ಪುಟ:Kadaliya Karpoora.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪

ಕದಳಿಯ ಕರ್ಪೂರ

‘ಕದಳಿ’ಯೆಂಬ ಮಾತು ಬಂದೊಡನೆ ಮಹಾದೇವಿಯ ಕುತೂಹಲ ಸಿಡಿದು ನಿಂತಿತು. ಮಧ್ಯದಲ್ಲಿಯೇ ಪ್ರಶ್ನಿಸಿದಳು ಅರ್ಚಕನನ್ನು :

“ಕದಳಿಯ ವನ ಯಾವ ಕಡೆ ಇದೆ, ಸ್ವಾಮಿ ? ಅಲ್ಲಿಗೆ ಹೋಗಬೇಕೆಂದು ನಾನು ಬಹಳ ಕಾತುರಗೊಂಡು ಬಂದಿದ್ದೇನೆ.”

ಅರ್ಚಕರೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಪ್ರಧಾನ ಅರ್ಚಕ ಮತ್ತೆ ಹೇಳಿದ :

“ಅದು ಬಹಳ ಕಠಿಣವಾದ ಮಾರ್ಗ. ಶಂಕರಾಚಾರ್ಯರು ಮತ್ತು ಅದಕ್ಕೆ ಮೊದಲು ಆಂಜನೇಯ ಮೊದಲಾದವರು ಕೂಡ ತಪಸ್ಸು ಮಾಡಿದ ಸ್ಥಳ ಅದು ಎಂದು ಹೇಳುತ್ತಾರೆ. ಇದುವರೆಗೂ ಹೆಣ್ಣುಮಕ್ಕಳಾರೂ ಅಲ್ಲಿಗೆ ಹೋಗಿಲ್ಲ. ಬಹುಶಃ ಹೋಗಲಾರದಂತಹ ಮಾರ್ಗವೆಂದೆನಿಸುತ್ತದೆ.”

ಈ ಮಾತುಗಳಿಂದ ವಿಚಲಳಾಗದೆ ಹೇಳಿದಳು ಮಹಾದೇವಿ :

“ನಾನು ಅಲ್ಲಿಗೆ ಹೋಗಲೇಬೇಕೆಂಬ ದೃಢಸಂಕಲ್ಪದಿಂದ ಬಂದಿದ್ದೇನೆ. ಅದು ಎಲ್ಲಿ ಇರುವುದೆಂಬುದು ತೋರಿಸಿ ಉಪಕರಿಸಬೇಕು.”

“ಅಂತಹ ಬಲವತ್ತರವಾದ ಸಂಕಲ್ಪ ನಿಮ್ಮದಾದರೆ ಅದಕ್ಕೆ ನನ್ನ ಸಹಾಯವನ್ನು ನಾನು ಮಾಡುತ್ತೇನೆ. ಈ ಚುಂಚರಿಗೆ ಹೇಳಿದರೆ ಅದರ ಭಾರವನ್ನು ಅವರು ವಹಿಸಿಕೊಳ್ಳುತ್ತಾರೆ. ಆದರೆ ನೀವು ಮಾತ್ರ ಶ್ರಮವನ್ನು ಸಹಿಸಲು ಸಿದ್ಧರಾಗಬೇಕಾಗುತ್ತದೆ” ಹೇಳಿದ ಅರ್ಚಕ.

``ಈ ಶ್ರಮದಲ್ಲಿಯೇ ಇದೆ ನನ್ನ ಜೀವನದ ಸಂತೋಷ.” ಮಹಾದೇವಿ ಹೇಳಿದಳು.

ಅನಂತರ ಅರ್ಚಕ ಆ ಚುಂಚರ ಮುಖಂಡನ ಸಂಗಡ ಬಹಳ ಹೊತ್ತು ಮಾತನಾಡಿದ. ಕೊನೆಗೆ ತೃಪ್ತಿಯಿಂದ ಮಹಾದೇವಿಯತ್ತ ತಿರುಗಿ ಹೇಳಿದ :

“ನಿಮ್ಮ ಇಷ್ಟ ಕೈಗೊಡುತ್ತದೆ, ತಾಯಿ. ಇವರು ಎಲ್ಲ ಏರ್ಪಾಡುಗಳನ್ನೂ ಮಾಡಲು ಒಪ್ಪಿದ್ದಾರೆ. ಕದಳಿ ಬನದ ಬಳಿಯಲ್ಲಿಯೂ ಇವರ ಗುಡಿಸಲುಗಳಿವೆ. ಮಾರ್ಗಮಧ್ಯದಲ್ಲಿಯೂ ಒಂದೆರಡು ಕಡೆ ಇವರ ಹಳ್ಳಿಗಳು ಸಿಕ್ಕುತ್ತವೆ. ಅವರೆಲ್ಲರಿಗೂ ತಿಳಿಸಿ ಮಾರ್ಗವನ್ನು ತೋರಿಸುವ ಏರ್ಪಾಡು ಮಾಡುವುದಾಗಿ ಹೇಳಿದ್ದಾನೆ ಈತ.

ಈ ಹಾಸುಬಂಡೆ ಹತ್ತಾರು ಹೆಜ್ಜೆಗಳಷ್ಟು ದೂರ ಚಾಚಿ ಹಬ್ಬಿತ್ತು. ಮುಂದೆ ಇದ್ದಕ್ಕಿದ್ದಂತೆಯೆ ಅದು ಇಲ್ಲದಂತಾಗಿ ಆಳವಾದ ಕಣಿವೆಗೆ ದಾರಿ ಮಾಡಿಕೊಟ್ಟಿತ್ತು. ಬಂಡೆಯನ್ನು ನೇರವಾಗಿ ಕತ್ತರಿಸಿದಂತಾಗಿ ಕಣಿವೆಯ ಮಹಾಪ್ರಪಾತ