ಪುಟ:Kadaliya Karpoora.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೮

ಕದಳಿಯ ಕರ್ಪೂರ

ಆಲಸ ಮನೋಧರ್ಮದ ಲಘುಜೀವಿಗಳಿಗೆ ತಾನು ದುರ್ಲಭನೆಂಬುದನ್ನು ಸಾರುವುದರ ಸಂಕೇತವಾಗಿಯೇ ಮಲ್ಲಿಕಾರ್ಜುನ ಈ ದುರ್ಗಮವಾದ ಕಾಡಿನ ಪರ್ವತ ಶ್ರೇಣಿಗಳ ಮಧ್ಯದಲ್ಲಿ ನೆಲಸಿದನೆಂಬುದನ್ನು ಘೋಷಿಸುವಂತೆ ತೋರುತ್ತಿತ್ತು ಶಿಖರದ ಹೊನ್ನಕಳಶ.

ಮತರ್ಯ್‌ಲೋಕದಿಂದ ಪಾರಾಗಿ ಇನ್ನಾವುದೋ ಲೋಕದಲ್ಲಿ ನಡೆಯುತ್ತಿರುವವಳಂತೆ ಮಹಾದೇವಿ ದೇವಾಲಯವನ್ನು ಪ್ರವೇಶಿಸಿದಳು. ಆಕೆ ಬಳಿಗೆ ಬರುತ್ತಿದ್ದಂತೆಯೇ ಕಿಕ್ಕಿರಿದು ನೆರೆದಿದ್ದ ಜನಸಮೂಹ ಆಕೆಗೆ ದಾರಿ ಮಾಡಿಕೊಡುತ್ತಿತ್ತು. ಅವಳ ತೇಜೋಮೂರ್ತಿಯನ್ನು ಸಮೀಪದಿಂದ ಕಂಡೊಡನೆಯೇ ಗೌರವದಿಂದ ನಮಸ್ಕರಿಸಿ ಸರಿದು ನಿಲ್ಲುವರು ಜನ.

ಪರಿಷೆಯ ನಾಯಕ, ಮಹಾದೇವಿಯನ್ನು ಕರೆದುಕೊಂಡು ದೇವಾಲಯದ ಒಂದನೇ ಎರಡನೇ ಆವರಣಗಳನ್ನು ದಾಟಿ, ಗರ್ಭಗೃಹದ ಬಳಿಗೆ ಬಂದ. ಚಿಕ್ಕದಾದ ಗರ್ಭಗೃಹದ ತುಂಬ ಜನ ಕಿಕ್ಕಿರಿದು ತುಂಬಿದ್ದರು. ನಾನು ಮುಂದೆ ತಾನು ಮುಂದೆಂದು ಜನಗಳು ನುಗ್ಗಿ ಮಲ್ಲಿಕಾರ್ಜುನನನ್ನು ಕೈಯಿಂದ ಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಅವರಿವರೆಂಬ ಯಾವ ಭೇದವೂ ಇಲ್ಲದೆ ಎಲ್ಲರಿಗೂ ಈ ಸಮಾನ ಅವಕಾಶವಿತ್ತು.

ಜನರೆಲ್ಲ ಹಿಂದೆ ಸರಿದು ಮಹಾದೇವಿಗೆ ಒಳಗೆ ಹೋಗಲು ಅವಕಾಶ ಮಾಡಿ ಕೊಟ್ಟರು. ಗರ್ಭಗೃಹವನ್ನು ಪ್ರವೇಶಿಸಿದಳು ಮಹಾದೇವಿ.

ಶ್ರೀಶೈಲದ ಚನ್ನಮಲ್ಲಿಕಾರ್ಜುನನ ಸಾಕ್ಷಾತ್ ಸನ್ನಿಧಿಯಲ್ಲಿ ಬಂದು ನಿಂತಿದ್ದಾಳೆ! ತನ್ನ ಪತಿ ಚನ್ನಮಲ್ಲಿಕಾರ್ಜುನನ ಹೃದಯಗಹ್ವರವನ್ನು ಹೊಕ್ಕಂತೆಯೇ ಅನಿಸಿತು ಆಕೆಗೆ. ಕಣ್ಣುಗಳಿಂದ ಆನಂದಬಾಷ್ಪಗಳು ಸುರಿಯತೊಡಗಿದ್ದುವು. ಮನಸ್ಸು ಅಂತರಂಗದ ಅರಿವನ್ನು ಆಶ್ರಯಿಸಿ ಸುಷುಪ್ತಿಯನ್ನು ಪಡೆದಂತೆ ತೋರಿತು. ಹಾಗೆಯೇ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಕುಸಿದು ಕುಳಿತಳು.

ಜನರೆಲ್ಲಾ ಸ್ತಬ್ಧರಾಗಿ ಮಹಾದೇವಿಯನ್ನು ನೋಡುತ್ತಿದ್ದರು. ಕ್ಷಣಕಾಲದ ನಂತರ ಮಹಾದೇವಿ ಎಚ್ಚತ್ತುಕೊಂಡವಳಂತೆ ಕಣ್ದೆರೆದಳು. ಕಣ್ಣುಗಳು ನಕ್ಷತ್ರದಂತೆ ಹೊಳೆಯುತ್ತಿದ್ದವು. ಜ್ಯೋತಿರ್ಲಿಂಗವನ್ನೇ ನೋಡತೊಡಗಿದ್ದಳು.

ಭವ್ಯವಾದ ಆಕಾರದ ದೊಡ್ಡ ಲಿಂಗವಲ್ಲ ಅದು. ನೆಲದಿಂದ ಸ್ವಲ್ಪ ಮಾತ್ರವೇ ಮೇಲೆದ್ದು ಒಂದು ಪಕ್ಕಕ್ಕೆ ಸ್ವಲ್ಪ ಓರೆಯಾದ ಚಿಕ್ಕಮೂರ್ತಿ. ಆದರೆ ಜ್ಯೋತಿರ್ಲಿಂಗವೆಂಬ ಮಾತು ಸಾರ್ಥಕವಾಗುವಂತೆ ಅದು ಹೊಳೆಯುತ್ತಿತ್ತು. ಮಹಾದೇವಿಗೆ ತನ್ನ ಅಂತರಂಗದಲ್ಲಿ ತೋರಿದ ಅಪೂರ್ವವಾದ ರೂಪವೇ