ಪುಟ:Kadaliya Karpoora.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೨೫

ಧರ್ಮ ಸ್ವರೂಪ ಪ್ರಕಾಶನವೇ ಆಗಲೀ, ಯಾವ ವಿಷಯವಾದರೂ ಮಹಾದೇವಿಯ ಮನಸ್ಸನ್ನು ಸೆಳೆಯುತ್ತಿತ್ತು. ಅಚ್ಚಳಿಯದಪ್ರಭಾವವನ್ನು ಬೀರುವಂತಹ ವಚನಗಳನ್ನು ಹೇಳಿ ಸಭೆಯನ್ನು ಮುಗ್ಧಗೊಳಿಸುತ್ತಿದ್ದಳು. ಅಂತಹ ಒಂದೆರಡು ಸನ್ನಿವೇಶಗಳು ನೀಲಮ್ಮನ ಮುಂದೆ ಸುಳಿದವು :

ಸುಖ-ದುಃಖಗಳಾಗಲೀ ಸ್ತುತಿ-ನಿಂದೆಗಳಾಗಲೀ ಬಂದರೆ ಸಾಧಕ ಅವುಗಳಿಗೆ ಅಂಜದೆ ಜೀವನವನ್ನು ಎದುರಿಸಬೇಕೆಂಬ ಮಾತು ಒಮ್ಮೆ ಅನುಭವ ಮಂಟಪದಲ್ಲಿ ಬಂದಾಗ ಮಹಾದೇವಿ ಸುಂದರವಾದ ಈ ವಚನವನ್ನು ಹೇಳಿದ್ದಳು:

ಬೆಟ್ಟದ ಮೇಲೊಂದು ಮನೆಯ ಮಾಡಿ

ಮೃಗಗಳಿಗಂಜಿದೊಡೆಂತಯ್ಯ ?

ಸಮುದ್ರದ ತಡಿಯಲ್ಲಿ ಮನೆಯ ಮಾಡಿ,

ನೆರೆತೊರೆಗಳಿಗಂಜಿದೊಡೆಂತಯ್ಯ ?

ಸಂತೆಯೊಳಗೊಂದು ಮನೆಯ ಮಾಡಿ,

ಶಬ್ದಕ್ಕೆ ನಾಚಿದೊಡೆಂತಯ್ಯ ?

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ,

ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದೊಡೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಇನ್ನೊಂದು ದಿನ ಅನುಭವಮಂಟಪದ ವಿಷಯ, ಸಾಧಕನಿಗೆ ಅವಶ್ಯಕವಾದ ಗುಣಶೀಲಗಳ ಕಡೆ ತಿರುಗಿತ್ತು. ಒಬ್ಬೊಬ್ಬ ಶರಣರೂ ಅನೇಕ ಮಾತುಗಳನ್ನು ಹೇಳಿಕೊಂಡು ಬಂದರು.

ತೊರೆಯ ಮೀವಣ್ಣಗಳಿರಾ, ತೊರೆಯಿರೋ ಪರಧನವ,

ಪರದ್ರವ್ಯವ ಬಿಡದೆ ಹೋಗಿ ತೊರೆಯಲ್ಲಿ ಮಿಂದರೆ,

ಆ ತೊರೆಯೆಲ್ಲಾ ಬರುದೊರೆ ಕಂಡಯ್ಯ !

ಕಳವ ತೊರೆದು ಮಿಂದರೆ, ಒಲಿದು ಕೂಡಿಕೊಂಬ

ನಮ್ಮ ಕೂಡಲಸಂಗಮದೇವಾ

ಎಂದಿದ್ದರು ಬಸವಣ್ಣ. ನಂತರ ಮಹಾದೇವಿ ಎದ್ದು ನಿಂತು ಹೇಳಿದ್ದಳು:

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.

ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.

ಹದುಳಿಗರದಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ದೆರೆಯದವರಲ್ಲಿ ಧೂಪವನೊಲ್ಲೆಯಯ್ಯಾ ನೀನು.