಳು.

ಇಬ್ಬರೂ ಎದ್ದು ಅರಮನೆಯ ಕಡೆಗೆ ನಡೆಯತೊಡಗಿದರು. ಅರಮನೆ ಸಮೀಪಿಸುತ್ತಿದ್ದಂತೆಯೇ ಮಹಾದೇವಿ ತಲೆಯೆತ್ತಿ ತಾನು ಇರಬೇಕಾದ ಅಂತಃಪುರದ ಮಹಡಿಯನ್ನು ನೋಡಿದಳು. ನೋಡಿ ಚಕಿತಳಾದಳು. ಮಹಡಿಯ ಮೇಲೆ ನಿಂತು ಕೌಶಿಕ ತನ್ನತ್ತಲೇ ದೃಷ್ಟಿಯನ್ನು ಹರಿಸಿದ್ದಾನೆ.

ಕೌಶಿಕ ಅಲ್ಲಿ ಎಷ್ಟೋ ಹೊತ್ತಿನಿಂದ ನಿಂತು ತನ್ನ ಕಣ್ಣುಗಳಿಗೆ ಹಬ್ಬವನ್ನು ಮಾಡಿಕೊಳ್ಳುತ್ತಿದ್ದ. ವಿವಿಧ ಭಂಗಿಗಳಲ್ಲಿ ಅವಳ ದೇಹಾಕೃತಿಯ ದೂರದ ನೋಟವನ್ನು ಕಾಣುತ್ತಿದ್ದ. ಉದ್ಯಾನವನದ ಹೂಗಳ ಮಧ್ಯದಲ್ಲಿ ಈ ಜಂಗಮ ಪುಷ್ಪ ಸಂಚರಿಸುತ್ತಿರುವುದನ್ನು ಕಂಡು ಪುಳಕಿತವಾಗುತ್ತಿತ್ತು ಆತನ ದೃಷ್ಟಿ.

ಮಹಾದೇವಿ ಹಿಂತಿರುಗಿ ಬರುವುದನ್ನು ನೋಡಿ ಮಹಡಿಯಿಂದಿಳಿದು