ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೨೦೩
ಅಪೂರ್ವವಾದ ಅನುಭವದಿಂದ ಬೆಳಗುತ್ತಿದ್ದವು. ಆ ಬೆಳಕಿನ ಭಾವವನ್ನು ಉಕ್ಕೇರಿಸುವಂಥ ಪ್ರಾರ್ಥನಾರೂಪವಾದ ವಚನಗಳನ್ನು ಕಿನ್ನರಿಬೊಮ್ಮಣ್ಣ ಮತ್ತು ಇತರ ಒಬ್ಬಿಬ್ಬರು ಶರಣರು ಸೇರಿ ಹಾಡಿದರು. ಅದರ ಅರ್ಥ ಸಂಪತ್ತಿನ ಗಂಭೀರತೆಯಲ್ಲಿ ಲೀನವಾಗಿ ಅಂದಿನ ಅನುಭಾವಗೋಷ್ಠಿ ಮುಕ್ತಾಯವಾಯಿತು.
●